ಬದುಕು, ಭವಿಷ್ಯತ್ತಿಗೆ ಗುರಿ ಮುಖ್ಯ: ಸತ್ಯಂಪೇಟೆ

0
142

ಕಲಬುರಗಿ: ಬದುಕು ಹಾಗೂ ಭವಿಷ್ಯ ತ್ತಿಗೆ ಗುರಿ ಮುಖ್ಯ. ಆ ಗುರಿ ಗಾಳಿಗೆ ಚಲಿಸುವ ಮೋಡದಂತಿರಬಾರದು. ನಿರ್ಧಿಷ್ಟ, ನಿಖರವಾಗಿ ಚಲಿಸುವ ಗನ್ ನಂತೆ ಇರಬೇಕು ಎಂದು ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಜಿಲ್ಲೆಯ ಚಿಂಚೋಳಿಯ ಹೈಕ ಶಿಕ್ಷಣ ಸಂಸ್ಥೆಯ ಸಿ.ಬಿ. ಪಾಟೀಲ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ನಮ್ಮಲ್ಲಿರುವ ಆಸ್ತಿ, ಐಶ್ವರ್ಯ ವನ್ನು ಯಾರಾದರೂ ಕಳವು ಮಾಡಬಹುದು.‌ಆದರೆ ಜ್ಞಾನವನ್ನು ಮಾತ್ರ ಯಾರಿಂದ ಕದಿಯಲು ಸಾಧ್ಯವಿಲ್ಲ. ಜ್ಞಾನ ವೆಂಬುದು ನಾವು ಸಂಪಾದಿಸುವ ನಿಜವಾದ ಸಂಪತ್ತು ಎಂದು ತಿಳಿಸಿದರು.

Contact Your\'s Advertisement; 9902492681

ಅಧ್ತಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.‌ಸಂಗಣ್ಣ ಹೊಸಮನಿ ಮಾತನಾಡಿ, ವಿದ್ಯಾರ್ಥಿಗಳು ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಉಳಿಸಿಕೊಂಡು ಮುಂದೆ ಬರಬೇಕು ಎಂದು ಕರೆ ನೀಡಿದರು.

ನಿವೃತ್ತ ಗ್ರಂಥ ಪಾಲಕ ಕಲ್ಲಪ್ಪ ತೇಲಿ ಮುಖ್ಯ ಅತಿಥಿಗಳಾಗಿದ್ದರು. ವಿದ್ಯಾರ್ಥಿ ಸಂಘದ ಸಲಹೆಗಾರ ಪ್ರೊ. ಕಾಶಿನಾಥ ಹುಣಜೆ, ಡಾ.‌ಸಿ.ಎ. ಕಲಬುರಗಿ ವೇದಿಕೆಯಲ್ಲಿ ಇದ್ದರು.

ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕ್ರತಿಕ ಹಾಗೂ ಕ್ರೀಡಾ ಕ್ಷೇತ್ರದ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ದೀಪಾ ಕಟ್ಟಿ  ನಿರೂಪಿಸಿದರು. ವಿಜಯಲಕ್ಷ್ಮಿ  ಪ್ರಾರ್ಥಿಸಿದರು.‌ ಡಾ. ಲಕ್ಷ್ಮಣ ತೇಲ್ಕರ್ ಸ್ವಾಗತಿಸಿದರು. ಡಾ.ಶ್ರೀಶೈಲ ನಾಗರಾಳ ಪರಿಚಿಸಿದರು. ಡಾ. ಮಾಣಿಕಮ್ಮ ಸುಲ್ತಾನಪುರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here