ಸುರಪುರದಲ್ಲಿ ಅಧ್ಧೂರಿ ರಂಜಾನ್ ಹಬ್ಬ ಆಚರಣೆ

0
238

ಸುರಪುರ: ನಗರದಲ್ಲಿ ಮುಸ್ಲಿಂ ಬಾಂಧವರು ಅಧ್ಧೂರಿಯಾಗಿ ರಂಜಾನ್ ಹಬ್ಬ ಆಚರಣೆ ಮಾಡಿದರು.ಒಂದು ತಿಂಗಳ ಕಾಲ ಅಲ್ಲಾನಿಗಾಗಿ ಉಪವಾಸ ಆಚರಿಸಿ,ಬುಧವಾರ ರಮಜಾನ್ ಹಬ್ಬದ ಅಂಗವಾಗಿ ಉಪವಸ ಅಂತ್ಯಗೊಳಿಸಿ ಈದ್ ಉಲ್ ಫಿರಾಸತ್ ಆಚರಿಸಿ ಸಾಮೂಹಿಕ ಪ್ರಾರ್ಥನೆ ನಡೆಸದಿರು.

ನಗರದ ಸುರಪುರ,ರಂಗಂಪೇಟೆ,ತಿಮ್ಮಾಪುರ ಮತ್ತಿತರೆಡೆಯ ಮುಸ್ಲಿಂ ಬಾಂಧವರು ಬೆಳಿಗ್ಗೆ ಹೊಸ ಬಟ್ಟೆಗಳ ಧರಿಸಿ ಮಸೀದಿಗಳಲ್ಲಿ ಜಮಾವಣೆಗೊಂಡು ನಂತರ ತಂಡೋಪ ತಂಡವಾಗಿ ಇದ್ಗಾ ಮೈದಾನದ ಕಡೆಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಇದಕ್ಕು ಮೊದಲು ಐತಿಹಾಸಿಕವಾಗಿ ನಡೆದುಕೊಂಡು ಬಂದ ಸಾಂಪ್ರದಾಯಿಕ ಆಚರಣೆಯಂತೆ ನಗರದ ದರಬಾರದಿಂದ ಇದ್ಗಾ ಮೈದಾನದ ವರೆಗೆ ಮುಸ್ಲಿಂ ಧಾರ್ಮಿಕ ಗುರುಗಳಾದ ಸೈಯದ್ ಪಾಷಾ ಖಾದ್ರಿಯವರನ್ನು ಅಡ್ಡ ಪಲ್ಲಕ್ಕಿಯಲ್ಲಿ ಇದ್ಗಾ ಮೈದಾನದ ವರೆಗೆ ಕರೆ ತಂದು ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ,ನಂತರ ಗುರುಗಳನ್ನು ಮೆರವಣಿಗೆಯ ಮೂಲಕ ಅವರ ಮನೆಗೆ ತಲುಪಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಉಸ್ತಾದ ವಜಹತ್ ಹುಸೇನ್,ಖಲೀಲ ಅಹ್ಮದ ಅರಕೇರಿ,ಅಹ್ಮದ ಪಠಾಣ,ಆರೀಫ್ ಹುಸೇನ, ಅನ್ವರ ಜಮಾದಾರ,ಮಹ್ಮದ ಮೌಲ ಸೌದಾಗರ,ಆಸೀಫ್,ಅಬೀದ್ ಹುಸೇನ,ಎಕ್ಬಾಲ್ ವರ್ತಿ,ಸಲಿಂ ನಗನೂರಿ,ಚಾಂದ್ಪಾಶ ಕುಂಬಾರಪೇಟೆ ಸೇರಿದಂತೆ ಸಹಸ್ರಾರು ಜನರಿದ್ದರು.

ರಂಗಂಪೇಟೆಯ ನೂರಾರು ಸಂಖ್ಯೆಯ ಮುಸ್ಲಿಂ ಬಾಂಧವರು ನಗರದ ಹಸನಾಪುರ ಬಳಿಯ ಇದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಅಬ್ದುಲ್ ಗಫೂರ ನಗನೂರಿ,ಶೇಖ ಮಹಿಬೂಬ ಒಂಟಿ,ಅಪ್ಸರಾ ಹುಸೇನ, ಖಾಲೀದ್ ಅಹ್ಮದ ತಾಳಿಕೋಟೆ ಸೇರಿದಂತೆ ನೂರಾರು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here