ನಳ ಸಂಪರ್ಕ ನೀಡುವುದಕ್ಕೆ ಜಾಗೃತಿ

0
80

ಕಲಬುರಗಿ: ತಾಲೂಕಿನ ಮೇಳಕುಂದ ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯ  ಗ್ರಾಮದಲ್ಲಿ  ಇಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ ಮಿಷನ ಹಾಗೂ ರೂಢಾ ಸಂಸ್ಥೆ ಧಾರವಾಡ ರವರ ಸಂಯುಕ್ತಾಶ್ರಯದಲ್ಲಿ ಜಲ ಜೀವನ ಮಿಷನನ ಅಡಿಯಲ್ಲಿ ಕಾರ್ಯಾತ್ಮಕ ಮನೆ ನಳ ಸಂಪರ್ಕ ನೀಡುವುದಕ್ಕೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮನೆ-ಮನೆಗೆ ಕಾರ್ಯಾತ್ಮಕ ಮನೆ ನಳ ಸಂಪರ್ಕ ನೀಡುತ್ತಿದ್ದು, ಈ ಕಾರ್ಯಕ್ರಮದಡಿ ಸರಕಾರದಿಂದ ೯೦% ಅನುದಾನದ ನೀಡುತ್ತಿದ್ದು ಬಾಕಿ ಉಳಿದ ೧೦% ಪ್ರತಿ ಶತ ಸಮುದಾಯ ವಂತಿಕೆ ಅನುದಾನವನ್ನು ಆ ಗ್ರಾಮದ ಸಮುದಾಯದವರು ಯೋಜನೆಯಲ್ಲಿ ಭಾಗೀದಾರರಾಗಲು ಹಾಗೂ ಮಾಲೀಕತ್ವ ವಹಿಸಲು ಶೇ.೧೦% ರಷ್ಟು  ಸಮುದಾಯದ ವಂತಿಕೆ ಸಂಗ್ರಹಣೆ ಅಭಿಯಾನವನ್ನು ಆಯೋಜಿಸಲಾಗಿತ್ತು.

Contact Your\'s Advertisement; 9902492681

ಭಾರತ್ ಫೈನಾನ್ಸಿಯಲ್ ಇನ್ಕ್ಲೂಷನ್ ಲಿಮಿಟೆಡ್ ಮುಖಾಂತರ ಶುದ್ಧ ಕುಡಿಯುವ ನೀರು

ಜಲ ಜೀವನ ಮಿಷನ ಯೋಜನೆಯ ಡಿಪಿಎಂ. ಡಾ.ರಾಜು ಕಂಬಾಳಿಮಠ ರವರು ಮಾತನಾಡಿ ಜಲ ಜೀವನ ಮಿಷನ್ ಯೋಜನೆ ಯಶಸ್ವಿಯಾಗಬೇಕಾದರೆ ಸಮುದಾಯದ ಪಾತ್ರ ಅವಶ್ಯಕವಾಗಿದೆ ಮತ್ತು ಸ್ವಚ್ಛ ಭಾರತ ಮಿಷನ ಅಡಿಯಲ್ಲಿ ವೈಯಕ್ತಿಕ ಶೌಚಾಲಯ , ಬಚ್ಚಲು ಗುಂಡಿ, ಮಾಡಿಕೊಳ್ಳುವಂತೆ ಹಾಗೂ  ಜೆಜೆಎಂ ಅಡಿಯಲ್ಲಿ ಕೌಶಲ್ಯಧಾರಿತ ತರಬೇತಿಗಳನ್ನು ಆಯೋಜಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಪಿಡಿಓ ಶರ್ಪೋದ್ದೀನ್ ನಧಾಫ್ ಹಾಗೂ ಗ್ರಾಮ ನೀರು ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ನಾಗಣ್ಣ ಶ್ರೀಮಂತ, ಉಪಾಧ್ಯಕ್ಷರಾದ ಲಕ್ಷ್ಮೀಬಾಯಿ ಹಣಮಂತ, ಕಸ್ತೂರಿ ಬಾಯಿ, ರಮೇಶ ಹತ್ತಿ, ವಿಜಯಲಕ್ಷ್ಮಿ  ನಾಗಣಗೌq, ಶರಣಬಸಪ್ಪಾ ಹಾಗರಗಿ, ಗಂಗಮ್ಮ ರಾಮಚಂದ್ರ , ಸಂಗಮ್ಮಾ ಚಂದ್ರಶೇಖರ , ಬಾಬುರಾವ ಪಾಟೀಲ್ ರವರುಗಳ ನೇತೃತ್ವದಲ್ಲಿ ಮನೆ-ಮೆನೆಗೆ ಜಾಥ ಮೂಲಕ ಭೇಟಿ ನೀಡಿದ ಸಂದರ್ಭದಲ್ಲಿ ೪೪೦೦ ರೂ. ಸಮುದಾಯ ವಂತಿಕೆ ಸಂಗ್ರಹಣೆಗೊಂಡಿತು.

ನಾಳೆ ಖ್ಯಾತ ಹೋರಾಟಗಾರರ ಯೋಗೇಂದ್ರ ಯಾದವ್ ಕಲಬುರಗಿಗೆ

ರೂಡಾ ಸಂಸ್ಥೆಯ ತಂಡದ ನಾಯಕರಾದ ಸಂತೋಷ ಮೂಲಗೆ, ಸುರೇಶ ಪಟ್ನಾಯಕ್ , ಶ್ರವಣಕುಮಾರ, ರಮೇಶ ಸಾವಳಗಿ  ಹಾಗೂ ಊರಿನ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here