ನಿಯಮ ಮೀರಿ ವ್ಯಾಪಾರ ನಡೆಸಿದವರಿಗೆ ದಂಡದ ಎಚ್ಚರಿಕೆ

0
34

ಸುರಪುರ: ಜಿಲ್ಲೆಯಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿ ಅಗತ್ಯ ವಸ್ತುಗಳ ಮಾರಾಟವನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯದಂತೆ ಆದೇಶ ಹೊರಡಿಸಿದ್ದರು,ಆದೇಶವನ್ನು ಧಿಕ್ಕರಿಸಿರುವ ಅನೇಕ ಜನ ಬಂಗಾರ ಮತ್ತಿತರೆ ಅಂಗಡಿಗಳ ವ್ಯಾಪಾರಿಗಳು ಕದ್ದು ಮುಚ್ಚಿ ವ್ಯಾಪಾರ ನಡೆಸುತ್ತಿದ್ದು,ಇಂತಹ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಸಿಬ್ಬಂದಿಗಳು ಕದ್ದು ಮುಚ್ಚಿ ವ್ಯಾಪಾರ ನಡೆಸುತ್ತಿದ್ದ ಅನೇಕ ಅಂಗಡಿಗಳಿಗೆ ದಂಡ ವಿಧಿಸಿ ಮತ್ತೊಮ್ಮೆ ವ್ಯಾಪಾರ ನಡೆಸದಂತೆ ಎಚ್ಚರಿಕೆ ನೀಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here