ದಲಿತ ಪಾಲಿನ ಆಶಾಕಿರಣ ಡಾ:ಬಾಬಾ ಸಾಹೇಬ್ ಅಂಬೇಡ್ಕರ: ಹೊಸ್ಮನಿ

0
34

ಸುರಪುರ:ಡಾ:ಬಿ.ಆರ್.ಅಂಬೇಡ್ಕರರು ಈ ದೇಶದ ಶೋಷಿತರ ತುಳಿತಕ್ಕೊಳಗಾದವರ ಹಾಗು ಸಮಾನತೆ ವಿರುದ್ಧ ಹೋರಾಡಿದ ಮಹಾನಾಯಕ ಮತ್ತು ದಲಿತರ ಪಾಲಿನ ಆಶಾ ಕಿರಣರಾಗಿದ್ದಾರೆ ಎಂದು ಯುವ ವಕೀಲ ಆದಪ್ಪ ಹೊಸಮನಿ ಮಾತನಾಡಿದರು.

ನಗರದ ಡಾ:ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಡಾ:ಬಾಬಾ ಸಾಹೇಬ್ ಅಂಬೇಡ್ಕರರ ೧೩೦ನೇ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿ,ಅಂಬೇಡ್ಕರರು ಬಾಲ್ಯದ ಜೀವನದಲ್ಲಿ ಅನೇಕ ಅವಮಾನಗಳನ್ನು ಹೆದರಿಸಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಮತ್ತು ಹೊರ ದೇಶಗಳಲ್ಲಿ ಮೂರು ಡಾಕ್ಟರೇಟ್ ಪಡೆದ ಅಲ್ಲದೆ ಬಾರ್-ಎಟ್-ಲಾ ಪದವಿ ಮುಗಿಸಿದ ದೇಶದ ಮೊದಲನೇ ವ್ಯಕ್ತಿಯಾಗಿದ್ದರು ಎಂದರು.

Contact Your\'s Advertisement; 9902492681

ದೇಶದ ಸರ್ವಜನರು ಒಪ್ಪುವಂತ ಸಂವಿಧಾನ ರಚಿಸಿ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಮೀಸಲಾತಿ ನೀಡುವ ಮೂಲಕ ಇಂದು ರಾಜಕೀಯವಾಗಿ ದಲಿತರು ಲೋಕಸಭೆ ಸದಸ್ಯರಾಗಿ ಇನ್ನುಳಿದ ಸ್ಥಳಿಯ ಸಂಸ್ಥೆಗಳ ಅಧ್ಯಕ್ಷರಾಗಿರುವುದು ಅಂಬೇಡ್ಕರ ಅವರ ಕೊಡುಗೆಯಾಗಿದೆ ಆಗಿದ್ದರಿಂದ ಅಂಬೇಡ್ಕರರನ್ನು ಗೌರವಿಸುವುದು ಮತ್ತು ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ವೇಣುಗೋಪಾಲ ಜೇವರ್ಗಿಯವರು ಮಾತನಾಡಿ,ಅಂಬೇಡ್ಕರರು ಸ್ವಾತಂತ್ರ್ಯದ ಹಕ್ಕು ಸಮಾನತೆಯ ಹಕ್ಕು ರಾಜಕೀಯ ಹಕ್ಕು ಮೀಸಲಾತಿ ಹಕ್ಕು ನೀಡಿದಂತಹ ಮಹಾನ್ ಪುರುಷರಾಗಿದ್ದಾರೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿಯವರು ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ ಮೂಲಕ ಗೌರವಿಸಿದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ನಗರಸಭೆ ಸದಸ್ಯರಾದ ಶವಕುಮಾರ ಕಟ್ಟಿಮನಿ ಮಾಜಿ ನಗರಸಭೆ ಸದಸ್ಯ ವೆಂಕಟೇಶ ಹೊಸ್ಮನಿ ಮುಖಂಡರಾದ ಮಾನಪ್ಪ ಕಟ್ಟಿಮನಿ ಮಾಳಪ್ಪ ಕಿರದಹಳ್ಳಿ ಶಿವಲಿಂಗ ಹಸನಾಪುರ ಮೂರ್ತಿ ಬೊಮ್ಮನಹಳ್ಳಿ ರಮೇಶ ಅರಕೇರಿ ನೈರ್ಮಲ್ಯ ಅಧಿಕಾರಿ ಲಕ್ಷ್ಮಣ ಕಟ್ಟಿಮನಿ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಅಜ್ಮೀರ ಖುರೇಶಿ ಎಮ್.ಪಟೇಲ್ ಸೇರಿಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here