ಕಲಬುರಗಿ: ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಶಮ್ಸ್ ಫಂಕ್ಷನ್ ಪ್ಯಾಲೇಸ್‍ನಲ್ಲಿ ಜೂನ್ 17ರಂದು ಸಂಜೆ 5-30ಕ್ಕೆ ಪ್ರಜಾತಂತ್ರದಲ್ಲಿ ನಾಗರಿಕರ ಕರ್ತವ್ಯಗಳ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಇಂಡಿಯನ್ ಅಸೋಸಿಯೇಶನ್ ಆಫ್ ಲಾಯರ್ಸ್ ಹೈದ್ರಾಬಾದ್ ಕರ್ನಾಟಕ ವಿಭಾಗದ ಕಾರ್ಯಾಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಪಿ. ವಿಲಾಸಕುಮಾರ್ ಅವರು ಇಲ್ಲಿ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಗರಿಕರ ಪಾತ್ರ ಬಹುಮುಖ್ಯವಾಗಿದ್ದು, ಆ ದಿಸೆಯಲ್ಲಿ ಜಾಗೃತಿ ಮೂಡಿಸಲು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸುವ ಸರ್ಕಾರದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರು ನಾಗರಿಕರ ಕರ್ತವ್ಯಗಳ ಕುರಿತು ಮಾತನಾಡುವರು. ಅತಿಥಿಗಳಾಗಿ ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣಕುಮಾರ್ ಕಿಣ್ಣಿ ಅವರು ಆಗಮಿಸುವರು.
ಅಧ್ಯಕ್ಷತೆಯನ್ನು ಇಂಡಿಯನ್ ಅಸೋಸಿಯೇಶನ್ ಆಫ್ ಲಾಯರ್ಸ್ ಹೈದ್ರಾಬಾದ್ ಕರ್ನಾಟಕ ವಿಭಾಗದ ಅಧ್ಯಕ್ಷ ಶಿವಕುಮಾರ್ ಮಾಲಿಪಾಟೀಲ್ ಅವರು ವಹಿಸುವರು ಎಂದು ಅವರು ಹೇಳಿದರು.