ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೋವಿಡ್-೧೯ ತಪಾಸಣಾ ಶಿಬಿರ

0
73

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೋವಿಡ್-೧೯ ತಪಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಸಂಸ್ಥೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ತಪಾಸಣೆಯಲ್ಲಿ ಭಾಗವಹಿಸಿದರು.

ಕೊರೊನಾ ತಪಾಸಣಾ ಶಿಬಿರವನ್ನು ಡಾ. ರವೀಂದ್ರ ಕುಮಾರ ನಾಗರಾಳೆ ಪ್ರಾಂಶುಪಾಲರು ವೀರಪ್ಪ ನಿಷ್ಠಿ ತಾಂತ್ರಿಕ ಮಾಹಾವಿದ್ಯಾಲಯ ಸುರಪುರ ರವರು ಉದ್ಘಾಟಿಸಿದರು.ಶಿಬಿರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ತಾಲ್ಲೂಕು ನೋಡಲ್ ಆಫೀಸರ್ ಡಾ. ಓಂ ಪ್ರಕಾಶ ಅಂಬುರೆ, ಡಾ. ಹರ್ಷವರ್ಧನ ದಂತ ವೈದ್ಯರು ರಾಜಾವಿಶ್ವಾನಾಥ ನಾಯಕ್ ತಾಲ್ಲೂಕು ಪ್ರೋಗ್ರಾಮ್ ಮ್ಯಾನೇಜರ್ ಕೋವಿಡ್-೧೯ ತಪಾಸಣೆ ಮೊಬೈಲ್ ತಂಡ-೦೨ ರಾಜೇಶ್ವರಿ ಲ್ಯಾಬ್ ಟೆಕ್ನಿಶಿಯನ್ ರಾಜಾ ಕೃಷ್ಣಪ್ಪ ನಾಯಕ್ ತಾಲ್ಲೂಕ ಜನರಲ್ ಆಸ್ಪತ್ರೆ ಕಂಪ್ಯೊಟರ್ ಆಪರೇಟರ್ ವೆಂಕಟೇಶ ಡಿ.ಎಚ್. ಆಯ್ ಸುರಪುರ ಹಾಗು ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಕೋರೊನಾ ವಾರಿಯರ್ಸ ವೈದ್ಯಕೀಯ ಸಿಬ್ಬಂದಿ ವರ್ಗ, ತಾಲ್ಲೂಕ ನೋಡಲ್ ಆಫೀಸರ್, ಕೋವಿಡ್-೧೯ ತಪಾಸಣೆಯ ಮೊಬೈಲ್ ತಂಡ-೦೨ ಇವರೆಲ್ಲರಿಗೂ ಸಂಸ್ಥೆಯ ವತಿಯಿಂದ ಪ್ರಾಂಶುಪಾಲರು ಸತ್ಕರಿಸಿದರು.

Contact Your\'s Advertisement; 9902492681

ಅಲ್ಲದೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ, ಕಾರ್ಯದರ್ಶಿಗಳಾದ ಶರಣಬಸಪ್ಪ ವ್ಹಿ ನಿಷ್ಠಿ ಜಹಾಗೀರದಾರ, ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿ ಮತ್ತು ಸಂಸ್ಥೆಯ ಎಲ್ಲಾ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here