ಸುರಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃಧ್ಧಿ ಸಂಸ್ಥೆಯಿಂದ ನಗರದ ಭೋವಿಗಲ್ಲಿಯ ಹುಲಿಗೆಮ್ಮ ದೇವಸ್ಥಾನದಲ್ಲಿ ವಯೋವೃಧ್ಧರಿಗೆ ವಾತ್ಸಲ್ಯ ಕಿಟ್ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ನೇತೃತ್ವವಹಿಸಿದ್ದ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸಂದೀಪ ಡಿ ಮಾತನಾಡಿ, ಈ ನಮ್ಮ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃಧ್ಧಿ ಸಂಸ್ಥೆಯು ಮೊದಲಿಗೆ ೨೦೧೫ರಲ್ಲಿ ಆರಂಭಿಸಿದ್ದಾಗ ಅನೇಕರು ಇಲ್ಲಿ ಸಂಸ್ಥೆಯನ್ನು ಬೆಳೆಸುವುದು ಕಷ್ಟ ಎನ್ನುವ ಮಾತನ್ನು ಕೇಳಿದ್ದೆವು,ಆದರೆ ಅಂದು ಒಂದು ಗುಂಪು ಆರಂಭಿಸುವ ಮೂಲಕ ಕಾರ್ಯಾರಂಭ ಮಾಡಿದ ಸಂಸ್ಥೆ ಇಂದು ತಾಲೂಕಿನಲ್ಲಿ ೩೧೪೪ ಗುಂಪುಗಳನ್ನು ಹೊಂದಿ ಜಿಲ್ಲೆಯ ಪ್ರಥಮ ಸ್ಥಾನದಲ್ಲಿದೆ ಎನ್ನಲು ಸಂತೋಷವಾಗುತ್ತದೆ ಎಂದರು.
ನಮ್ಮ ಆರಾಧ್ಯರಾದ ಸಂಸ್ಥೆಯ ಸಂಸ್ಥಾಪಕರಾದ ಡಾ:ವೀರೆಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಕೇವಲ ಸ್ವಸಹಾಯ ಗುಂಪುಗಳನ್ನು ಮಾತ್ರ ರಚಿಸದೆ ಅನೇಕ ಜನಪರವಾದ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಅನೇಕ ಶಾಲೆಗಳಿಗೆ ಉಪಕರಣಗಳನ್ನು ನೀಡುವುದು,ವಯೋವೃಧ್ಧರಿಗೆ ಅಗತ್ಯ ವಸ್ತುಗಳನ್ನು ನೀಡುವುದು,ಇನ್ನು ಕೆಲ ಗ್ರಾಮಗಳಲ್ಲಿನ ನೀರಿನ ಸೌಲಭ್ಯಕ್ಕಾಗಿ ಕೆರೆಗಳ ಊಳೆತ್ತಿಸುವ,ಅನೇಕ ಶಾಲೆಗಳಿಗೆ ಶುಧ್ಧ ಕುಡಿಯುವ ನೀರಿನ ಯಂತ್ರ ವಿತರಣೆ,ಈಗ ವಾತ್ಸಲ್ಯ ಕಿಟ್ ಹಾಗು ಮಾಶಾಸನ ನೀಡುವುದು, ಅಲ್ಲದೆ ಕೊರೊನಾ ಹಾವಳಿಯಿಂದ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲೆಂದು ನಮ್ಮ ಸಂಸ್ಥೆಯ ಸ್ವಸಹಾಯ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಕುಟುಂಬದ ಶಾಲಾ ಮಕ್ಕಳಿಗೆ ರಿಯಾಯತಿ ದರದಲ್ಲಿ ಟ್ಯಾಬ್ ಹಾಗು ಪದವಿ ಹಂತದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್‌ನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತ ಗಿರೀಶ ಶಾಬಾದಿಯವರು ಕೂಡ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು.
ನಗರಸಭೆ ಸದಸ್ಯರಾದ ಮಾನಪ್ಪ ಚಳ್ಳಿಗಿಡ ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಮಹ್ಮದ್ ಶರೀಫ್, ಹುಲುಗಮ್ಮ ದೇವಸ್ಥಾನದ ಅರ್ಚಕ ಹುಲಗಪ್ಪ ಪೂಜಾರಿ ಹಾಗು ಸಂಸ್ಥೆಯ ಮೇಲ್ವಿಚಾರಕಿ ರೇಖಾ,ಸಿದ್ದಮ್ಮ ಪರಶುರಾಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.