ಕಲಬುರಗಿ: ಬಸವಣ್ಣ ವಿಶ್ವಕ್ಕೆ ಬೆಳಕು ಕರುಣಿಸಿದ ಜ್ಞಾನಸೂರ್ಯ ಬಸವಣ್ಣನ ಹೆಸರೇ ಮಂತ್ರಸದೃಶ. ಸಮಾಜ ಸುಧಾರಕರಾಗಿ ಸಂಘಟಕರಾಗಿ, ಆತ್ಮಕಲ್ಯಾಣದಜೊತೆಗೆ ಲೋಕ ಕಲ್ಯಾಣವನ್ನು ಸಾಧಿಸಿದ ಹೃದಯ ಶ್ರೀಮಂತರು.ಎನಗಿಂತಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲಎನ್ನುತ್ತಾ ಶರಣ ಸಮೂಹದಲ್ಲಿ ಹಿರಿದಾದ ಸ್ಥಾನವನ್ನು ಗಳಿಸಿಕೊಂಡ ಮಹಾನುಭಾವಿಗಳು.
ಕಲಬುರಗಿ ಬಸವ ಸಮಿತಿಯಅನುಭವ ಮಂಟಪದಲ್ಲಿ ಹಮ್ಮಿಕೊಂಡ ವಿಶ್ವ ಬಸವ ಜಯಂತಿಅಂತರ್ಜಾಲಕಾರ್ಯಕ್ರಮದಲ್ಲಿ ’ಹೇಗೆ ಮನ ಹಾಗೆ ಘನ ವಿಷಯಕುರಿತುಅನುಭಾವ ನೀಡುತ್ತಾ ಮಾತನಾಡಿದ ಸಾಣೆ ಹಳ್ಳಿ ಮಠದ ಪೂಜ್ಯರಾದಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಬಸವಣ್ಣನವರಿಗೆ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವದೇಜಪವಾಗಿತ್ತು.ಸಮ ಸಮಾಜದಕನಸನ್ನು ನನಸು ಮಾಡಿದ ಧೀಮಂತ ಪುರುಷರಾಗಿದ್ದರು.ಲಿಂಗಾಯತಧರ್ಮವನ್ನು ಸ್ಥಾಪನೆ ಮಾಡಿತನ್ಮೂಲಕಕಾಯಕದಾಸೋಹ, ಇಷ್ಟಲಿಂಗ ಪೂಜೆ ತತ್ತ್ವಗಳನ್ನು ಎತ್ತಿ ಹಿಡಿದುಕಲ್ಯಾಣರಾಜ್ಯದ ಸ್ಥಾಪನೆಗೆ ಕಾರಣರಾದವರು.
ಬಸವಣ್ಣನವರಉದರದಲ್ಲಿಗುರು-ಲಿಂಗ-ಜಂಗಮಇತ್ಯಾದಿ ತತ್ತ್ವಗಳು ಉದಯವಾದವುಎಂಬುದು ಶರಣರಅಭಿಪ್ರಾಯ ಬಸವಣ್ಣನವರು ವ್ಯಕ್ತಿಯೋರ್ವನ ವ್ಯಕ್ತಿತ್ವ ಅರಳಬೇಕಾದರೆ ಅವನ ಅಂತರಂಗ-ಬಹಿರಂಗಗಳೆರಡು ಪರಿಶುದ್ಧವಾಗಿದ್ದು ನಡೆ-ನುಡಿಗಳು ಒಂದಾಗಿರಬೇಕುಇದುವೇದೇವರನ್ನು ಒಲಿಸುವ ನಿಜವಾದ ಮಾರ್ಗಎಂದು ಸಾರಿದರು.ಸರ್ವಜ್ಞಕವಿಯು ’ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕುಎಂದು ಹೇಳಿದಂತೆ ಬಸವಣ್ಣನವರು ಹೇಗೆ ಮನವೋ ಹಾಗೆ ಘನ’ ಎಂದು ಹೇಳುತ್ತಾರೆ.ತನು ಶುಚಿಯಿಲ್ಲದವನದೇಹಾರವೇಕೆದೇವರುಕೊಡನೆಂಬ ಭ್ರಾಂತವದೇಕೆ ಮನಕ್ಕೆ ಮನವೇ ಸಾಕ್ಷಿ ಸಾಲದೆ ಲಿಂಗ ತಂದೆ, ಹೇಗೆ ಮನ ಹಾಗೇ ಘನ ತಪ್ಪದುಎಂದು ಹೇಳುತ್ತಾರೆ.
ಶುಚಿತ್ವ ಬದುಕಿನಎಲ್ಲ ಹಂತದಲ್ಲೂ ಬೇಕು.ಅದರಲ್ಲಿಯೂ ಪ್ರಾರ್ಥನೆ , ಪೂಜೆ, ಧ್ಯಾನಇತ್ಯಾದಿ ಕ್ರಿಯೆಗಳನ್ನು ಮಾಡುವಾಗದೇಹವನ್ನು ಸ್ವಚ್ಚ ಮಾಡಿ ಕೊಳ್ಳುವುದು ಅನಿವಾರ್ಯ. ಕೇವಲ ದೇಹ ಸ್ವಚ್ಚವಾದರೆ ಸಾಲದು, ದೇಹದಜೊತೆಗೆ ಮನಸ್ಸು ಸ್ವಚ್ಚವಾಗಬೇಕು.ದೇಹದ ಕೊಳೆಗಿಂತ ಮನಸ್ಸಿನ ಕೊಳೆ ತುಂಬಾಕೆಟ್ಟದ್ದು. ದೇವರಿಗೆ ಹೊರಗಿನ ಪದಾರ್ಥಗಳಿಂದ ನೈವೇದ್ಯ ಮಾಡುವುದು ನಿಜವಾದ ನೈವೇದ್ಯವಲ್ಲ. ಅರಿಷಡ್ವರ್ಗಗಳನ್ನು ಕಟ್ಟಿಹಾಕಿತನ್ನನ್ನು ಆ ಮಹಾಘನಕ್ಕೆ ಅರ್ಪಿಸಿಕೊಳ್ಳಬೇಕು.ದೇಹಭಾವವಳಿದು ಶಿವಭಾವ ನೆಲೆಗೊಳ್ಳಬೇಕು ಎಂದರು.
ವಿಶ್ವ ಬಸವ ಜಯಂತಿಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ. ವಿ. ಅಳಗವಾಡಿಯವರು ಬಾಲ್ಯದಲ್ಲಿಯೇ ಬಸವಣ್ಣನವರುಜಾತಿ-ಧರ್ಮ ಭೇದಗಳನ್ನು ಪ್ರತಿಭಟಿಸಿ ನಿಂತಂತಹಅಪರೂಪದ ವ್ಯಕ್ತಿ. ಅನ್ಯಾಯವನ್ನುಎಸಗುತ್ತಿದ್ದ ವ್ಯಕ್ತಿ ಸಮಾಜ, ಪ್ರಭುತ್ವಗಳನ್ನು ಎದುರು ಹಾಕಿಕೊಂಡಂತಹಅಪರೂಪದಕ್ರಾಂತಿಪುರುಷನೆಂದರೆ ಬಸವಣ್ಣನವರು. ಕಳಬೇಡ, ಕೊಲಬೇಡ, ಹುಸಿಯಲು ಬೇಡ ಎಂಬ ಬಸವಣ್ಣನವರ ವಚನ ವ್ಯಕ್ತಿಯೋರ್ವತನ್ನಜೀವನವನ್ನು ಕಟ್ಟಿಕೊಳ್ಳಲಿಕ್ಕೆ ಪೂರಕವಾಗಿನಿಲ್ಲುತ್ತದೆಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜಡೋಣೂರವರು ಬಸವಣ್ಣನವರಲ್ಲಿದಯೆ,ಪ್ರೀತಿ, ಜೀವ ಕಾರುಣ್ಣಗಳನ್ನು ಸಹಜವಾಗಿ ನಾವು ನೋಡುತ್ತೇವೆ. ಆದರೆಅವರಲ್ಲಿ ಪ್ರತಿಭಟನೆಯ ಹಿಂದೆಒಂದು ಮಾನವೀಯಅಂತಃಕರಣಇತ್ತು. ಇದೇ, ಅವರ ನಿಜವಾದ ವ್ಯಕ್ತಿತ್ವವಾಗಿತ್ತು.ಎಂದರು.
ಪ್ರಾರಂಭದಲ್ಲಿ ಬಸವ ಸಮಿತಿಯಅಧ್ಯಕ್ಷರಾದಡಾ.ವಿಲಾಸವತಿಖೂಬಾರವರುಎಲ್ಲರನ್ನು ಸ್ವಾಗಿತಿಸಿ ಬಸವ ಸಮಿತಿಯ ಕಾರ್ಯಚಟುವಟಿಕೆಗಳ ಪರಿಚಯ ಮಾಡಿದರು. ಪ್ರಾಸ್ತಾವಿಕ ನುಡಿಗಳನ್ನು ಹೇಳಿದ ಡಾ.ವೀರಣ್ಣದಂಡೆ ನಿರ್ದೇಶಕರು, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರಇವರು ಬಸವಣ್ಣನವರು ಶ್ರೇಷ್ಠ ಕವಿಗಳೂ, ದಾರ್ಶನಿಕರೂ ಮತ್ತುಅಪ್ರತಿಮ ಸಮಾಜ ಸಂಘಟಕರಾಗಿದ್ದರುಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಡಾ.ಆನಂದ ಸಿದ್ಧಾಮಣಿ ಭಾಗಿಯಾಗಿದ್ದರು ಹಾಗೂ ಶ್ರೀ ಹೆಚ್.ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.