ಭ್ರಷ್ಟ ಆಡಳಿತ ಫಲ; ಕಲಬುರಗಿ ಜಿಲ್ಲೆ ಅಕ್ರಮಗಳ ತಾಣ:  ಶಾಸಕ ಖರ್ಗೆ ಆಕ್ರೋಶ

0
64

ಕಲಬುರಗಿ: ಜಿಲ್ಲೆಯಲ್ಲಿ ಹೆಚ್ಚು ಗಾಂಜಾ ಮಾರಾಟ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದೆ ಬೆನ್ನಲ್ಲೆ ಆಡಳಿತ ವ್ಯವಸ್ಥೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರಕಾರದ ಭ್ರಷ್ಟ ಆಡಳಿತ ಫಲವಾಗಿ ಕಲಬುರಗಿ ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಟೀಕಿಸಿ, ಇದು ಆಘಾತಕಾರಿ ವಿಷಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಆತಂಕದ ನಡುವೆಯೆ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ರೂ 91.84 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಪ್ರಮಾಣದ ಗಾಂಜಾ ಮೌಲ್ಯವೇ ಇಷ್ಟಿರುವಾಗ ಅಕ್ರಮವಾಗಿ ಮಾರಾಟವಾದ ಗಾಂಜಾ ಎಷ್ಟಿರಬಹುದು ಎಂಬುದೇ ಊಹಿಸಲಸಾಧ್ಯ ಎಂದಿದ್ದಾರೆ.

Contact Your\'s Advertisement; 9902492681

ಗೃಹ ಸಚಿವರ ಹೇಳಿಕೆಯನ್ನು ಪ್ರಸ್ತಾಪಿಸಿರುವ ಪ್ರಿಯಾಂಕ್ ಖರ್ಗೆ ಅವರು ಐಪಿಎಲ್ ಬೆಟ್ಟಿಂಗ್, ಮಟ್ಕಾ ಹಾವಳಿಗೆ ಇಂದಿನ ಯುವಕರು ಬಲಿಯಾಗತೊಡಗಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳು ಅನಾಯಾಸವಾಗಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇವೆ. ಬಿಜೆಪಿ ಸರ್ಕಾರದಲ್ಲೇ ಹೆಚ್ಚಾಗಲು ಕಾರಣಗಳೇನು? ಇದರಲ್ಲಿ ಯಾರ ಕೈವಾಡವಿದೆ? ಸಿಎಂ ಯಡಿಯೂರಪ್ಪ ನವರು ಹಾಗೂ ಗೃಹ ಸಚಿವರು ಇದುವರೆಗೆ ಯಾವ ಕ್ರಮ ಕೈಗೊಳ್ಳದಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಅಸ್ಪೃಶ್ಯತೆ ಹೋಗಲಾಡಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು: ಬಸವರಾಜ.ಕೆ ತೋಟದ್

ಈಗಾಗಲೇ ಸರ್ಕಾರ ನಮ್ಮ ಜಿಲ್ಲೆಯಲ್ಲಿ ಇದ್ದ ಹಾಗೂ ಬರಬೇಕಿದ್ದ ಎಲ್ಲಾ ಸಂಪನ್ಮೂಲಗಳನ್ನು ಕಸಿದುಕೊಂಡಿದೆ. ಇದು ಹೀಗೆ ಮುಂದುವರೆದರೆ ನಮ್ಮ ಜಿಲ್ಲೆಯ ಬೆಳವಣಿಗೆಗೆ ಇರುವ ಏಕೈಕ ಸಂಪತ್ತಾಗಿರುವ ಯುವ ಜನರನ್ನೂ ನಾವು ಕಳೆದುಕೊಳ್ಳಲಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಕೃಪಾಪೋಷಿತ ಅಕ್ರಮ ಚಟುವಟಿಕೆಗಳ ರೇಟ್ ಕಾರ್ಡ್ ಜಿಲ್ಲೆಯನ್ನೇ ಆಹುತಿ ಪಡೆಯುತ್ತಿದೆ. ಈ ಕುರಿತು ನಾನು ಕಳೆದ ಹಲವು ತಿಂಗಳುಗಳಿಂದ ಪ್ರತಿಪಾದಿಸುತ್ತಾ ಬಂದಿದ್ದೆ ಎಂದು ತಮ್ಮ ಹೇಳಿಕೆಯನ್ನು ಪ್ರಸ್ತಾಸಿರುವ ಪ್ರಿಯಾಂಕ್ ಖರ್ಗೆ ಅವರು ನನ್ನ ಮಾತುಗಳನ್ನೇ ಇಂದು ಸರ್ಕಾರ ಒಪ್ಪಿಕೊಂಡಿದೆ ಎಂದು ಒತ್ತಿ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here