ದೇಶದ ಅಭೀವೃಧ್ದಿಗೊಳಿಸುವಲ್ಲಿ ಕಾಂಗ್ರೆಸ್ ಬಿಜೆಪಿ ಸೋತಿವೆ: ಸೋಮಶೇಖರ

0
81

ಸುರಪುರ: ದೇಶ ಮತ್ತು ರಾಜ್ಯದ ಅಭೀವೃಧ್ಧಿಯಲ್ಲಿ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಏನು ಮಾಡಿಲ್ಲ, ದೇಶದಲ್ಲಿ ಕಾಡುತ್ತಿರುವ ಸಮಸ್ಯೆಗಳು ಶಾಸ್ವತವಾಗಿ ಹಾಗೆಯೆ ಇವೆ, ಇದರಿಂದ ಈ ಎರಡೂ ಪಕ್ಷಗಳನ್ನು ಜನ ತಿರಸ್ಕರಿಸಬೇಕಿದೆ ಎಂದು ಎಸ್‌ಯುಸಿಐ(ಸಿ) ಅಭ್ಯಾರ್ಥಿ ಕೆ.ಸೋಮಶೇಖರ ಮಾತನಾಡಿದರು.

ನಗರದ ಖಾಸಗಿ ಹೊಟೆಲಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಎಸ್‌ಯುಸಿಐ(ಐ) ದೇಶದಲ್ಲಿ ಒಂದುನೂರಾ ಹತ್ತೊಂಬತ್ತು ಕ್ಷೇತ್ರಗಳಲ್ಲಿ ಅಭ್ಯಾರ್ಥಿಗಳು ಸ್ಪರ್ಧಿಸಿದ್ದು, ರಾಜ್ಯದಲ್ಲಿ ಏಳು ಕ್ಷೇತ್ರಗಳಲ್ಲಿ ನಮ್ಮ ಅಭ್ಯಾರ್ಥಿಗಳಿದ್ದು, ಅದರಂತೆ ರಾಯಚೂರು ಕ್ಷೇತ್ರದ ಅಭ್ಯಾರ್ಥಿಯಾಗಿ ಸ್ಫರ್ಧಿಸಿದ್ದೆನೆ. ಕಳೆದ ಅನೇಕ ವರ್ಷಗಳಿಂದ ಸಂಘಟನೆಯ ಮೂಲಕ ಹೋರಾಟ ನಡೆಸಿ,ಅಂಗನವಾಡಿ ಕಾರ್ಯಕರ್ತೆಯರ,ಆಶಾ ಕಾರ್ಯಕರ್ತೆಯರ, ಬಿಸಿಯೂಟ ನೌಕರರ, ಕಾರ್ಮಿಕರ ಹಲವಾರು ಸಮಸ್ಯೆಗಳಿಗಾಗಿ ಹೋರಾಟ ಮಾಡಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗಿದೆ.ಅಲ್ಲದೆ ದೇಶದಲ್ಲಿರುವ ಪ್ರತಿ ಕಾರ್ಮಿಕರಿಗೆ ಕನಿಷ್ಟ ಹದಿನೆಂಟು ಸಾವಿರ ರೂಪಾಯಿ ಸಂಬಳ ನೀಡುವ ಕಾನೂನು,ಭೂ ರಹಿತರಿಗೆ ಭೂಮಿ ನೀಡಬೇಕು ಎಂಬ ಅನೇಕ ವಿಷಯಗಳನ್ನಿಟ್ಟುಕೊಂಡು ನಮ್ಮ ಎಸ್‌ಯುಸಿಐ(ಸಿ) ಪಕ್ಷದ  ಅಭ್ಯಾರ್ಥಿಯಾಗಿ ಸ್ಪರ್ಧಿಸಿದ್ದು ಮತದಾರರು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

Contact Your\'s Advertisement; 9902492681

ಎಸ್‌ಯುಸಿಐ(ಸಿ) ಕಾರ್ಯದರ್ಶಿ ವಿ.ಭಗವಾನರಡ್ಡಿ ಮಾತನಾಡಿ, ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಕಪ್ಪು ಹಣತಂದು ಎಲ್ಲರ ಖಾತೆಗೆ ಹದಿನೈದು ಲಕ್ಷ ಹಾಕುವೆ ಎಂದರು ಇಂದು ಪೈಸೆನು ತರಲಿಲ್ಲ, ಖಾತೆಗಳಿಗು ನಯಾ ಪೈಸೆ ಹಾಕಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಸುಳ್ಳು ಹೇಳಿದ್ದಾರೆ, ದೇಶದಲ್ಲಿ ಸುಮಾರು ಇಪ್ಪತ್ತೈದು ಲಕ್ಷ ಕೇಂದ್ರ ಸರಕಾರದ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿವೆ ಎಂದು ಬೇಸರ ವ್ಯಕ್ತಪಡಿಸಿ, ದೇಶದ ರೈತ, ಕಾರ್ಮಿಕ, ಮಹಿಳೆ ಮತ್ತು ಬಡವರ ಅಭೀವೃಧ್ಧಿ ಗುರಿಯಿಟ್ಟು ಕೊಂಡಿರುವ ನಮ್ಮ ಎಸ್‌ಯುಸಿಐ(ಸಿ) ಪಕ್ಷಕ್ಕೆ ಮತ ನೀಡುವಂತೆ ಕೊರಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶರಣಗೌಡ ನಗನೂರ, ಶಿವರಾಜ ಯಳವಾರ ಇದ್ದರು.

-: ರಾಜು ಕುಂಬಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here