ಕಾರ್ಮಿಕ ಸಂಘಟನೆಗಳಿಂದ ನವೆಂಬರ್ 26 ರಂದು ನಡೆಯುವ ಸಾರ್ವತ್ರಿಕ ಮುಷ್ಕರ ಹೋರಾಟದ ಪೂರ್ವಭಾವಿ ಸಭೆ

0
124

ಶಹಾಬಾದ: ಎಐಯುಟಿಯುಸಿ, ಸಿಐಟಿಯು, ಎಐಟಿಯುಸಿ ಕಾರ್ಮಿಕ  ಸಂಘಟನೆಗಳ ಜಂಟಿ ಸಮಿತಿಯಿಂದ
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸಭೆ ನಗರದ ಕನ್ನಡ ಭವನದಲ್ಲಿ ನವೆಂಬರ್ 26 ರಂದು ನಡೆಯುವ ಸಾರ್ವತ್ರಿಕ ಮುಷ್ಕರ ಹೋರಾಟದ ರೂಪರೇಷಗಳ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎ.ಐ.ಯು.ಟಿ.ಯು.ಸಿ ಕಾರ್ಮಿಕ ಸಂಘದ ಸಂಚಾಲಕ ರಾಘವೇಂದ್ರ.ಎಂ.ಜಿ, ಕೇಂದ್ರ ಬಿಜೆಪಿ ಸರಕಾ ರವು ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮೊದಲು ಅದಕ್ಕೆ ಸಂಬಂಧಪಟ್ಟ ಸಮುದಾಯದವರ ಜೊತೆ ಚರ್ಚಿಸಿ, ಸಮಾಲೋಚಿಸಿ, ಅವರಿಂದ ಬರುವ ಸಲಹೆ, ತಿದ್ದುಪಡಿ ಮತ್ತು ವಿಚಾರಗಳನ್ನು ಪರಿಗಣಿಸುವಂತಹ ಪ್ರಜಾತಾಂತ್ರಿಕ ರೂಢಿ, ನೀತಿಯನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಪ್ರವೃತ್ತಿಯನ್ನು ಪಾಲಿಸುತ್ತಿರುವುದು ಅತ್ಯಂತ ಖಂಡನೀಯವಾಗಿದೆ.

Contact Your\'s Advertisement; 9902492681

ಇತ್ತೀಚೆಗೆ 44 ಕಾರ್ಮಿಕ ಕಾನೂನುಗಳನ್ನು ಸಮೀಕರಿಸಿ 4 ಕಾರ್ಮಿಕ ಸಂಹಿತೆಗಳನ್ನಾಗಿ ಮಾಡುವ ಸಂದರ್ಭದಲ್ಲಿ ಇದಕ್ಕೆ ಸಂಬಂಧಿತರಾದ ಕಾರ್ಮಿಕ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಕಾರ್ಮಿಕ ಸಂಘಟನೆಗಳ ಜೊತೆ ಯಾವುದೇ ಚರ್ಚಿಸಿ, ಸಮಾಲೋಚನೆ ನಡೆಸದೆ ಇರುವುದು ಸ್ವಷ್ಟ ಸಾಕ್ಷಿಯಾಗಿದೆ. ಸರಕಾರ ಕೋವಿಡ್-19 ಪರಿಸ್ಥಿತಿಯ ದುರುಪಯೋಗ ಪಡಿಸಿಕೊಂಡು ವಿರೋಧ ಪಕ್ಷಗಳ ಗೈರು ಹಾಜರಿಯಲ್ಲಿ ಕಾರ್ಮಿಕರ ಹಿತಕ್ಕೆ ಧಕ್ಕೆತರುವಂತಹ ಮೂರು ಕಾರ್ಮಿಕ ಸಂಹಿತೆಗಳನ್ನು ಸಂಸತ್ತಿನಲ್ಲಿ ಅತ್ಯಂತ ಅಪ್ರಜಾಸತ್ತಾತ್ಮಕ ರೀತಿಯಿಂದ ಅಂಗೀಕರಿಸಿದೆ.

ರಾಜ್ಯದಲ್ಲಿರುವ ಎಲ್ಲಾ ಪ್ರಮುಖ ರೈತ ಸಂಘಟನೆಗಳು ಮುಷ್ಕರವನ್ನು ಬೆಂಬಲಿಸಿ ಭಾಗವಹಿಸುತ್ತಿದ್ದಾರೆ. ಅದೇ ರೀತಿ ಸಕರ್ಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದ ಮೀಸಲಾತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ಹಲವಾರು ದಲಿತ ಸಂಘಟನೆಗಳೂ ಮುಷ್ಕರವನ್ನು ಬೆಂಬಲಿಸಿ ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿ, ಯವಜನ, ಮಹಿಳಾ ಸಂಘಟನೆಗಳು ತಮ್ಮದೇ ಆದ ಬೇಡಿಕೆಗಳು ಮೇಲೆ ಹೋರಾಟದ ಕಣದಲ್ಲಿದ್ದಾರೆ. ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಈ ಕೆಳಕಂಡ ಪ್ರಮುಖ 7 ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬೆಳಿಗ್ಗೆ 11 ಗಂಟೆಗೆ ನಗರದ ಬಸವೇಶ್ವರ ವೃತ್ತ (ರಿಂಗ್ ರೋಡ) ನಿಂದ ಹೊನಗುಂಟಾ ಕ್ರಾಸ್ವರೆಗೆ, ಮೆರವಣಿಗೆಯನ್ನು ಹಮ್ಮಿಕೊಂಡಿದೆ. ನಂತರ ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿಗಳಿಗೆ ಬೇಡಿಕೆಗಳ ಮನವಿಪತ್ರವನ್ನು ಸಲ್ಲಿಸಲಾಗುವುದು.

ಪೂರ್ವಭಾವಿ ಸಭೆಯಲ್ಲಿ ಆರ್.ಕೆ.ಎಸ್ ಜಿಲ್ಲಾಧ್ಯಕ್ಷ ಗಣಪತ್ರಾವ.ಕೆ.ಮಾನೆ. ಕರ್ನಾಟಕ ರಾಜ್ಯ ರೈತ ಸಂಘದ ತಾಲೂಧ್ಯಕ್ಷ ಬಸವರಾಜ ಕೋರಿ, ಸಿ.ಐ.ಟಿ.ಯು ನಗರ ಸಂಚಾಲಕ ನಾಗಪ್ಪ ರಾಯಚೂರಕರ್, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ, ಆರ್.ಕೆ.ಎಸ್ ಮುಖಂಡ ರಾಜೇಂದ್ರ ಅತನೂರ, ಡಿ.ಎಂ.ಎಸ್.ಎಸ್ ಅಧ್ಯಕ್ಷ ರವಿ ಬೆಳಮಗಿ, ತಿಮ್ಮಯ್ಯ ಮಾನೆ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here