ಬೆಂಗಳೂರು: ರಾಮಮೂರ್ತಿ ನಗರ ವಾರ್ಡ್ ನಲ್ಲಿ ಕರ್ನಾಟಕ ಸರ್ಕಾರದ ಬಿಎಂಟಿಸಿ ಸಂಸ್ಥೆ ಹಾಗೂ ಶಾಂತ ಕೃಷ್ಣಮೂರ್ತಿ ಫೌಂಡೇಶನ್ ಮತ್ತು ಫೌಂಡೇಶನ್ ಇಂಡಿಯಾ ಹಾಗೂ ನ್ಯಾಚುರಲ್ ರೆಮಿಡೀಸ್ ಇವರ ಸಂಯುಕ್ತಾಶ್ರಯದಲ್ಲಿ ಆಕ್ಸಿಜನ್ ಬಸ್ ವ್ಯವಸ್ಥೆಗೆ ನಗರಾಭಿವೃದ್ದಿ ಸಚಿವರಾದ ಶ್ರೀ ಭೈರತಿ ಬಸವರಾಜು ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದರು.
ಮುಖ್ಯವಾಗಿ ಜನರ ಸೇವೆಗಾಗಿಯೇ ಇರುವ ಶಾಂತಕೃಷ್ಣಮೂರ್ತಿ ಫೌಂಡೇಶನ್ ಅನೇಕ ಜನಪರ ಕೆಲಸಗಳನ್ನು ಮಾಡುತ್ತಲೇ ಬರುತ್ತಲಿದ್ದು, ಈ ಕೋವಿಡ್ 19 ರ ಸಂದರ್ಭದಲ್ಲಿಯು ಜನರಿಗೆ ಅಗತ್ಯವಾದ ವಸ್ತುಗಳನ್ನು ವಿತರಿಸುವುದರ ಜೊತೆಗೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ್ದಾರೆ. ಈಗ ಬಿಎಂಟಿಸಿ ಸಂಸ್ಥೆ, ನ್ಯಾಚುರಲ್ ರೆಮಿಡೀಸ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ಆಕ್ಸಿಜನ್ ಬಸ್ ಗೆ ಚಾಲನೆ ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಸಚಿವರಾದ ಶ್ರೀ ಭೈರತಿ ಬಸವರಾಜು ಹಾಗೂ ಶಾಂತ ಕೃಷ್ಣಮೂರ್ತಿ ಫೌಂಡೇಶನ್ ಸಂಸ್ಥಾಪಕರಾದ ಶ್ರೀಮತಿ ಶಾಂತ ಕೃಷ್ಣಮೂರ್ತಿ, ಕಲ್ಕೆರೆ ಕೃಷ್ಣಮೂರ್ತಿ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು.