ಶ್ರೀಮಂತರ ಪರವಿರುವ ಮೋದಿಯನ್ನು ತಿರಸ್ಕರಿಸಿ, ಬಡವರ ಪರವಿರುವ ರಾಹುಲ್ ಗಾಂಧಿಯನ್ನು ಪುರಸ್ಕರಿಸಿ:  ಖರ್ಗೆ.

0
103

ಕಲಬುರಗಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಪ್ರಭುಗಳು. ಸಂವಿಧಾನದ ಬದ್ದ ಹಕ್ಕುಗಳ ಅಡಿಯಲ್ಲಿ ಪ್ರತಿಯೊಬ್ಬರು ಸಮಾನ ಅವಕಾಶಗಳನ್ನು ಪಡೆದುಕೊಳ್ಳಬಹುದಾಗಿದೆ. ಆದರೆ, ಸಂವಿಧಾನದದ ಮೂಲತತ್ವಗಳಿಗೆ ತೀಲಾಂಜಲಿ ಇಡುತ್ತಿರುವ ಬಿಜೆಪಿ ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಿದೆ ಎಂದು  ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಅವರು ಅಫಜಲಪೂರ ತಾಲೂಕಿನ ಅತನೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅಡ್ರೆಸ್ ಇಲ್ಲದ ಬಿಜೆಪಿ ಪಕ್ಷ ಈಗ ದೇಶಭಕ್ತಿಯ ಪಾಠ ಮಾಡುತ್ತಿದೆ, ಸುಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರವಾಧಿಯಲ್ಲಿಯೂ ಅದೇ ಸುಳ್ಳನ್ನು ಮುಂದುವರೆಸಿ ಈಗ ಮತ್ತದೇ ಸುಳ್ಳುಗಳನ್ನು ಚುನಾವಣಾ ಭಾಷಣದಲ್ಲಿ ಬಳಸುತ್ತಿದ್ದಾರೆ. ಇವರಿಂದ ಭಾರತದ 130 ಕೋಟಿ ಜನರ ಉದ್ದಾರ  ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Contact Your\'s Advertisement; 9902492681

ಭಾವನಾತ್ಮಕ ವಿಷಯಗಳನ್ನು ಚುನಾವಣೆ ವಿಷಯಗಳನ್ನಾಗಿ ಮಾಡಿಕೊಂಡು ಜನರಿಗೆ ದಾರಿತಪ್ಪಿಸುವ ನಿರಂತರ ಪ್ರಯತ್ನ ಮಾಡುತ್ತಿರುವ ಮೋದಿ ದೇಶದ ರಕ್ಷಣೆ ತಾನೇ ಮಾಡುತ್ತಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.

ರೈತರ ಉದ್ದಾರ ಮಾಡುವುದಾಗಿ ಮಾತು ನೀಡಿದ್ದ ಮೋದಿ ಅದಾನಿ ಅವರಂತ ಶ್ರೀಮಂತರ ರಕ್ಷಣೆಗೆ ಮುಂದಾಗುವ ಮೂಲಕ ತಾವು ಬಂಡವಾಳಶಾಯಿಗಳ ಪರ ಎಂದು ನಿರೂಪಿಸಿದ್ದಾರೆ.  ” ರೂ 2,77,000 ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡಲಾಗಿದೆ. ಜೊತೆಗೆ  ರೂ 3,75,000 ಕೋಟಿ ಸಾಲ ಪಡೆದುಕೊಂಡವರು ವಾಪಸ್ ನೀಡದೆ ವಿದೇಶಕ್ಕೆ ಪರಾರಿಯಾಗಿದ್ದಾರೆ.ಆದರೂ ಮೋದಿ ಈ ಬಗ್ಗೆ ನಿಷ್ಠುರ ಹಾಗೂ ಕಠೋರ ಕ್ರಮಕೈಗೊಂಡಿಲ್ಲ ಎಂದ ಖರ್ಗೆ, ಜನರ ಪರ ಚಿಂತನೆಗಳನ್ನು ಹೊಂದಿರುವ ರಾಹುಲ್ ಗಾಂಧಿ ಅವರು ದೇಶದ 25 ಕೋಟಿ ಜನರಿಗೆ ವಾರ್ಷಿಕ ರೂ 72,000 ಧನ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ‌. ಹಾಗಾಗಿ ಶ್ರೀಮಂತರ ಪರ ಇರುವ ಮೋದಿಯನ್ನು ತಿರಸ್ಕರಿಸಿ ಬಡವರ ಪರ ಇರುವ ರಾಹುಲ್ ಗಾಂಧಿಯವರನ್ನು ಪುರಸ್ಕರಿಸಿ ಎಂದು ಕರೆ ನೀಡಿದರು.

ನಾನು ಕೈಗೊಂಡ ಅಭಿವೃದ್ದಿ ಕೆಲಸಗಳಿಗೆ ಕೂಲಿ ಕೇಳುತ್ತಿದ್ದೇನೆ  ಎಂದ ಅವರು ನಾನು ಮಾಡಿದ ಕೆಲಸಕ್ಕೆ ಕೂಲಿ ರೂಪದಲ್ಲಿ ಮತಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ಮನವಿ ಮಾಡಿದರು. ವೇದಿಕೆಯ ಮೇಲೆ ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ, ಶಾಸಕ ಎಂ.ವೈ ಪಾಟೀಲ್, ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here