ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರ ಹುಟ್ಟು ಹಬ್ಬದ ಸಂಭ್ರಮಾಚರಣೆ

0
60

ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ಸಮಾವೇಶ ಸಭಾಂಗಣದಲ್ಲಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜೀಯವರ ಭಾವಚಿತ್ರವನ್ನೊಳಗೊಂಡ ಭಾರತೀಯ ಅಂಚೆ ಇಲಾಖೆ ಹೊರಡಿಸಿದ ಅಂಚೆ ಚೀಟಿಯನ್ನು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೆರಮರ್ಸನ್‌ರಾದ ಪೂಜ್ಯ ಡಾ.ದಾಕ್ಷಾಯಿಣಿ ಅವ್ವಾಜಿಯವರ ೫೧ನೇ ಹುಟ್ಟುಹಬ್ಬದಂದು ಭಾನುವಾರ ಕಲಬುರಗಿ ಉತ್ತರ ವಲಯದ ವಿಧಾನ ಸಭಾ ಸದಸ್ಯರಾದ ಖನೀಜ್ ಫಾತೀಮಾರವರು ಬಿಡುಗಡೆಗೊಳಿಸಿದರು.

ಡಾ.ಅವ್ವಾಜೀಯವರ ಜನ್ಮದಿನದಂದು ಆಯೋಜಿಸಲಾದ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್. ಪಾಟೀಲ ಸಂಪಾದಕತ್ವದ ’ಮಹಾದಾಸೋಹಿಗಳು’ ಎಂಬ ಗ್ರಂಥವನ್ನು ಖನೀಜ್ ಫಾತಿಮಾರವರು ಬಿಡುಗಡೆಗೊಳಿಸಿದರು.

Contact Your\'s Advertisement; 9902492681

ತದನಂತರ ಶರಣಬಸವೇಶ್ವರ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಫರಾಜ್ ಉಲ್ ಇಸ್ಲಾಂ, ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಭೀಮರೆಡ್ಡಿ ಪಾಟೀಲ್, ವಿಶ್ವವಿದ್ಯಾಲಯದ ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಡಾ.ಲಕ್ಷ್ಮಿ ಪಾಟೀಲ್ ಮಾಕಾ ಮತ್ತು ಡಾ.ಬಸವರಾಜ ಮಠಪತಿ, ಚಿತ್ರಕಲಾ ವಿಭಾಗದ ಡಾ. ಶಾಂತಲಾ ನಿಷ್ಠಿ ವಿವಿಯ ಇತರೆ ವಿಭಾಗದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಮಾತೋಶ್ರೀಯವರ ಜನ್ಮದಿನವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಖನೀಜ್ ಫಾತಿಮಾ ಅವರು, ಡಾ. ದಾಕ್ಷಾಯಿಣಿ ಅವ್ವಾಜಿಯವರು ಲೋಕೋಪಕಾರಿ ಕಾರ್ಯ ಸೇವೆಗೈಯುವಲ್ಲಿ ಮತ್ತು ಸಹಾಯಕರಿಗೆ ನೆರವಾಗುವ ಕರನಾಳು ಜೀವಿಯಾಗಿದ್ದಾರೆ. ಕೋವಿಡ್ -೧೯ ಹಾಗೂ ಪ್ರವಾಹದ ಸಂದರ್ಭದಲ್ಲಿ ಜಿಲ್ಲೆಯ ಪ್ರವಾಹ ಸಂತ್ರಸ್ಥರಿಗೆ ಮತ್ತು ಕರೋನಾ ವಾರಿಯರ್ಸರಿಗೆ ಹಾಗೂ ವೃದ್ಧರಿಗೆ ಅಗತ್ಯ ವಸ್ತು ಮತ್ತು ಅನ್ನ ದಾಸೋಹ ಕಾರ್ಯಕೈಗೊಂಡು ಸಮಾಜಮುಖಿ ಕಾರ್ಯಮಾಡಿದ್ದಾರೆ ಎಂದರು.

ಸಾಂಕ್ರಾಮಿಕ ಸಮಯದಲ್ಲಿ ಮತ್ತು ಪ್ರವಾಹ ಪೀಡಿತ ಸಂದಂರ್ಭದಲ್ಲಿ ಕಲಬುರಗಿ ಜಿಲ್ಲೆಯ ಮಳೆ ಪೀಡಿತ ಪ್ರದೇಶಗಳಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದರ ಜೊತೆಗೆ, ಪೂಜ್ಯ ಅವ್ವಾಜಿ ಅವರು ಬಳಲುತ್ತಿರುವ ಮಾನವರ ಬಗ್ಗೆ ಮಾತ್ರವಲ್ಲದೆ, ಪ್ರಾಣಿಗಳ ಬಗ್ಗೆಯೂ ಸಹಾನುಭೂತಿಯನ್ನು ತೋರಿಸಿದ್ದಾರೆ. ಶಿಕ್ಷಣ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಅವರು ನೀಡಿದ ವಿಶಿ? ಕೊಡುಗೆಯನ್ನು ಗುರುತಿಸಿ ದಾವಣಗೆರೆ ವಿಶ್ವವಿದ್ಯಾಲಯವು ಪೂಜ್ಯ ಅವ್ವಾಜಿಯವರಿಗೆ ದಾವಣಗೇರೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ ಎಂದರು.

ಮಾಜಿ ಮೇಯರ್ ಭೀಮರೆಡ್ಡಿ ಪಾಟೀಲ್ ಅವರು ಮಾತನಾಡಿ, ಡಾ.ಅವ್ವಾಜಿಯವರು ಜನರ ಸಂಕಷ್ಟ ಅರಿತು ತಮ್ಮ ಜನ್ಮದಿನವನ್ನು ಆಚರಿಸಲು ನಿರಾಕರಿಸಿದ್ದರೂ, ಮಾನವೀಯತೆಗೆ ಅವರು ಮಾಡಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಡಾ.ಅವ್ವಾಜಿಯವರ ಜನ್ಮದಿನಾಚರಣೆಯನ್ನು ಆಯೋಜಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದಾಸೋಹ ಕಾರ್ಯವನ್ನು ತಮ್ಮ ಮಂತ್ರವನ್ನಾಗಸಿಕೊಂಡಿದ್ದ ಮಾತೋಶ್ರೀಯವರು ಸಮಾಜದ ಮಹಿಳೆಯರಿಗೆ ಮಾದರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೊಬ್ಬರಿಗೆ ಪ್ರೇರಣೆಯಾಗಿದ್ದಾರೆ ಎಂದರು.

ಶರಣಬಸವ ವಿಶ್ವವಿದ್ಯಾಲಯದಲ್ಲಿ ಹೊಸ ಅಲೆ ಆರಂಭವಾಗಿದೆ. ಇಲ್ಲಿನ ಸಿಬ್ಬಂದಿಗಳು ಕ್ರೀಯಾಶೀಲರಾಗಿ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಮಾಜಪರವಾಘಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವಿವಿಯಿಂದ ಜನೋಪಯೋಗಿ ಕಾರ್ಯಗಳನ್ನು ಇನ್ನೂ ಹೆಚ್ಚು ಹೆಚ್ಚು ಹೊರಬರಲ್ಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಸಂಸ್ಥಾನದ ಮಾತೇಯರ ಪ್ರತಿಯೊಂದು ಕಾರ್ಯ ದೂರ ದೃಷ್ಠಿಕೋನ ಹೊಂದಿರುತ್ತದೆ. ಸಂಸ್ಥಾನದ ಮೂಲವಾಗಿದ್ದ ದಾಸೋಹ ಸೇವೆಯಲ್ಲಿ ತಾಯಂದಿರ ಪಾತ್ರ ಮಹತ್ವದಾಗಿದೆ ಎಂದರು.

ಗೋದುತಾಯಿ ಅವ್ವಾಜೀ ಹಾಗೂ ಕೋಮಲಾ ಅವ್ವಾಜೀ ನಡೆಸಿದ್ದ ದಾಸೋಹ ಸೇವೆಯನ್ನು ಈಗ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜೀಯವರು ಮುಂದುವರೆಸಿದ್ದಾರೆ. ಶರಣಬಸವೇಶ್ವರ ಸಂಘದ ವಿವಿಧ ವಿಭಾಗಗಳಲ್ಲಿ ಮಾತೆಯರ ಸಾಂಕೇತಿಕ ಜನ್ಮದಿನೋತ್ಸವ ಆಚರಿಸುತ್ತಿರುವುದು ಅವರ ಜನ್ಮದಿನದ ಮಹತ್ವವನ್ನು ತಿಳಿಯಪಡಿಸುತ್ತದೆ ಎಂದರು.

ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಕಾರ್ಯಕ್ರಮದ ಪ್ರಧಾನ ಅಂಶಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಅತಿಹೆಚ್ಚು ಅಂಕ ಪಡೆದು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ೫ ಸ್ವರ್ಣಪದಕ ಪಡೆದ ಎಂ.ಸಿ.ಎ ವಿಭಾಗದ ವಿದ್ಯಾರ್ಥಿನಿ ಪ್ರೀಯಂಕಾ ರಾಠೋಡ ಮತ್ತು ವಿದ್ಯಾರ್ಥಿ ಪ್ರಜ್ವಲ, ಸೋಫೀಯಾ ಸೇರಿದಂತೆ ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಡಾ.ಲಿಂಗಮ್ಮ ಪತಂಗೆಯವರು ಅವ್ವಾಜಿಯವರ ಕುರಿತು ಬರೆದ ಸ್ವರಚಿತ ಕವನ ವಾಚನ ಮಾಡಿದರು.ಡಾ. ನಾನಾಸಾಹೇಬ್ ಹಚ್ಚಡದ ನಿರೂಪಿಸಿದರು. ಸಂಗೀತ ವಿಭಾಗದವರು ಪ್ರಾರ್ಥನಾ ಗೀತೆ ಹಾಡಿದರು. ಡಾ. ಚಿದಾನಂದ ಚಿಕ್ಕಮಠ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here