ಕಲಬುರಗಿ: ಇಂದು ಬೆಳಿಗ್ಗೆ ನಂದೂರ ಚೋಪ್ಲಾ ನಾಯಕ ತಾಂಡ ಮೀನಾಬಾಯಿ ಗಂಡ ಭದ್ರು ಚವ್ಹಾಣ (೫೮) ಉಸಿರಾಟದ ತೊಂದರೆ ಆಗಿದ್ದು ಕಲಬುರಗಿಯ ಇ ಎಸ್ ಐ ಆಸ್ಪತ್ರೆಗೆ ತಂದಾಗ ಬೆಡ್ ಸಿಗದೆ ೨ ಗಂಟೆವರೆಗೆ ವೀಲ್ ಚೇರ್ ಮೇಲೆ ನರಳಿ ಮೃತಪಟ್ಟಿದಾರೆ.
ಈ ಸಾವಿಗೆ ಸರ್ಕಾರವೇ ನೇರ ಹೋಣೆಯಾಗಿದ್ದು ರೋಗಿಗಳ ಚಿಕಿತ್ಸೆಯ ನಿರ್ವಾಹಣೆಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು ಮೃತರ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ನೀಡಬೇಕು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ಡಾ ರವಿ ಚವ್ಹಾಣ ಆಗ್ರಹಿಸಿದಾರೆ.
ಬಾಪುಗೌಡ ದಶ೯ನಾಫೂರ ರಂಗ ಮಂದಿರ ಬಾಕಿ ಉಳಿದಿರುವ ಅನುಧಾನ ಬಿಡುಗಡೆಗೆ ಆಗ್ರಹ
ರಾಜ್ಯದಲ್ಲಿ ಜನರ ಕೋವಿಡ್ ಗಿಂತಲೂ ಜಾಸ್ತಿ ಸರ್ಕಾರದ ನಿರ್ಲಕ್ಷದಿಂದಲೇ ಸಾಯುತ್ತಿದಾರೆ. ಆದರೂ ಸಹ ಸರ್ಕಾರ ಎಚ್ಚೆತುಕೊಂಡಿಲ್ಲ ಮತ್ತು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಡಾ. ರವಿ ಚವ್ಹಾಣ ಆರೋಪಿಸಿದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿರುವ ಅವರು ಕೊರೊನಾದಿಂದಾಗಿ ಮೃತಪಟ್ಟ ನಂತರ ಹಾಗೂ ಕೋವಿಡ್ ನಿಂದ ಗುಣಮುಖರಾದ ನಂತರ ವರದಿಗಳು ಅವರ ಮುಬೈಲ್ ಗೆ ಪಾಸಿಟಿವ್ ಎಂದು ಬರುತ್ತಿದೆ. ಅಲ್ಲದೆ ಕೊರೊನಾ ಸೊಂಕಿತರಲ್ಲದವರೂ ಸಹ ಸರ್ಕಾರದ ಬೇಜವಾಬ್ದಾರಿತನಕ್ಕೆ ಹೆದರಿ ಸಾಯುತ್ತಿದಾರೆ.