ತಾಪಂ ಕಚೇರಿಯ ಮುಂದೆ ಸರದಿ ಉಪವಾಸ ಸತ್ಯಾಗ್ರಹ

1
124

ಶಹಾಬಾದ: ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆಯ ೨೦೧೬-೧೭ನೇ ಸಾಲಿನ ೧೦೭ ಫಲಾನುಭವಿಗಳ ಪಟ್ಟಿಯನ್ನು ಅನುಮೋದಿಸಬೇಕು ಹಾಗೂ ಎಸ್‌ಸಿಪಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ಹಣ ದುರ್ಬಳಕೆ ಮಾಡಿದ ಕೆಆರ್‌ಐಡಿಎಲ್ ಜೆಇ ಹಾಗೂ ನಿವೃತ್ತ ಎಇಇ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕಾ ಪಂಚಾಯತ ಕಚೇರಿಯ ಮುಂದೆ ಸರದಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಈ ಸಂದಭ್ದಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿಕ್ ಮಾತನಾಡಿ, ನಿವೇಶನ ರಹಿತ ಮತ್ತು ವಸತಿ ರಹಿತ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನರಿಗೆ ಸೂರು ಕಲಿಪಿಸುವುದಕ್ಕಾಗಿ ಜಾರಿಗೆ ತಂದಿರುವ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆಯ ೨೦೧೬-೧೭ನೇ ಸಾಲಿನಲ್ಲಿ ತೊನಸನಹಳ್ಳಿ(ಎಸ್) ಗ್ರಾಪಂ ಸುಮಾರು ೧೦೭ ಫಲಾನುಭವಿಗಳಿಗೆ ಸಿಗದಂತಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪಿ.ಹೆಚ್.ಡಿ. ಫೆಲೋಶೀಪ್‍ಗಾಗಿ ಅರ್ಜಿ ಆಹ್ವಾನ

ಈಗಾಗಲೇ ೧೦೭ ಜನರನ್ನು ಆಯ್ಕೆ ಮಾಡಿ ತಾಪಂಗೆ ಕಳಿಸಿದ್ದೆವೆ.ನಂತರ ಅಲ್ಲಿಂದ ನಮೂನೆ ೧೭ ಮಾಡಿ ದೃಧಿಕರಣ ಪತ್ರದೊಂದಿಗೆ ಜಿಪಂಗೆ ಕಳಿಸಲಾಗಿದೆ.ಆದರೆ ಜಿಪಂ ಅಧಿಕಾರಿಗಳು ಮಾತ್ರ ಅದನ್ನುರಾಜೀವಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಕಳಿಸದೇ ನಿರ್ಲಕ್ಷ್ಯ ತೋರಿದೆ.ಸುಮಾರು ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದ ಫಲಾನುಭವಿಗಳ ಪಟ್ಟಿ ಅನುಮೋದಿಸಬೇಕು.ಅಲ್ಲದೇ ಗೋಳಾ(ಕೆ) ಗ್ರಾಮದಲ್ಲಿ ಎಸ್‌ಸಿಪಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ಸುಮಾರು ೩೦ ಲಕ್ಷ ರೂ, ಹಣ ದುರ್ಬಳಕೆ ಮಾಡಿದ ಕೆಆರ್‌ಐಡಿಎಲ್ ಜೆಇ ಹಾಗೂ ನಿವೃತ್ತ ಎಇಇ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕೇಸ್ ದಾಖಲಿಸಬೇಕು.

ಈಗಾಗಲೇ ದೂರು ಕೂಡ ಸಲ್ಲಿಸಲಾಗಿದೆ.ಅದಕ್ಕೆ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸಿ ಕೇಸ್ ದಾಖಲಿಸಿ ಎಂದು ಪತ್ರ ಬರೆದಿದ್ದಾರೆ.ಆದರೆ ಅಧಿಕಾರಿಗಳು ಮಾತ್ರ ೬ ತಿಂಗಳಿನಿಂದ ಯಾವುದೇ ಕ್ರಮ ಕೈಗೊಳ್ಳದೇ, ದುರ್ಬಳಕೆ ಮಾಡಿದ ಅಧಿಕಾರಿಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ಕೂಡಲೇ ನಮ್ಮ ಬೇಡಿಕೆ ಈಡೇರಿವವರೆಗೂ ಪ್ರತಿಭಟನೆ ಹಮ್ಮಿಕೊಳ್ಳುತ್ತೆವೆ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಗೆ ಆರ್‌ವಿಎನ್ ಆಗ್ರಹ

ದಸಂಸ ತಾಲೂಕಾ ಸಂಚಾಲಕ ಮಹಾದೇವ ತರನಳ್ಳಿ, ರಾಮಕುಮಾರ ಸಿಂಘೆ, ಲಕ್ಷ್ಮಣ ಕೊಲ್ಲೂರ್, ತಿಪ್ಪಣ್ಣ ಧನ್ನೇಕರ್,ಶರಣು ಧನ್ನೇಕರ್,ತೇಜಸ್ ಧನ್ನಾ, ಕವಿತಾ.ಎಸ್.ಜಂಬಗಿ, ಕವಿತಾ ಸೇಡಂಕರ್,ವಿಮಲಾಬಾಯಿ,ನಾಗೇಂದ್ರಪ್ಪ ಹುಗ್ಗಿ ಸೇರಿದಂತೆ ಅನೇಕ ಜನರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here