ಕೋವಿಡ್ ಕುರಿತು ಶ್ರೀಪ್ರಭು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸೆಮಿನಾರ 29ಕ್ಕೆ

0
28

ಸುರಪುರ: ಇದೇ ಜನೆವರಿ ೨೯ ರಂದು ಶ್ರೀ ಪ್ರಭು ಮಹಾ ವಿದ್ಯಾಲಯದ ವತಿಯಿಂದ ಒಂದು ದಿನದ ಅಂತರಾಷ್ಟ್ರೀಯ ವೆಬಿನಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಭು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಹೆಚ್.ಹೊಸಮನಿ ತಿಳಿಸಿದರು.

ನಗರದ ಶ್ರೀ ಪ್ರಭು ಮಹಾ ವಿದ್ಯಾಲಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವೈಜನಾಥ ವರ್ಮಾ ಅವರು ಕೊವೀಡ್ ೧೯ ಕುರಿತು ಸಂಶೋಧನೆ ನಡೆಸಿ ಅದರ ಪ್ರೋಟೀಸ್ ಬಗ್ಗೆ ಬರೆದ ವರದಿಯನ್ನು ಅಂತರಾಷ್ಟ್ರೀಯ ಮಟ್ಟದ ಜರನಲ್ ಆಫ್ ಮೋಲಿಕ್ಯೊಲರ್ ಸ್ಟಕರ್ಚಸ್ ಎಲ್ಸವೇರ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿತ್ತು, ಈ ಲೇಖನವನ್ನು ವಿಶ್ವ ಆರೋಗ್ಯ ಸಂಸ್ಥೆಯವರು ಪರಿಗಣಿಸಿ ಪ್ರಶಂಸೆ ವ್ಯಕ್ತಪಡಿಸಿ ಸಂಸ್ಥೆಯ ಅಂರ್ತಜಾಲದಲ್ಲಿ ಅದನ್ನು ಪ್ರಕಟಿಸಿರುತ್ತಾರೆ.

Contact Your\'s Advertisement; 9902492681

ಅಲ್ಲದೆ ಅದೇ ಲೇಖನ ಇನ್ನೂ ಅನೇಕ ಅಂತರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಗಿದೆ.ಆದ್ದರಿಂದ ಈ ಕುರಿತು ವೈಜನಾಥ ವರ್ಮಾರ ಕೋವಿಡ್ ಸಂಶೋಧನೆಯ ಕುರಿತು ಹೆಚ್ಚಿನ ಸಂಶೋಧನೆಗೆ ಹಾಗು ನಮ್ಮ ಭಾಗದ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ ಹಾಗು ಜೀವಶಾಸ್ತ್ರಗಳ ಕುರಿತು ತಜ್ಞರ ಉಪನ್ಯಾಸದ ಮೂಲಕ ಪ್ರೇರೆಪಿಸಲು ಮತ್ತು ಕೋವಿಡ್ ಕುರಿತು ಜನರಿಗೆ ಅರಿವು ಮೂಡಿಸಲು ಅಂತರಾಷ್ಟ್ರೀಯ ಮಟ್ಟದ ವೆಬಿನಾರನ್ನು ಹಮ್ಮಿಕೊಳ್ಳಲಾಗಿz, ಈ ವೆಬಿನಾರ ನಲ್ಲಿ ಮೆಡಿಸಿನ್ ಕುರಿತು ಉಪನ್ಯಾಸವನ್ನು ಅಂತರಾಷ್ಟ್ರೀಯ ವಿಜ್ಞಾನಿಯಾದ ಡಾ. ಅನೀಲ ಕುಮಾರ, ಡಾ, ಪ್ರಕಾಶ ವಾಡಗಾಂವ್‌ಕರ್ ಅವರುಗಳು ಉಪನ್ಯಾಸ ನೀಡಲಿದ್ದಾರೆ ಮತ್ತು ಕ್ಯಾನ್ಸರ್ ಕುರಿತು ಡಾ.ಪ್ರಭಂಜನ್ ಎಸ್.ಜಿ ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಈ ವೆಬಿನಾರ https//forms.gle/M2dNxsJQjoaDe5q77 ಲಿಂಕನಲ್ಲಿ ನೊಂದಾಯಿಸಿಕೊಂಡು ವೆಬಿನಾರನಲ್ಲಿ ಭಾಗವಹಿಸಿ ಉಪನ್ಯಾಸವನ್ನು ಕೇಳಲು ಅನುಮತಿಸಲಾಗಿದೆ ಹಾಗೂ ಫೀಡಬ್ಯಾಕ್ ಪಡೆದವರು ಯುಟೂಬ್, ಗೋಗಲ್‌ಮೀಟ್‌ನಲ್ಲೂ ಕಾರ್ಯಕ್ರಮವನ್ನು ವಿಕ್ಷಿಸಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ವೇಣುಗೋಪಾಲ ಜೇವರ್ಗಿಯವರು ಮಾತನಾಡಿದರು, ಎಮ್.ಡಿ.ವಾರಿಸ್, ಸಾಯಬಣ್ಣ ಮುಡಬೂಳ ಸೇರಿದಂತೆ ಅನೇಕ ಜನ ಉಪನ್ಯಾಸಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here