ಸಾರ್ವಜನಿಕ ಶೌಚಾಲಯ ಕುಡಿಯುವ ನೀರು ಸರಬರಾಜಿಗೆ ಮನವಿ

0
92

ಸುರಪುರ: ನಗರದಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ಜನರು ಮನೆಯಿಂದ ಹೊರಗೆ ಬರಬೇಕಾದರೆ ಗಂಭೀರವಾಗಿ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಲ್ಯಾಣ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರು ಬೇಸರ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಆಗಮಿಸಿದ ಅನೇಕ ಜನ ಮುಖಂಡರು ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿ,ನಗರದ ಎಲ್ಲೆಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಮತ್ತು ಕುಡಿಯುವ ನೀರಿನ ಅಭಾವ ತೀವ್ರವಾಗುತ್ತಿದೆ,ಬೇಸಿಗೆ ಆರಂಭವಾಗಿದ್ದು ಜನರಿಗೆ ಸರಿಯಾಗಿ ಕುಡಿಯುವ ನೀರು ಪೂರೈಸಬೇಕು ಹಾಗು ನಗರದಲ್ಲಿ ಅನೇಕ ಜನ ಪ್ರಭಾವಿಗಳು ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ,ಇದೆಲ್ಲವನ್ನು ತನಿಖೆ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

Contact Your\'s Advertisement; 9902492681

ರೈತರ ಬೆಳೆಗಳಿಗೆ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಜಾಲಿಬೆಂಚಿ ರೈತರ ಮನವಿ

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್ ಸದಸ್ಯರಾದ ರಾಜಾ ಪಿಡ್ಡನಾಯಕ ವೇಣುಮಾಧವ ನಾಯಕ ಸೋಮನಾಥ ಡೊಣ್ಣಿಗೇರಾ ನರಸಿಂಹಕಾಂತ ಪಂಚಮಗಿರಿ ವಿಷ್ಣು ಗುತ್ತೇದಾರ ಪೌರಾಯುಕ್ತ ಜೀವನ್ ಕಟ್ಟಿಮನಿ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಹಾಗು ಮುಖಂಡರಾದ ಶ್ರೀಹರಿರಾವ್ ಆದವಾನಿ ರಾಜಾ ಪಿಡ್ಡನಾಯಕ ಗುರುನಾಥರಡ್ಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here