ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರ ೪೧ನೇ ಹುಟ್ಟು ಹಬ್ಬದ ನಿಮಿತ್ತ ಮತ್ತಿಮಡು ಅಭಿಮಾನಿಗಳ ಸಂಘದವರು ನಗರದ ವಿಠ್ಠಲ್ ರುಕ್ಮಾಯಿ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಪೆನ್ ಹಾಗೂ ಶಾಲೆಗೆ ಕಂಪ್ಯೂಟರ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜನ್ಮ ದಿನವು ಆಡಂಬರ ಮತ್ತು ಕೇವಲ ವ್ಯಯಕ್ತಿಕ ಬದುಕಿನ ಆಚರಣೆ ಆಗದೇ ಸಮುದಾಯದ ಒಳಿತಿಗಾಗಿ ಇರಬೇಕು.ಆದರೆ ಇಂದು ಜನ್ಮದಿನಗಳು ಆಡಂಬರವಾಗಿ ನಡೆಯುತ್ತಿದೆ.ಇಂತಹ ಆಚರಣೆಗಳು ಸಮಾಜದಲ್ಲಿ ಕೆಟ್ಟ ಸಂಸ್ಕೃತಿಯ ನಡೆಯನ್ನು ತೋರಿಸುತ್ತಿದೆ.
ಕಲ್ಯಾಣ ಕರ್ನಾಟಕಕ್ಕೆ ಹೆಗ್ಗಳಿಕೆ ತಂದ ಕೃಷಿ ವಿಜ್ಞಾನ ಕೇಂದ್ರ,
ಆದ್ದರಿಂದ ಜನ್ಮ ದಿನದ ಆಚರಣೆಗಳು ಸರಳವಾಗಿ ಹಾಗೂ ಸಮಾಜದ ಒಳಿತಿಗಾಗಿ ಆಗಬೇಕೆಂದರಲ್ಲದೇ, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಕೊರೊನಾದಿಂದ ಜನರು ತತ್ತರಿಸಿ ಹೋಗಿದ್ದಾರೆ.ಈ ಮಧ್ಯೆ ಜನ್ಮ ದಿನವನ್ನು ಆಚರಿಸುವುದಿಲ್ಲ.ಅಲ್ಲದೇ ಕಾರ್ಯಕರ್ತರು ಸಹಕರಿಸಬೇಕೆಂದು ತಿಳಿಸಿದ್ದರಿಂದ ನಾವು ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ಹಾಗೂ ಶಾಲೆಗೆ ಕಂಪ್ಯೂಟರ್ ವಿತರಿಸಿದ್ದೆವೆ.ಇದರ ಸದುಪಯೋಪಡಿಸಿಕೊಳ್ಳಬೇಕೆಂದು ಹೇಳಿದರು.
ಬಿಜೆಪಿ ಮುಖಂಡರಾದ ಸೂರ್ಯಕಾಂತ ವಾರದ, ಡಾ.ಅಶೋಕ ಜಿಂಗಾಡೆ, ನಿಂಗಣ್ಣ ಹುಳಗೋಳಕರ್, ನಾಗರಾಜ ಮೇಲಗಿರಿ,ವಿರೇಶ ಬಂದೆಳ್ಳಿ, ಶರಣು ವಸ್ತ್ರದ್,ಶ್ರೀಧರ ಜೋಷಿ, ದಿನೇಶ ಗೌಳಿ,ದೇವೆಂದ್ರಪ್ಪ ಯಲಗೋಡಕರ್, ಮಹಾದೇವ ಗೊಬ್ಬೂರಕರ್, ಸತೀಶ ರ‍್ಯಾಪನೂರ್, ಶಾಲೆಯ ಮುಖ್ಯಗುರು ಅಪ್ಪಾರಾವ ಪಾಟೀಲ ಸೇರಿದಮತೆ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.