ಪೂಜ್ಯ ಅಪ್ಪಾಜಿ, ಅವ್ವಾಜಿ ಮತ್ತು ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಹುಟ್ಟುಹಬ್ಬದ ಯೋಜನೆ

0
87

ಕಲಬುರಗಿ; ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆ ಹಾಗೂ ಶರಣಬಸವ ವಿಶ್ವವಿದ್ಯಾಲಯ ಸಹಯೋಗದಲ್ಲಿ ಶರಣಬಸವ ವಿಶ್ವವಿದ್ಯಾಲಯ ಕುಲಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ, ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಮತ್ತು ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾರವರ ಹುಟ್ಟುಹಬ್ಬವನ್ನು ಭವ್ಯವಾಗಿ ಆಚರಿಸುವ ದೃಷ್ಠಿಯಿಂದ ಆರು ದಿನಗಳ ಕಾಲ ರಾಷ್ಟ್ರೀಯ ವೆಬ್‌ನಾರ್ ಹಾಗೂ ಮುಕ್ತಾಯ ದಿನದಂದು ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ವಿವಿಧ ಕ್ಷೇತ್ರಗಳಲ್ಲಿ ಡಾ. ಅಪ್ಪಾಜಿ ಮಾಡಿದ ಸಾಧನೆ ಹಾಗೂ ಕೊಡುಗೆ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ.

ಪೂಜ್ಯ ಡಾ. ಶರಬಸವಪ್ಪ ಅಪ್ಪಾರವರg ೮೬ನೇ ಜನ್ಮದಿನ ನ.೧೪ರಂದು, ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರ ಜನ್ಮದಿನ ನ.೨೨ ರಂದು ಹಾಗೂ ಚಿ.ದೊಡ್ಡಪ್ಪ ಅಪ್ಪಾರವರ ಜನ್ಮದಿನ ನ.೧ರಂದು ಆಚರಿಸಲಾಗುತ್ತಿತ್ತು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳು ಪತ್ರಿವರ್ಷ ಕಾರ್ಯಗಾರ, ವಿಚಾರಸಂಕಿರಣ ಮುಂತಾದವುಗಳು ಆಯೋಜಿಸುವ ಮೂಲಕ ನವೆಂಬರ್ ತಿಂಗಳಾದ್ಯಂತ ಮೂರೂ ಜನ್ಮದಿನಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನರು ಹಾಗೂ ಉತ್ತರ ಕರ್ನಾಟಕದಲ್ಲಿ ಉಂಟಾದ ಭಾರಿ ಗಾತ್ರದ ಮಳೆಯ ಪ್ರವಾಹದಿಂದಾಗಿ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ ಹೀಗಾಗಿ ಹುಟ್ಟು ಹಬ್ಬದ ಆಚರಣೆಯನ್ನು ಈ ವರ್ಷ ಅಧೀನಗೊಳಿಸಲಾಗಿದೆ.

Contact Your\'s Advertisement; 9902492681

ಪ್ರಚಲಿತದಲ್ಲಿರುವ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಪ್ರವಾಹ ಪೀಡಿತ ಜನರ ಸಂಕಷ್ಟ ಕಂಡು ಡಾ. ಅಪ್ಪಾಜಿ ಮತ್ತು ಡಾ.ಅವ್ವಾಜಿ ತಮ್ಮ ಜೋತೆ ಈ ವ? ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಜನ್ಮದಿನವನ್ನೂ ಆಚರಿಸುವುದಿಲ್ಲ ಎಂದು ಘೋಷಿಸಿದ್ದರು.

ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಾ. ಅಪ್ಪಾಜಿ, ಡಾ.ಅವ್ವಾಜಿ ಮತ್ತು ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಜನ್ಮದಿನಗಳನ್ನು ಸೆಪ್ಟೆಂಬರ್ ೦೮ ರಿಂದ ೧೩ ರವರೆಗೆ ವಿವಿಧ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ವೆಬ್‌ನಾರ್‌ಗಳನ್ನು ಆಯೋಜಿಸುವ ಮೂಲಕ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.

ಸೆಪ್ಟೆಂಬರ್ ೧೩ ರಂದು ಮಹತ್ವದ ಕೃತಿಗಳಾದ ಡಾ.ಶಿವರಾಜ ಶಾಸ್ತ್ರಿ ಹೆರೂರ ರವರ ಶ್ರೀ ಶರಣಬಸವ ಮಹಾದಾಸೋಹ ದರ್ಶನಂ ಮಹಾಕಾವ್ಯ ಮತ್ತು ಡಾ. ನೀಲಾಂಬಿಕಾ ಶೇರಿಕಾರ ಅವರ ಮಹಾಪ್ರಸಾದಿ, ಈ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು. ಈ ಸಂದರ್ಭದಲ್ಲಿ ವಿಶೇ? ಉಪನ್ಯಾಸಗಳನ್ನು ನಡೆಸಲಾಗುತ್ತದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here