ಸಂವಿಧಾನ ಈ ದೇಶದ ನಿಜವಾದ ಧರ್ಮ ಗ್ರಂಥ

1
30

ಶಹಾಬಾದ: ಅಂಬೇಡ್ಕರ್ ರಚಿಸಿದ ಸಂವಿಧಾನ ಈ ದೇಶದ ನಿಜವಾದ ಧರ್ಮ ಗ್ರಂಥ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಅವರು ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಆಯೋಜಿಸಲಾದ ಭಾರತ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಶಾಸಕಿ ಕನೀಜ್ ಫಾತೀಮಾ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ನಮ್ಮ ಧರ್ಮ ಗ್ರಂಥ. ಸಂವಿಧಾನ ಎಲ್ಲೆಡೆ ಸಲ್ಲುವ ಹಾಗೂ ದೇಶದ ಸ್ವಾಸ್ಥ್ಯವನ್ನು ಕಾಪಾಡುವ ನಿಜವಾದ ಧರ್ಮ ಗ್ರಂಥವಾಗಿದೆ. ದೇಶದಲ್ಲಿ ಇಂದಿಗೂ ಇರುವ ಅಸಮಾನತೆ, ಶೋ?ಣೆ, ಅಸ್ಪೃಶ್ಯತೆ ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಸೂಕ್ತ ಪರಿಹಾರವಿದೆ ಎಂದರು.

ಸಂವಿಧಾನ ಇದ್ದರೆ ಮಾತ್ರ ಸಾಲದು. ಅದರ ಅರಿವು ಎಲ್ಲರೂ ಹೊಂದಬೇಕು. ದೇಶದ ಪ್ರತಿಯೊಬ್ಬ ವ್ಯಕ್ತಿಯು ಸಂವಿಧಾನವನ್ನು ಅಧ್ಯಯನ ಮಾಡಬೇಕು. ಆಗ ಮಾತ್ರ ದೇಶದಲ್ಲಿನ ಎಲ್ಲ ಸಮಸ್ಯೆಗಳಿಗೂ ಧ್ವನಿ ಎತ್ತುವ ಶಕ್ತಿ ಬಂದು ಸಮಾನತೆ ಸೃಷ್ಟಿಯಾಗಲು ಸಾಧ್ಯವಿದೆ. ಈ ಕಾರಣದಿಂದ ಸಂವಿಧಾನದ ಅಧ್ಯಯನಕ್ಕೆ ನಾವು ಪ್ರಾಮುಖ್ಯತೆ ಕೊಡಬೇಕು ಎಂದು ತಿಳಿಸಿದರು.ತರಗತಿಯಲ್ಲಿ ಪಾಠ ಕಲಿಯುವುದಲ್ಲ. ಪುಸ್ತಕದ ಜ್ಞಾನವನ್ನು ಅರಿತುಕೊಳ್ಳಬೇಕು. ಸಂವಿಧಾನ ಬಹಳ ಮುಖ್ಯವಾದದ್ದು.ಸಮಾನತೆ ಸ್ವಾತಂತ್ರ್ಯ, ಸಂವಿಧಾನದ ತಿಳುವಳಿಕೆ ನಮಗೆ ಬೇಕು. ಕಾಯಾಂಗ, ನ್ಯಾಯಾಂಗ, ಶಾಸಕಾಂಗಗಳ ಅರಿವು ಅವಶ್ಯಕ ಎಂದು ಹೇಳಿದರು.

ಮೊಬೈಲ್‍ನಲ್ಲಿ ಮತದಾರರ ಗುರುತಿನ ಚೀಟಿ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ 

ಸರಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯಗುರು ಏಮನಾಥ ರಾಠೋಡ ಮಾತನಾಡಿ, ದೇಶದ ಸಂವಿಧಾನದ ಅರ್ಥ, ಅದು ರಚನೆಯಾದ ಬಗೆ, ಸಂವಿಧಾನದ ಅಗತ್ಯತೆ, ಅದರ ಸಾಮರ್ಥ್ಯ, ಸಾಧ್ಯತೆ ನಮ್ಮ ಕರ್ತವ್ಯ, ಹಾಗೂ ಸಂವಿಧಾನವು ಎದುರಿಸುತ್ತಿರುವ ಸವಾಲುಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯವಿದೆ ಎಂದರು. ದಸಂಸ ಸಂಚಾಲಕ ಮಲ್ಲಣ್ಣ ಮಸ್ಕಿ, ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ,ಶಿವರುದ್ರ ಗಿರೇನೂರ, ಶರಣಬಸಪ್ಪ ಮೇತ್ರೆ ಇತರರು ಇದ್ದರು.

ಅಜ್ರಾ ಸುಲ್ತಾನಾ ನಿರೂಪಿಸಿದರು, ಸಾವಿತ್ರಿ ಪತ್ತಾರ ಸ್ವಾಗತಿಸಿದರು, ವಾಣೀಶ್ರೀ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here