ಸಂವಿಧಾನ ಉಳಿದರೆ ಮಾತ್ರ ಧರ್ಮಗಳು ಉಳಿಯುತ್ತವೆ, ಜನರು ನೆಮ್ಮದಿಯಿಂದ ಇರುತ್ತಾರೆ:  ಖರ್ಗೆ

0
93

ಕಲಬುರಗಿ: ಸಂವಿಧಾನ ಧರ್ಮಗಳು ಉಳಿಯುತ್ತವೆ ಜನರು ಶಾಂತಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಸಂಸದರಾದ ಎಂ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅವರು ಇಂದು ಕಾಂಗ್ರೇಸ್ ಜೆಡಿಎಸ್ ವೀರಶೈವ ಲಿಂಗಾಯತ  ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಾನು 30 ತಿಂಗಳು ಕೇಂದ್ರ ಸಚಿವನಾಗಿದ್ದಾಗ ರಾಜ್ಯವಲ್ಲದೇ ಮೋದಿಯ ಗುಜರಾತಿನಲ್ಲೂ ಅಭಿವೃದ್ದಿ ಕಾರ್ಯ ಮಾಡಿದ್ದೇನೆ. ಗುಜರಾತ್ ನ ಬರೂಚದಲ್ಲಿ ರೈಲ್ವೆ ನಿಲ್ದಾಣ, ಅಹಮದಾಬಾದ್ ನಲ್ಲಿ ರೂ ,300 ಕೋಟಿ ವೆಚ್ಚದಲ್ಲಿ ಇಎಸ್ ಐಸಿ ಆಸ್ಪತ್ರೆ, ಬರೂಚಲ್ ನಲ್ಲಿ 100 ಬೆಡ್ ಆಸ್ಪತ್ರೆ ಸ್ಥಾಪನೆ, ದಾವಣಗೆರೆ ಯಲ್ಲಿ 60 ಕೋಟಿ ವೆಚ್ಚದಲ್ಲಿ ಇಎಸ್ಐಸಿ ಆಸ್ಪತ್ರೆ ಸ್ಥಾಪನೆ ಮಾಡಿದ್ದೇನೆ‌. ಜೊತಗೆ ಕಲಬುರಗಿ ಜಿಲ್ಲೆಯ ಅಭಿವೃದ್ದಿ ಕೆಲಸಗಳ ಪಟ್ಟಿಯೂ ದೊಡ್ಡದಿದೆ‌. ಆದರೂ, ಇಲ್ಲಿನ ಕೆಲ ಸೋತ ಪೈಲ್ವಾನರು ನನ್ನನ್ನು ಸೋಲಿಸಬೇಕು ಎಂದು ಕಷ್ಟಪಡುತ್ತಿದ್ದಾರೆ‌. ಎಲ್ಲಿಯವರೆಗೆ ನಿಮ್ಮ ಆಶೀರ್ವಾದ ನನ್ನ ಮೇಲಿರುತ್ತದೋ ಅಲ್ಲಿವರೆಗೆ ಯಾರಿಂದ ಸೋಲಿಸಲಾಗದು”  ಎಂದರು.

Contact Your\'s Advertisement; 9902492681

ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಖರ್ಗೆ ಸಾಹೇಬರು ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಗಮನಿಸಿದರೆ ಕಲಬುರಗಿಯ ಜನರು ಅವರನ್ನು ಅವಿರೋಧವಾಗಿ ಅಯ್ಕೆ ಮಾಡಿ ಕಳಿಸಬೇಕಿತ್ತು. ಆದರೆ ಚುನಾವಣೆ ನಡೆಯುತ್ತಿದೆ, ಲಿಂಗಾಯತ ಹಾಗೂ ಇತರೆ ಸಮುದಾಯದ ಜನರು ಖರ್ಗೆಯವ ಅಭಿವೃದ್ದಿಯನ್ನು ಮನಗಂಡು ಆರಿಸಿ ತರಬೇಕು ಎಂದು ಮನವಿ ಮಾಡಿದರು.

ದೇಶದ ಅಖಂಡತೆಗೆ ಧಕ್ಕೆ ತರುವ ತತ್ವಗಳನ್ನು ಪಸರಿಸುತ್ತಿರುವ ಆರ್ ಎಸ್ ಎಸ್ ಹಾಗೂ ಬಿಜೆಪಿಗಳನ್ನು ಸೋಲಿಸುವ ಮೂಲಕ ಜಾತ್ಯಾತೀತ ತತ್ವಗಳನ್ನು ಎತ್ತಿಹಿಡಿಯುವಂತ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ, ಮಾಜಿ ಬಿ.ಆರ್. ಪಾಟೀಲ್ ಕರೆ ನೀಡಿದರು. ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ ಬಸವಣ್ಣನವರ ಸಿದ್ದಾಂತಗಳನ್ನು ಕಾಂಗ್ರೇಸ್ ಪಕ್ಷ ಒಪ್ಪಿಕೊಂಡಿದೆ. ಧೈರ್ಯವಿದ್ದರೆ ಆರ್ ಎಸ್ ಎಸ್ ತಾನು ವಚನ ಸಾಹಿತ್ಯವನ್ನು ಒಪ್ಪಿಕೊಂಡಿಯೇ ಎನ್ನುವುದನ್ನು ಹೇಳಲಿ ಎಂದು ಸವಾಲಾಕಿದರು.

” ಖರ್ಗೆ ಅವರು ಗೆದ್ದು ಬಂದರೆ ಬಹಳ ದೊಡ್ಡ ಸ್ಥಾನಕ್ಕೆ ಹೋಗಲಿದ್ದಾರೆ ಎಂದು ಒತ್ತಿ ಹೇಳಿದ ಪಾಟೀಲ್ ಅವರು ತಮ್ಮ ಅಭಿವೃದ್ದಿ ಕೆಲಸದ ಮೂಲಕ ಈ ನಾಡಿನ ಹೆಮ್ಮೆಯ ನಾಯಕರಾಗಿದ್ದಾರೆ” ಎಂದು ಗುಣಗಾನ ಮಾಡಿದರು. ” ಮೋದಿಯಂತ ಹಿಟ್ಲರ್ ತಲೆಎತ್ತಬಾರದು‌. ಜಾತ್ಯಾತೀತ ತತ್ವದಲ್ಲಿ ಅಚಲ ನಂಬಿಕೆಯಿಟ್ಟಿರುವ ಲಿಂಗಾಯತರು ಖರ್ಗೆಯವರನ್ನು ಗೆಲ್ಲಿಸುವ ಮೂಲಕ ಮೋದಿಯನ್ನು ಸೋಲಿಸಬೇಕು ” ಎಂದು ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ‌.ಶಾಣಪ್ಪ ಮನವಿ ಮಾಡಿದರು.

ಈ ಸಂರ್ಭದಲ್ಲಿ ಸಚಿವರಾದ ರಾಜಶೇಖರ್ ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ,  ಶಾಸಕ ಶಾಮನೂರು ಶಿವಶಂಕರಪ್ಪ, ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಶಾಸಕ ಅಜಯ್ ಸಿಂಗ್, ಮಾಜಿ ರಾಜ್ಯ ಸಭಾ ಸದಸ್ಯ ಕೆ.ಬಿ.ಶಾಣಪ್ಪ, ಶಾಸಕ ಎಂ.ವೈ.ಪಾಟೀಲ್, ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಜಗದೇವ ಗುತ್ತೇದಾರ, ಯೋಜನಾ ಆಯೋಗದ ಉಪಾಧ್ಯಕ್ಷ ಶರಣಬಸಪ್ಪಗೌಡ ದರ್ಶನಾಪುರ, ಆರ್.ಕೆ.ಹುಡಗಿ, ಕೇದಾರಲಿಂಗಯ್ಯ ಹಿರೇಮಠ ಸೇರಿದಂತೆ ಮತ್ತಿತರ ಮುಖಂಡರು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here