ತಾಯಿ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿದ ಪಿಎಸ್ಐ ಸಂಗಮೇಶ ಅಂಗಡಿ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

0
224

ಕಲಬುರಗಿ: ಭೀಮಾ ನದಿ ತುಂಬಿ ಹರಿಯುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಪಿಎಸ್ಐ ಸಂಗಮೇಶ್ ಅಂಗಡಿಯವರು ತಾಯಿ ಮಗುವನ್ನು ರಕ್ಷಿಸಿ ದಡಕ್ಕೆ ಸೇರಿಸಿದರು.

ಭೀಮಾನದಿಯ ಭಾರಿ ಪ್ರವಾಹದ ಹಿನ್ನೆಲೆಯಲ್ಲಿ ತಾಲೂಕಿನ ನದಿ ಪಕ್ಕದಲ್ಲಿರುವ ಗ್ರಾಮಗಳು ಮುಳುಗಡೆಯಾಗಿವೆ ಇಂತಹ ಗ್ರಾಮದಲ್ಲಿರುವ ಸಾರ್ವಜನಿಕರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಪೊಲೀಸ್ ಸಿಬ್ಬಂದಿಗಳು ಕರ್ತವ್ಯನಿಷ್ಠೆಯಿಂದ ಕಾರ್ಯ ಮಾಡುತ್ತಿದ್ದಾರೆ.

Contact Your\'s Advertisement; 9902492681

ಇದಕ್ಕೆ ತಾಜಾ ಉದಾಹರಣೆ ಎಂದರೆ ಜೇವರ್ಗಿ ತಾಲೂಕನ ಕ್ರೈಂ ವಿಭಾಗದ ಪಿಎಸ್ಐ ಸಂಗಮೇಶ್ ಅಂಗಡಿಯವರು ಕೋನ ಹಿಪ್ಪರಗಾ ಗ್ರಾಮದ ಪುಟ್ಟ ಮಗು ಮತ್ತು ತಾಯಿಯನ್ನು ದಡಕ್ಕೆ ಸೇರಿಸುವ ಕೆಲಸ ಮಾಡುತ್ತಿದ್ದರು. ಈ ಕಾರ್ಯದಿಂದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಂಗಮೇಶ್ ಅಂಗಡಿಯವರು ಮಗುವನ್ನು ಎತ್ತಿಕೊಂಡು ತಾಯಿ ಮತ್ತು ಅವರ ಸಂಬಂಧಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ದೃಶ್ಯ.

ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕೆಂದು ಸರ್ಕಲ್ ಇನ್ಸ್ಪೆಕ್ಟರ್ ರಮೇಶ್ ರೊಟ್ಟಿ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

ನಿಮ್ಮ ಸೇವೆಯಲ್ಲಿ ನಾವು ಸದಾ ಸಿದ್ಧರಾಗಿದ್ದೇವೆ ಅದಕ್ಕಾಗಿ ನಿಮ್ಮ ಸುರಕ್ಷತೆಗಾಗಿ ನಮ್ಮ ಎಲ್ಲಾ ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ ಆದಕಾರಣ ದಯವಿಟ್ಟು ನದಿ ಅಕ್ಕಪಕ್ಕದಲ್ಲಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಹೋಗಬೇಕು ಎಂದು ಮನವಿ ಮಾಡಿಕೊಂಡರು.

ಕ್ರೈಂ ವಿಭಾಗದ ಪಿಎಸ್ಐ ಸಂಗಮೇಶ್ ಅಂಗಡಿಯವರ ಕಾರ್ಯಕ್ಕೆ ಜೇವರ್ಗಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಮೇಶ್ ರೊಟ್ಟಿ ಹಾಗೂ ಎಸ್ಪಿ. ಡಾ. ಸೀಮಿ ಮರಿಯಮ್. ಜಾರ್ಜ್ ಅವರು ಸಂಗಮೇಶ್ ಅಂಗಡಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here