ಸುರಪುರ: ೧೮ ವರ್ಷ ಮೇಲ್ಪಟ್ಟ ಎಲ್ಲರು ತಪ್ಪದೆ ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ತಿಳಿಸಿದರು.
ನಗರದ ವಾರ್ಡ್ ಸಂಖ್ಯೆ ೧೭ರ ಮೇದಾಗಲ್ಲಿಯಲ್ಲಿ ನಡೆದ ಕೊರೊನಾ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಜನರಲ್ಲಿ ಜಾಗೃತಿ ಮೂಡಿಸಿ,ಕೊರೊನಾ ಸೊಂಕಿಗೆ ಪ್ರತ್ಯೇಕ ಔಷಧಿ ಇಲ್ಲದ ಕಾರಣ ಈ ಸೊಂಕಿನಿಂದ ದೂರವಿರಲು ೧೮ ವರ್ಷ ಮೇಲ್ಪಟ್ಟವರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು.ಆರೋಗ್ಯ ಇಲಾಖೆಯ ಸಿಬ್ಬಂದಿ ಆಯಾ ವಾರ್ಡ್‌ಗಳಲ್ಲಿಯೇ ಲಸಿಕೆ ನೀಡುವ ಅಭಿಯಾನವನ್ನು ನಡೆಸುತ್ತಿದ್ದು ಈ ಸಂದರ್ಭದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ಡ್‌ನ ಸುಮಾರು ೫೦ಕ್ಕೂ ಹೆಚ್ಚು ಜನರು ಲಸಿಕೆಯನ್ನು ಪಡೆದುಕೊಂಡರು.ನಂತರ ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾವೂದ್ ಇಬ್ರಾಹಿಂ ಪಠಾಣ ನೇತೃತ್ವದಲ್ಲಿ ರಾಜಾ ಕುಮಾರ ನಾಯಕ ಹಾಗು ಲಸಿಕೆ ನೀಡಲು ಆಗಮಿಸಿದ್ದ ಆರೋಗ್ಯ ಇಲಾಖೆಯ ಶ್ರೀಮಂತ ಆರೋಗ್ಯ ನಿರೀಕ್ಷಕ ಸುರೇಶ ಕಡ್ಡಿ ಆರೋಗ್ಯ ಸಹಾಯಕ ಪರಶುರಾಮ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ನವೀನ್ ಕುಮಾರ ಕಮತಗಿ ಮಲ್ಲು ನಾಯಕ ಲಾಲಸಾಬ್ ನದಾಫ್ ಕಾಶಿನಾಥ ಮಲ್ಲಿಕಾರ್ಜುನ ಇತರರಿದ್ದರು.