ಗೋವು ಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಜನವಿರೋಧಿ ಮಸೂದೆಗಳ ವಿರುದ್ಧ ಪ್ರತಿಭಟನೆ

0
66

ಕಲಬುರಗಿ: ರಾಜ್ಯ ಸರಕಾರ ಜಾರಿಗೆ ತಂದಿರುವ ಗೋವು ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿ ನಯಾ ಸವೇರ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 150ಕ್ಕು ಹೆಚ್ಚು ಗೋಶಾಲೆಗಳಿದ್ದು 75 ಸರಕಾರದ ಅನುಧಾನ ಪಡೆಯುತಿದು ಆದರೆ ಅನುಧಾನದಲ್ಲಿ ಸಾಕಷ್ಟು ಅಕ್ರಮ ನಡೆಯುತ್ತಿದ್ದು, ಬಹುಸಂಖ್ಯಾತರ ಜನಪ್ರೀಯ ಆಹಾರದ ವಿರುದ್ಧ ಸರಕಾರ ಈ ನಿರ್ಧಾರ ಖಂಡನೀಯವಾಗಿದೆ ತಕ್ಷಣ ಗೋವು ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ಸರಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಸಂಘಟನೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸಂಘಟನೆಯ ಅಧ್ಯಕ್ಷರಾದ ಮೋದ್ದಿನ್ ಪಟೇಲ್ ಅಣಬಿ ಎಚ್ಚರಿಕೆ ನೀಡಿ ಆಗ್ರಹಿಸಿದರು.

Contact Your\'s Advertisement; 9902492681

ಎರಡು ತಿಂಗಳಿಂದ ಸತತವಾಗಿ ರೈತರು ಕೃಷಿ ಮಸೂದೆ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ದೇಶ ವಿದೇಶದಲ್ಲೂ ಗಮನ ಸೇಳೆಯುತ್ತಿದೆ. ಆದರೆ ಕೇ೦ದ್ರ ಸರಕಾರ ಮಾತ್ರ ಕಾರ್ಪೂರೆಟ್ ಕಂಪನಿಗಳಿಗೆ ಅನಕೂಲಕ್ಕಾಗಿ ರೈತ ಹಾಗೂ ಜನ ವಿರೋಧಿ ಕೃಷಿ ಮಸೂದೆ ಜಾರಿಗೆ ತರುವಲು ಆಸಕ್ತ ತೋರುತ್ತಿರುವುದು ಅಮಾನವಿವಾಗಿದೆ. ರೈತರ ಈ ಹೋರಾಟ ದೇಶದ ಸ್ವಾಭಿಮಾನದ ಹಕ್ಕಿನ ಹೋರಾಟವಾಗಿದ್ದು, ಇಂತಹ ಜನವಿರೋಧಿ ಕಾಯ್ದೆಗಳು ವಾಪಸ್ ಪಡೆದು ದೇಶದ ಜನರ ಹಿತ ಕಾಪಾಡಬೇಕೆಂದು ಸಂಘಟನೆಯ ಸದಸ್ಯರು ಒತ್ತಾಯಿಸಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶೀ ಸಲೀಮ್ ಅಹ್ಮದ್ ಚಿತ್ತಾಪೂರಿ, ಸೈಯದ ಎಜಾಜ ಅಲಿ ಇನಾಮ್ದಾರ, ಸಾಜಿದ ಅಲಿ ರಂಜೋಳ್ವಿ, ಶೇಖ ಸಿರಾಜ ಪಾಶಾ, ಹೈದರ್ ಅಲಿ ಇನಾಮ್ದಾರ, ಮೊಹ್ಮದ ಅಲಿ, ಗೀತಾ ಮುದಗಲ, ಸೈರಾ ಬಾನು ಅಬ್ದುಲ ವಾಹಿದ, ಅಬ್ದುಲ ಸಲೀಮ್ ಸಗರಿ, ಖಾಜಾ ಪಟೇಲ್ ಸರಡಗಿ, ರಫಿಕ ಕಮಲಾಪೂರಿ, ರಾಬಿಯಾ ಶಿಕಾರಿ, ಮಹಬೂಬ ಖಾನ್, ರಿಯಾಜ ಪಟೇಲ್, ರಾಹುಲ, ಬಾಬಾ ಫಕರೋದ್ದಿನ ಅನುಸಾರಿ, ಯುನುಸ ಪಟೇಲ ಸೇರಿದಂತೆ ಮುಂತಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here