ಕಲಬುರಗಿ: ಜನಪರ ಹೋರಾಟಗಾರ, ರೈತ ಹಾಗೂ ಕಾರ್ಮಿಕ ಮುಖಂಡ ದಿ. ಕಾಂ. ಮಾರುತಿ ಮಾನಪಡೆ ಅವರ ಮನೆಗೆ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಹೋರಾಟಗಾರರಾಗಿದ್ದ ಮಾರುತಿ ಮಾನಪಡೆ ಅವರು ದುಡಿಯುವ ವರ್ಗದ, ರೈತರ ಪರವಾಗಿ ಮಾಡುತ್ತಿದ್ದ ಚಳುವಳಿಗಳು ಅವಿಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ಮಾರುತಿ ಮಾನಪಡೆ ಅವರ ಪತ್ನಿ ರಾಧಾಬಾಯಿ ಮಾನಪಡೆ, ಮಕ್ಕಳಾದ ಸುನೀಲ ಮಾನಪಡೆ, ರಾಕೇಶ ಮಾನಪಡೆ, ಡಿ.ಹೆಚ್.ಎಸ್. ಮುಖಂಡ ಸುಧಾಮ ಧನ್ನಿ, ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ಸಿದ್ದು ಪಾಳಾ ಇದ್ದರು.