ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ

0
47

ಸುರಪುರ: ತಾಲೂಕಿನ ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಹಾಗು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ನಗರದಲ್ಲಿ ಪತ್ರಿಕಾ ಭವನ ನಿರ್ಮಾಣದ ಕುರಿತು ಅನೇಕ ವರ್ಷಗಳಿಂದ ಶಾಸಕರಿಗೆ ಮನವಿ ಮಾಡಲಾಗಿದೆ,ಶಾಸಕರು ಕೂಡ ಭವನ ನಿರ್ಮಾಣಕ್ಕೆ ಅನುದಾನ ಕೊಡುವ ಭರವಸೆಯನ್ನು ನೀಡಿದ್ದಾರೆ.ಆದ್ದರಿಂದ ನಗರಸಭೆಯಿಂದ ನಿವೇಶನ ಒದಗಿಸುವಂತೆ ವಿನಂತಿಸಿದರು.ಅಲ್ಲದೆ ಅನೇಕ ಜನ ಪತ್ರಕರ್ತರು ಇಂದಿಗೂ ಸ್ವಂತ ಮನೆಗಳಿಲ್ಲದೆ ಬಾಡಿಗೆ ಮನೆಗಳಲ್ಲಿದ್ದು ದುಡಿದ ಹಣವೆಲ್ಲ ಬಾಡಿಗೆ ಕಟ್ಟುವ ಸ್ಥಿತಿಯಲ್ಲಿದ್ದಾರೆ.

Contact Your\'s Advertisement; 9902492681

ಕಲಬುರಗಿ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

ಆದ್ದರಿಂದ ನಗರಸಭೆಯಿಂದ ನಿರಾಶ್ರಿತರಿಗೆ ನಿವೇಶನಗಳ ಹಂಚುವಲ್ಲಿ ಪ್ರತಿಶತ ೫% ರಷ್ಟು ನಿವೇಶನಗಳನ್ನು ಪತ್ರಕರ್ತರಿಗೆ ಮೀಸಲಿರಿಸಬೇಕು ಹಾಗು ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಮೃತಪಟ್ಟಿದ್ದು ಅವರಿಗೆ ಯಾವುದೇ ನೆರವು ಇಲ್ಲದೆ ಆ ಕುಟುಂಬಗಳು ಸಂಕಷ್ಟ ಹೆದರಿಸುತ್ತಿರುವುದು ತಮಗೆಲ್ಲ ತಿಳಿದ ಸಂಗತಿಯಾಗಿದೆ.ಆದ್ದರಿಂದ ಪ್ರತಿಬಾರಿಯ ನಗರಸಭೆ ಬಜೆಟ್‌ನಲ್ಲಿ ಪತ್ರಕರ್ತರ ಕಲ್ಯಾಣ ನಿಧಿಯೆಂದು ವಿಶೇಷ ಅನುದಾನ ಮೀಸಲಿರಿಸುವಂತೆ ಮನವಿ ಮಾಡಿದರು.

ನಂತರ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ ಉಪಾಧ್ಯಕ್ಷ ಮಹೇಶ ಪಾಟೀಲ್ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ (ತಾತಾ) ಹಾಗು ಸದಸ್ಯರಾದ ವೇಣುಮಾಧವ ನಾಯಕ ಸೋಮನಾಥ ಡೊಣ್ಣಿಗೇರಾ ನರಸಿಂಹಕಾಂತ ಪಂಚಮಗಿರಿ ನಾಸಿರ್ ಕುಂಡಾಲೆ ವಿಷ್ಣು ಗುತ್ತೇದಾರ ಹಾಗು ಕೆಜೆಯು ಉಪಾಧ್ಯಕ್ಷ ಮಲ್ಲು ಗುಳಗಿ ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ ಮಹಾದೇವಪ್ಪ ಬೊಮ್ಮನಹಳ್ಳಿ ಕಲೀಂ ಫರೀದಿ ಮುರುಳಿಧರ ಅಂಬುರೆ ಮನಮೋಹನ ಪ್ರತಿಹಸ್ತ ರಾಘವೇಂದ್ರ ಮಾಸ್ತರ್ ನಾಗರಾಜ ದೇಸಾಯಿ ಮದನ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here