ಸುರಪುರ: ಅನೇಕ ಕಡೆ ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ರಾಜುಗೌಡ ಚಾಲನೆ

0
54

ಸುರಪುರ: ನನ್ನ ಮತಕ್ಷೇತ್ರದ ಪ್ರತಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರನ್ನು ನೀಡಬೇಕೆಂಬುದು ನನ್ನ ಉದ್ದೇಶವಾಗಿದೆ,ಆದ್ದರಿಂದ ಇಂದು ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಹಾಗು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ತಾಲೂಕಿನ ಮಂಗಳೂರು ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ೫೭ ಲಕ್ಷ ರೂಪಾಯಿಗಳ ವೆಚ್ಚದ ಕುಡಿಯುವ ನೀರಿನ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ,ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ನೀರು ಒಂದಾಗಿದ್ದು ಕುಡಿಯುವ ನೀರಿನ ನಾನು ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.ಅಲ್ಲದೆ ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಣಮಂತಪ್ಪ ಅಂಬಲಿಯವರಿಗೆ ತಿಳಿಸುತ್ತಾ,ಆದಷ್ಟು ಶೀಘ್ರವೆ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಿ ಜನರಿಗೆ ಸಾಧ್ಯವಾದಷ್ಟು ಬೇಗ ಕುಡಿಯುವ ನೀರು ದೊರೆಯುವಂತಾಗಲಿ,ಜೊತೆಗೆ ಕಾಮಗಾರಿ ಕಳಪೆಯಾಗದಂತೆ ಕ್ರಮವಹಿಸುವಂತೆ ಸೂಚಿಸಿದರು.

Contact Your\'s Advertisement; 9902492681

ಅದೇರೀತಿಯಾಗಿ ಚಿಗರಿಹಾಳ ಗ್ರಾಮದಲ್ಲಿ ೪೦ ಲಕ್ಷ,ರಾಂಪುರ ಗ್ರಾಮದಲ್ಲಿ ೧೭ ಲಕ್ಷ, ಚಿಗರಿಹಾಳ ಗ್ರಾಮದಲ್ಲಿ ೪೦ ಲಕ್ಷ,ಮಾವಿನಮಟ್ಟಿ ಗ್ರಾಮದಲ್ಲಿ ೨೧ ಲಕ್ಷ ಹಾಗು ಹಾಳ ಅಮ್ಮಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಜಿ.ಪಂ ಮಾಜಿ ಸದಸ್ಯ ಹೆಚ್.ಸಿ.ಪಾಟೀಲ್ ದೊಡ್ಡ ದೇಸಾಯಿ ದೇವರಗೋನಾಲ ಶಾಂತಗೌಡ ಚನ್ನಪಟ್ಟಣ ಭೀಮಣ್ಣ ಬೇವಿನಾಳ ಶರಣು ನಾಯಕ ಬೈರಿಮಡ್ಡಿ ಮಲ್ಲಿಕಾರ್ಜುನ ರಡ್ಡಿ ಅಮ್ಮಾಪುರ ಭೀಮರಾಯ ಒಂಟೆತ್ತು ಸೇರಿದಂತೆ ಅನೇಕ ಜನ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here