ಸುರಪುರ: ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಹನುಮಾನ್ ದೇವರ ಕಾರ್ತಿಕೋತ್ಸವ ನಡೆಸಲಾಯಿತು.ಕಾರ್ತಿಕೋತ್ಸವದ ಅಂಗವಾಗಿ ಶನಿವಾರ ಮದ್ಹ್ಯಾನ ಹನುಮಾನ್ ದೇವರನ್ನು ಪಲ್ಲಕ್ಕಿಯಲ್ಲಿ ತಾಲೂಕಿನ ಹೆಮನೂರ ಬಳಿಯಲ್ಲಿ ಹರಿಯುವ ಕೃಷ್ಣಾ ನದಿಗೆ ಗಂಗಾ ಸ್ನಾನಕ್ಕೆ ತೆಗೆದುಕೊಂಡು ಹೋಗಿ ನಂತರ ರವಿವಾರ ಬೆಳಗಿನ ಜಾವ ಗ್ರಾಮಕ್ಕೆ ಕರೆತಂದು,ದೇವರ ಪಲ್ಲಕ್ಕಿಯನ್ನು ಗ್ರಾಮದ ದೇವರ ಕಟ್ಟೆಯ ಮೇಲಿರಿಸಿ ನಂತರ ಗ್ರಾಮದ ಮಹಿಳೆಯರು ತನಾರತಿ ಕುಂಭ ಕಳಸಗಳೊಂದಿಗೆ ಗ್ರಾಮದಲ್ಲಿ ಭಾಜಾ ಬಂಜಂತ್ರಿಯೊಂದಿಗೆ ಪಲ್ಲಕ್ಕಿಯ ಮೆರವಣಿಗೆ ನಡೆಸಲಾಯಿತು.
ದೇವಸ್ಥಾನಕ್ಕೆ ದೇವರ ಪಲ್ಲಕ್ಕಿ ತಲುಪಿದ ನಂತರ ದತ್ತಾತ್ರೆಯ ಜಹಾಗೀರದಾರ್ ಅವರ ಸಹಭಾಗಿತ್ವದಲ್ಲಿ ದೇವರಿಗೆ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.ನಂತರ ದೇವರ ಕಾರ್ಣಿಕ ನಡೆಯಿತು.ದೇವರ ಕಾರ್ಣಿಕವನ್ನು ನುಡಿದ ದೇವಸ್ಥಾನದ ಭೀಮಣ್ಣ ಮುತ್ಯಾ ಅವರು, ಮುಂಗಾರು ಅರ್ಧ ಹಿಂಗಾರು ಅರ್ಧ ರೈತನಿಗೆ ಕಷ್ಟ ಚಪ್ಪನ್ನಾರ್ ದೇಶಕ್ಕೆ ಸುರಿಮಳೆ ಎಂದು ನುಡಿಯುತ್ತಿದ್ದಂತೆ ಜನರಲ್ಲಿ ಒಂದು ರೀತಿಯ ದುಗುಡ ಉಂಟಾದಂತೆ ಕಂಡುಬಂತು.ಅಲ್ಲದೆ ಈಬಾರಿಯು ಮಳೆ ಕೈ ಕೊಡಲಿದೆ ಎಂದು ಜನರು ಕಾರ್ಣಿಕರ ಮಾತನ್ನು ತಮ್ಮದೆ ಧಾಟಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದರು.ಕೊರೊನಾ ಭೀತುಯ ಮಧ್ಯೆಯೆ ಹನುಮಾನ್ ದೇವರ ಕಾರ್ತಿಕೋತ್ಸವ ಸರಳವಾಗಿ ನೆರವೇರಿದ್ದು ಗ್ರಾಮದ ಜನರಲ್ಲಿ ಸಂತಸ ಮೂಡಿಸಿತು.
ಕಾರ್ತಿಕೋತ್ಸವದಲ್ಲಿ ಮುಖಂಡರಾದ ತಾಲೂಕು ಪಂಚಾಯತಿ ಸದಸ್ಯ ದೊಡ್ಡ ಕೊತಲೆಪ್ಪ ಹಾವಿನ್ ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಸಕ್ರೆಪ್ಪ ಕವಲ್ದಾರ್ ದೇವಿಂದ್ರಪ್ಪ ಬಡಿಗೇರ ಶಂಬಣ್ಣ ಎತ್ತಿನಮನಿ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಮರೆಪ್ಪ ಕಟ್ಟಿಮನಿ ದೇವಿಂದ್ರಪ್ಪಗೌಡ ಮಾಲಿ ಪಾಟೀಲ್‌ಉಪನ್ಯಾಸಕ ಮಲ್ಲಿಕಾರ್ಜುನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಧರ್ಮರಾಜ ಬಡಿಗೇರ ಸೇರಿದಂತೆ ಗ್ರಾಮಸ್ಥರಿದ್ದರು.