17.16 ಕೋಟಿ ಕಾಮಗಾರಿಗೆ ಶಾಸಕಿ ಕನೀಜ್ ಫಾತೀಮಾ ಚಾಲನೆ

3
47

ಕಲಬುರಗಿ: ನಗರದ ವಾರ್ಡ್ ಸಂಖ್ಯೆ ೨೩ ರ ಫಿಲ್ಟರ್ ಬೆಡ್ ಆಶ್ರಯ ಕಾಲೋನಿಯಲ್ಲಿ ಮಹಾನಗ ಪಾಲಿಕೆ ಪೌರ ಕಾರ್ಮಿಕರರ ಗೃಹಭಾಗ್ಯ ಯೋಜನೆಯಡಿಯಲ್ಲಿ 17.16 ಕೋಟಿ ವೆಚ್ಚದ ವಸತಿ ನಿವೇಶನ ನಿರ್ಮಾಣಕ್ಕೆ ಶಾಸಕಿ ಕನೀಜ್ ಫಾತೀಮಾ ಭೂಮಿ ಪೂಜೆ ನೆರವೇರಿಸಿದರು.

ಶಾಸಕಿ ಕನೀಜ್ ಫಾತೀಮಾ ಮಾತನಾಡಿ, ಸುಮಾರು ೧೭.೧೬ ಕೋಟಿ ರೂ ವೆಚ್ಚದಲ್ಲಿ ೨ ಎಕರೆ ೧೧ ಗುಂಂಟೆ ವೀಸ್ತೀರ್ಣ ಪ್ರದೇಶದಲ್ಲಿ ೨೧೪ ಮನೆಗಳನ್ನು ನಿರ್ಮಿಸಲಾಗುತ್ತದೆ. ಅಲ್ಲದೇ ೧೮ ಅಪಾರ್ಟ್‌ಮೆಂಟ್ ಸಹ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

Contact Your\'s Advertisement; 9902492681

ವೈದ್ಯಾಧಿಕಾರಿ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ

ಎರಡು ವರ್ಷಗಳಲ್ಲಿ ಮನೆಗಳ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಇಲ್ಲಿ ವಾಸ ಮಾಡುವ ಜನರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.

ಮಾಜಿ ಮೇಯರ್ ಸೈಯದ್ ಅಹ್ಮದ್, ಫರಾಜುಲ್ ಇಸ್ಲಾಂ, ಪ್ರಮೋದ್ ತಿವಾರಿ, ಯಲ್ಲಪ್ಪ ನಾಯಿಕೋಡಿ, ಆದಿಲ್ ಸುಲೇಮಾನ್ ಸೇಠ್, ಪ್ರಭು ಹಾದಿಮನಿ, ಮಜರ್ ಆಲಂ ಖಾನ್, ಶಿವಾನಂದ ಮಾಳಗಿ, ಮಹೇಶ ಎಸ್.ಆಲಪುರ, ರಾಜು ಕಾಕಡೆ, ನೀಲಕಂಠ ಬಿರಾದಾರ, ಶರಣು ಕರಡಿ, ಶಿವಾನಂದ ಭಂಡಕ, ರಾಜು ಕಟಾರೆ, ಇಇ ಶಿವಣ್ಣಗೌಡ ಪಾಟೀಲ್, ಎಇಇ ಮಹ್ಮದ್ ಆರೀಫ್, ಗುತ್ತಿಗೆದಾರ ಈರಣ್ಣ ಮಮದಾರ, ದೇವಿಂದ್ರಪ್ಪ, ವಿನೋದ ಗೌಡ್ರು, ರಮೇಶ ರೆಡ್ಡಿ ಇದ್ದರು.

ಕರ್ತವ್ಯಲೋಪ ಇಬ್ಬರು ಅಧಿಕಾರಿಗಳು ಅಮಾನತು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here