ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಬಂಧನ: ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ ಟಿಕೆ

0
383

ಮುಂಬೈ: 2018ರಲ್ಲಿ ಅರ್ನಾಬನ ಸ್ಟುಡಿಯೋದ ಇಂಟೀರಿಯರ್ ಡಿಸೈನ್ ಮಾಡಿಕೊಟ್ಟ ರೂ.5.40 ಕೋಟಿ ಕೊಡದೆ, ಸತಾಯಿಸುತ್ತಿದ್ದಾನೆಂದು ಮುಂಬಯಿ ಪೊಲೀಸರಿಗೆ ಈ ಹಿಂದೆ ಹಲವು ಬಾರಿ ದೂರು ನೀಡಿದರು. ಆದರೆ ಈ ಹಿಂದೆ ಯಾವುದೇ ಪ್ರಯೋಜನ ವಾಗದೆ ಅರ್ನಾಬನ ದ್ರೋಹದಿಂದ ನೊಂದ ಅನ್ವಯ್ ನಾಯಕ್ ಮತ್ತು ಅವರ ತಾಯಿ ಆತ್ಮಹತ್ಯೆಗೆ ಶರಣಾದರು.

ಕಳೆದ ಮೇ 2020ರಲ್ಲಿ ಅನ್ವಯ್ ನಾಯಕ್ ಮಗಳು ಆದ್ಞಾ ನಾಯಕ್ ಕೊಟ್ಟ ಹೊಸ ದೂರಿನ ಮೇರೆಗೆ ಮರು ತನಿಖೆ ನಡೆಸಿದ ಮುಂಬೈ ಪೊಲೀಸರು ಅರ್ನಾಬ್ ಗೋಸ್ವಾಮಿ ಮತ್ತು ಇನ್ನಿಬ್ಬರು ಬಾಕಿ ಪಾವತಿಸದ ಆರೋಪದ ಮೇಲೆ 53 ವರ್ಷದ ಇಂಟೀರಿಯರ್ ಡಿಸೈನರ್ ಮತ್ತು ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಮರುಪರಿಶೀಲಿಸುವಂತೆ ಸಿಐಡಿಗೆ ಆದೇಶಿಸಲಾಯಿತು.

Contact Your\'s Advertisement; 9902492681

ಈ ಪ್ರಕರಣದಲ್ಲಿ ಇಂದು ಬೆಳಿಗ್ಗೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಸದ್ಯ ಮುಂಬೈ ಪೊಲೀಸರು ಅವರನ್ನು ರಾಯ್ಗಡ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಅಲಿಬಾಗ್‌ನಲ್ಲಿ ಹಳೆಯ ಪ್ರಕರಣವೊಂದರಲ್ಲಿ ಅರ್ನಾಬ್‌ನನ್ನು ಬಂಧಿಸಲಾಗಿದೆ. ಮೇ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರ ಪ್ರಕರಣದ ಕುರಿತು ಸಿಐಡಿ ತನಿಖೆಗೆ ಆದೇಶಿಸಲಾಗಿತ್ತು.

ಆದರೆ ರಾಜ್ಯದಲ್ಲಿ ಇತ್ತೀಚಿಗೆ ಬ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿವಾಹಿನಿ ವರದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ರಸಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. ಆದರೆ ಇಂದು ರಿಪಬ್ಲಿಕ್ ಸುದ್ದಿಗಳನ್ನು ವರದಿ ಮಾಡುತ್ತಿರುವ ರಾಜ್ಯದ ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ ಸಮಾಜಿಕ ಜಾಲಾತಾಣದಲ್ಲಿ ಟಿಕೆ ಪ್ರಾರಂಭವಾಗಿದೆ.

ರಾಜ್ಯದ ಸುದ್ದಿವಾಹಿನಿ ಪರ ನಿಲ್ಲದ ಮಾಧ್ಯಮಗಳು ಇಂದು ಸರಿ ತಪ್ಪುಗಳ ಬಗ್ಗೆ ವರದಿ ಮಾಡುತ್ತಿರುವ ಕೆಲ ಸುದ್ದಿವಾಹಿನಿಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here