ಭಕ್ತಿ, ಜ್ಞಾನ, ಕರ್ಮ ಮಾರ್ಗಗಳ ಮೂಲಕ ಜೀವನ ಮೌಲ್ಯಗಳನ್ನು ಪ್ರತಿಪಾದಿಸಿದವರು ವೇಮನರು- ಅಂಜಲಿ ಕಂಬಾನೂರ

0
82

ಶಹಾಬಾದ: ವೇಮನ ೧೫ನೇ ಶತಮಾನದ ತೆಲಗು ಕವಿಗಳಲ್ಲಿ ಪ್ರಮುಖ ಹೆಸರು. ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ಮಹಾಕವಿ, ಮಹಾಯೋಗಿಯಾಗಿದ್ದಾನೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಕಂಬಾನೂರ ಹೇಳಿದರು.

ಅವರು ನಗರಸಭೆಯಲ್ಲಿ ಮಂಗಳವಾರ ಆಯೋಜಿಸಲಾದ ಮಹಾಕವಿ ವೇಮನ ಜಯಂತಿ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಜೀವನ ಮೌಲ್ಯಗಳಲ್ಲಿ ಕುಸಿತ ಕಂಡಾಗಲೆಲ್ಲ ಸತ್ಪುರುಷರು, ಯೋಗಿಗಳು, ಸಂತರು ಜನಿಸಿ ಭಕ್ತಿ, ಜ್ಞಾನ, ಕರ್ಮ ಮಾರ್ಗಗಳ ಮೂಲಕ ಜೀವನ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ, ಪ್ರಚುರಪಡಿಸಿದ್ದಾರೆ ಹಾಗೇ ಪ್ರತಿಷ್ಠಾಪಿಸಿದ್ದಾರೆ.
ರಾಮ, ಕೃಷ್ಣ, ಬುದ್ಧ, ಬಸವ ಮುಂತಾದ ಲೋಕ ಪೂಜ್ಯನೀಯರಂತೆ ಮೇರುಪಂಕ್ತಿಯಲ್ಲಿ ನಿಲ್ಲುವ ಮತ್ತೋರ್ವ ಶ್ರೇಷ್ಠ ದಾರ್ಶನಿಕ, ತತ್ವದರ್ಶಕ, ಸಮಾಜ ಸುಧಾರಕ, ಮಹಾಯೋಗಿ ವೇಮನರು.

ವೇಮನರೇ ತಮ್ಮ ಒಂದು ಪದ್ಯದಲ್ಲಿ ‘ಉಂಟು ಉಂಟು ಜ್ಞಾನಿ ಯುಗ ಯುಗಾದಿ ಕಳೆಯೆ’ ಎಂದು ಹೇಳಿದಂತೆ ಯುಗವೆಂದರೆ ಆಧ್ಯಾತ್ಮಿಕ ಪ್ರಗತಿಯ ಹಂತ. ಪ್ರತಿ ಯುಗದಲ್ಲಿ ಜ್ಞಾನಿಗಳು ಇದ್ದೆ ಇರುತ್ತಾರೆ. ಅಧರ್ಮ ಹೆಚ್ಚಾದಾಗ ಜನರು ಮತ್ತೆ ಧರ್ಮದ ಮಾರ್ಗದಲ್ಲಿ ನಡೆಯುವಂತೆ ಮಾಡಲು, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವುದೇ ಜ್ಞಾನಿಗಳ ಬರುವಿಕೆಯ ಉದ್ದೇಶ. ಹಾಗೆ ಬಂದವರು ದಿಗಂಬರ ವೇಮನರು ಎಂದು ಹೇಳಿದರು.

ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ,ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ,ನಗರಸಭೆಯ ಸದಸ್ಯೆ ಪಾರ್ವತಿ ಪವಾರ, ನಗರಸಭೆಯ ವ್ಯವಸ್ಥಾಪಕ ಶಂಜರ ಇಂಜನಗೇರಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಸಮುದಾಯ ಸಂಘಟನಾ ಅಧಿಕಾರಿ ರಘುನಾಥ ನರಸಾಳೆ, ನೈರ್ಮಲ್ಯ ನಿರೀಕ್ಷಕ ಶರಣು, ಮಲ್ಲಿಕಾರ್ಜುನ,ಮುತ್ತಣ್ಣ ಭಂಡಾರಿ, ಸಯ್ಯದ್ ಜಹೀರ್ ಸೇರಿದಂತೆ ನಗರಸಭೆಯ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here