ಕಲಬುರಗಿ: ವಾಡಿ ಪಟ್ಟಣದ ಲಾಡ್ಲಾಪುರ ಗ್ರಾಮದ ಹನುಮಾನ ದೇವಸ್ಥಾನದ ಸಾರ್ವಜನಿಕ ಕಟ್ಟೆ, ವಾಡಿ ಪಟ್ಟಣದ ಎಸಿಸಿ ಕಾಲೋನಿಯ ಎಲ್ಸಿಎಚ್ ಕ್ವಾಟರ್ಸ್ ಹಾಗೂ ರೈಲ್ವೆ ಕಾಲೋನಿಯ ಮೈದಾನ ಸೇರಿದಂತೆ ಪ್ರತ್ಯೇಕ ಮೂರು ಸ್ಥಳಗಳಲ್ಲಿ ಜೂಜಾಟ ನಿರತರ ಮೇಲೆ ದಾಳಿ ನಡೆಸಿ 19 ಜನ ಜೂಜುಕೋರರನ್ನು ಬಂಧಿಸಿದ್ದಾರೆ.
ವಾಡಿ ಪೊಲೀಸರು ದಾಳಿ ನಡೆಸಿ, ಬಂಧಿತರಿಂದ ಇಸ್ಪೀಟ್ ಎಲೆಗಳು ಸೇರಿದಂತೆ ರೂ.44600 ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.