ಕಲಬುರಗಿ: ಬಿದ್ದಾಪೂರ ಕಾಲೋನಿಯಲ್ಲಿ ಬರುವ ನಂಜನಗೂಡು ಶ್ರೀ ರಾಘವೇಂದ್ರ ಸಾಮಿಗಳವರ ಮಠದಲ್ಲಿ ನೂತನವಾಗಿ ಜಿಡಿಎ ಅಧ್ಯಕ್ಷ ದಯಾಘನ ಧಾರವಾಡಕರ್, ನಗರ ಜಿಲ್ಲೆ ಯುವ ಮೋರ್ಚಾದ ನೂತನ ಅಧ್ಯಕ್ಷ ಶ್ರೀನಿವಾಸ ದೇಸಾಯಿ ಹಾಗೂ ಪ್ರಲ್ಹಾದ ಪೂಜಾರಿ ಇವರನ್ನು ನವಲಿ ಕೃಷ್ಣಚಾರ್ಯ ಅವರು ಸನ್ಮಾನಿಸಿದರು.
ಗುರುರಾಜಚಾರ್ಯ ಕನಕಗಿರಿ, ಗೋಪಾಲಕೃಷ್ಣ ಸರಡಗಿ, ವೇಣುಗೋಪಾಲ ಕುಲಕರ್ಣಿ, ಪಾಂಡುರಂಗರಾವ ಕುಲಕರ್ಣಿ, ಅರುಣ ಕುಲಕರ್ಣಿ, ಜಿ.ಕೆ ಜೋಶಿ, ಮರಳಿಧರ ಪೂಜಾರಿ ಇದ್ದರು.