ವೈಚಾರಿಕತೆ ಜೀವಪರ ಚಿಂತನೆ ಪ್ರೇರೆಪಿಸುತ್ತದೆ: ಪ್ರೊ. ಮಲ್ಲಿಕಾ ಘಂಟಿ

0
20

ಕಲಬುರಗಿ: ಡಾ. ಎಂ.ಎಂ. ಕಲ್ಬುರ್ಗಿ ಅವರು ಚಿಂತನೆ, ವೈಚಾರಿಕತೆ, ಜೀವಪರ ಚಿಂತನೆಗಳು ನನ್ನನ್ನ ಪ್ರೇರೆಪಿಸಿದವು. ನಾವು ನಮ್ಮ ಓದು ಬರವನ್ನು ವಿಸ್ತರಿಸಿಕೊಳ್ಳಬೇಕು. ಓದು ಚೈತನ್ಯವನ್ನು ಉಂಟು ಮಾಡುತ್ತದೆ. ಮಹಿಳೆ ಕನ್ನಡ ಸಾಹಿತ್ಯಕ್ಕೆ ತೊಡಗಿಸಿಕೊಂಡ ರೀತಿಯನ್ನು ನಮ್ಮ ಕಣ್ಣಲ್ಲಿ ನೀವು ಎಂಬ ವಿಷಯ ಕುರಿತು ವಿಚಾರ ಸಂಕಿರಣ ಏರ್ಪಡಿಸಿದಿವಿ. ಅದು ಕೃತಿಯಾಗಿ ಕೂಡ ಹೊರಬಂದಿದೆ. ಮಹಿಳಾ ಪರ ವಿಚಾರ ಹೆಣ್ಣಿನ ಆಕೃತಿ ಚೇಹರಾಗಳನ್ನು ಪರಿಭಾವಿಸಿದ ರೀತಿ ಕನ್ನಡ ಸಾಹಿತ್ಯ ವಿಶಿಷ್ಟವಾಗಿದೆ. ಪುರುಷ ಲೇಖಕರು ಕೂಡ ಕೆಲವೊಮ್ಮೆ ಮಹಿಳಾ ಪರ ಬದಲಾವಣೆ ಹೊಂದಿದ್ದರು. ಕನಿಕರಕ್ಕಿಂತಲು ಹೆಣ್ಣಿಗೆ ಸಬಲೀಕರಣ, ಸ್ವಾತಂತ್ರ್ಯ, ಹಕ್ಕು ಹಾಗೂ ಅವಕಾಶಗಳನ್ನು ನೀಡಬೇಕೆಂದು ಕನ್ನಡ ವಿಶ್ವವಿದ್ಯಾಲಯ, ಹಂಪಿಯ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲಿಕಾ ಘಂಟಿ ಹಿಂದೆ ತಾವು ಇಲ್ಲಿ ಕಳೆದ ದಿನಗಳ ಕುರಿತು ಸ್ಮರಿಸಿಕೊಂಡರು.

ಇಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಮತ್ತು ಮಹಿಳೆ ಎಂಬ ವಿಷಯ ಕುರಿತು  ಕನ್ನಡ ವಿಶ್ವವಿದ್ಯಾಲಯ, ಹಂಪಿಯ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲಿಕಾ ಘಂಟಿ ಅವರು ಮಾತನಾಡುತ್ತ ಸಂಚಿಹೊನ್ನಮ್ಮ ಹೇಳಿದಂತೆ ಉಳಿಗಮಾನ್ಯ ವ್ಯವಸ್ಥೆಯನ್ನು ವಿರೋಧಿಸಿದು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. ೧೨ನೇ ಶತಮಾನದ ಜೇಡರ ದಾಸಿಮಯ್ಯ ಗೊಗ್ಗವ್ವೆಯರ ವಚನಗಳು ಅತ್ಯಂತ ಪ್ರಮುಖವಾಗಿವೆ. ಜ್ಞಾನ ಮಹಿಳೆಯರಿಗೂ ಸಿಗಬೇಕು. ಜ್ಞಾನ ದೊರಕಿದಾಗ ಮೋಕ್ಷ ಸಾಧ್ಯ. ಜ್ಞಾನ ಮೂಲದಿಂದ ಹೊರಗಿಡುವಂತದ್ದು ದುರಂತದ ಸಂಗತಿ ಎಂದರು.

Contact Your\'s Advertisement; 9902492681

ಲಿಂ. ಶ್ರೀ ನರಸಿಂಗರಾವ್ ಎಮ್. ಗಾಜರೆ ಸ್ಮರಣಾರ್ಥ ದತ್ತಿ ಕಾರ್ಯಕ್ರಮ

ಹೆಣ್ಣಿಗೆ ಬೇಕಾದ ಜ್ಞಾನ ಸಂಪತ್ತು ವಂಚಿಸಿದ ಕಾರಣಕ್ಕೆ ಮಹಿಳೆಯರು ಅಕ್ಷರ ಜ್ಞಾನದಿಂದ ವಂಚಿತರಾದರು. ಸಾಹಿತ್ಯವನ್ನು ಹೋರಾಟದ ಹಿನ್ನಲೆಯಲ್ಲಿ ಸಾಮಾಜಿಕ ಹಿನ್ನಲೆಯಲ್ಲಿ ನಾನು ಸಾಹಿತ್ಯಕವಾಗಿ ತೊಡಗಿಸಿಕೊಂಡೆ. ಮಹಿಳೆಯರು ಸಾಮಾಜಿಕವಾಗಿ ತಮ್ಮ ನೋವು ಕಷ್ಟ ಕಾರ್ಪಣ್ಯ, ಸಮಾಜದ ಪ್ರತಿಬಿಂಬ ಎನ್ನುವಂತೆ ಹೆಣ್ಣಿನ ಸಾಮರ್ಥ್ಯವನ್ನು ವಿಶ್ಲೇಷಿಸುವಂತಹ ಕೆಲಸ ಆಧುನಿಕ ಸಂದರ್ಭದಲ್ಲಿ ನಡೆಯಿತು. ಕಾರ್ಮಿಕ ಹೋರಾಟದಲ್ಲಿ ಕೂಡ ಮಹಿಳೆಯರು ತೊಡಗಿಸಿಕೊಂಡರು ಎಂಬುದು ಕಾಣಬಹುದು. ಸಂಪ್ರದಾಯವಾದಿಗಳು ಬುದ್ಧಿ ಜೀವಿಗಳಿಂದಲೇ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಧಕ್ಕೆ ಎನ್ನುವ ರೀತಿಯಲ್ಲಿ ನಿರಾಕರಿಸಿದೆ. ಮಹಿಳೆಯರು ಸಹ ಪುರುಷರ ಗ್ರಹಿಕೆಯಂತೆ ಬರೆದದ್ದು ಕನ್ನಡ ಸಾಹಿತ್ಯದಲ್ಲಿ ಕಾಣಬಹುದು.

ಈ ಸಂದರ್ಭದಲ್ಲಿ ಹಲವಾರು ಜನ ಮಹಿಳಾ ಲೇಖಕಿಯರು ಹೊಸಗನ್ನಡ ಸಾಹಿತ್ಯ ಘಟ್ಟದಲ್ಲಿ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ತೊಡಗಿಸಿಕೊಂಡದ್ದು ಚರಿತ್ರೆ. ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು, ಕಲಾನಿಕಾಯದ ಡೀನರಾದ ಪ್ರೊ. ಎಚ್.ಟಿ. ಪೋತೆ ಅವರ ಮಾತನಾಡುತ್ತ್ತಾ, ಒಂದು ರೈತ ಕುಟುಂಬದಿಂದ ಬಂದ ಮಹಿಳೆ ವಿದ್ಯಾರ್ಥಿಗಳಿಗೆ ತನು, ಮನ, ಧನದಿಂದ ಸಹಕಾರ ನೀಡಿ ಪ್ರೋತ್ಸಾಹಿಸಿದಂತಹವರು ಪ್ರೊ. ಮಲ್ಲಿಕಾ ಘಂಟಿ ಅವರು. ಅವರ ಹಲವಾರು ವಿಚಾರ, ಚಿಂತನೆಗಳು ಸಂಘರ್ಷಾತ್ಮಕ, ಸಂಘಟನಾತ್ಮಕ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದ್ದರು. ಇಂತಹ ಪ್ರಕಾರ ಚಿಂತಕಿ, ನೇರ ನೇರವಾಗಿ ಮಾತಾಡುವ ಸಾಹಿತಿ, ಕವಿಯಿತ್ರಿ, ಬಂಡಾಯ ಬರಗಾರ್ತಿ ಸ್ತ್ರೀವಾದಿ ಚಿಂತಕಿ ನಿಮ್ಮಗೆಲ್ಲ ಆದರ್ಶವಾಗಬೇಕು ಎಂದು ವಿದ್ಯಾರ್ಥಿಗಳನ್ನು ಕುರಿತು ಸಲಹೆ ನೀಡಿದರು. ಕನ್ನಡ ಅಧ್ಯಯನ ಸಂಸ್ಥೆ ಬೆಳಸಿರುವಂತರಲ್ಲಿ ಪ್ರೊ. ಮಲ್ಲಿಕಾ ಘಂಟಿ ಅವರು ಕೂಡಾ ಒಬ್ಬರು. ಅವರನ್ನ ನಾನು ವಿದ್ಯಾ ಗುರುಗಳಾಗಿ ಪಡೆದುದ್ದು ನನ್ನ ಸೌಭಾಗ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಾದ ನೀವು ಓದಿನಡೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.

ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗುತ್ತವೆ: ಯಾರಿ

ವೇದಿಕೆಯ ಮೇಲೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ವಿಕ್ರಮ ವಿಸಾಜಿ ಉಪಸ್ಥಿರಿದ್ದರು. ಕಾರ್ಯಕ್ರಮದಲ್ಲಿ ಡಾ. ಸೂರ್ಯಕಾಂತ ಸುಜ್ಯಾತ್, ಡಾ. ಶ್ರೀಶೈಲ ನಾಗರಾಳ, ಡಾ. ಎಚ್.ಎಸ್. ಹೊಸಮನಿ, ಡಾ. ಶಾಂತಪ್ಪ ಡಂಬಳ ಮತ್ತು ಕನ್ನಡ ಅಧ್ಯಯನ ಸಂಸ್ಥೆ ಅತಿಥಿ ಉಪನ್ಯಾಸಕರು, ಸಂಶೋಧನ, ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು. ಡಾ. ಎಂ.ಬಿ. ಕಟ್ಟಿ ಸರ್ವರನ್ನು ಸ್ವಾಗತಿಸಿದರು. ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿದರು, ಡಾ. ಹಣಮಂತ ಮೇಲಕೇರಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here