ಶಹಾಬಾದ:ನಗರದಲ್ಲಿ ರೇಲ್ವೆಗಳ ನಿಲುಗಡೆ ಕಡಿಮೆಯಾದ ಕಾರಣ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸುಪರ್ ಫಾಸ್ಟ ದಾದರ್ ಮದ್ರಾಸ್, ನಾಗರಕೌಯಿಲ್ ಎಕ್ಸ್ಪ್ರೆಸ್, ಹೈದ್ರಬಾದ ಮುಂಬಯಿ, ಹುಬ್ಬಳ್ಳಿ ಹೈದ್ರಬಾದ ರೇಲ್ವೆಗಳನ್ನು ಶಹಾಬಾದ ನಿಲ್ದಾಣದಲ್ಲಿ ನಿಲ್ಲಿಸಬೇಕೆಂದು ಒತ್ತಾಯಿಸಿ ನಗರದ ಮಾದಿಗ ದಂಡೋರ ಹೋರಾಟ ಸಮಿತಿ ವತಿಯಿಂದ ಕೇಂದ್ರದ ರೇಲ್ವೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕೋವಿಡ್-೧೯ ಬಂದ ನಂತರ ನಗರದಲ್ಲಿ ರೇಲ್ವೆಗಳ ಸಂಚಾರ ಕಡಿಮೆಯಾದ ಕಾರಣ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಕೋವಿಡ್-೧೯ದಿಂದ ಬಹುತೇಖ ರೈಲು ನಿಲುಗಡೆಯಾಗಿವೆ.ಕೆಲವೊಂದು ರೈಲುಗಳು ಸಂಚಾರ ಪ್ರಾರಂಭವಾಗಿವೆ.ಆದರೆ ನಗರದ ಬಹುತೇಖ ಜನರು ರೈಲಿನ ಮೇಲೆ ಅವಲಂಭಿತರಾಗಿದ್ದಾರೆ. ಮೊದಲು ಶಹಾಬಾದ ನಿಲ್ದಾಣದಲ್ಲಿ ನಿಲ್ಲುವ ರೈಲುಗಳು ನಿಲ್ಲದಿರುವುದರಿಂದ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಟ್ರೇನ್ ಶಹಾಬಾದನಲ್ಲಿ ನಿಲುಗಡೆ ಮಾಡಬೇಕು. ಈ ಕುರಿತು ರೇಲ್ವೆ ನಿಲ್ದಾಣದ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಾದಿಗ ದಂಡೋರ ಹೋರಾಟ ಸಮಿತಿಯ ನಾಮದೇವ ಸಿಪ್ಪಿ, ಕಿರಣಬಾಬು ಕೋರೆ, ಸಂತೋಷ ಹುಲಿ,ಮಲ್ಲಪ್ಪ, ನಾಗರಾಜ ಮುದ್ನಾಳ, ಚಂದರಾಮ, ಮನೋಹರ ಮೇತ್ರೆ, ಕಾಶಿನಾಥ, ಮರಲಿಂಗ ಸೇರಿದಂತೆ ಇತರರು ಇದ್ದರು.