ಸುರಪುರ: ನಗರದ ವಾರ್ಡ್ ಸಂಖ್ಯೆ ೧೨ರ ಖುರೇಶಿ ಮೊಹಲ್ಲಾದಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನು ನಡೆಸಲಾಯಿತು.ಭಾನುವಾರ ಬೆಳಿಗ್ಗೆ ನಡೆದ ಅಭಿಯಾನಕ್ಕೆ ವಾರ್ಡ್‌ನ ನಗರಸಭೆ ಸದಸ್ಯೆ ಹೀನಾ ಕೌಸರ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಇಂದು ಕೊರೊನಾ ನಿರ್ಮೂಲನೆಯಾಗುತ್ತಿರುವುದು ಲಸಿಕೆಯಿಂದ ಎಂದರೆ ತಪ್ಪಾಗದು.ಲಸಿಕೆ ಹಾಕಿಸಿಕೊಂಡವರಿಗೆ ಕೊರೊನಾ ಸೊಂಕು ತಗುಲಿದರು ಯಾವುದೇ ಹಾನಿಯುಂಟಾಗುವುದಿಲ್ಲ.ಆದ್ದರಿಂದ ಸರಕಾರ ಈಗ ನಿಯಮ ಜಾರಿಗೊಳಿಸಿದಂತೆ ೧೮ ವರ್ಷ ಮೇಲ್ಪಟ್ಟ ಎಲ್ಲರು ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳೋಣ ಎಂದರು.ಅಲ್ಲದೆ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ಎಲ್ಲರು ಮುಂದಾಗೋಣ ಎಂದರು.
ಇದೇ ಸಂದರ್ಭದಲ್ಲಿ ಖುರೇಶಿ ಮೊಹಲ್ಲಾದ ೧೮೯ ಜನ ಲಸಿಕೆಯನ್ನು ಪಡೆದುಕೊಂಡರು.ಅಭಿಯಾನ ಉದ್ಘಾಟನೆಯಲ್ಲಿ ಮುಖಂಡರಾದ ಖುರೇಶಿ ಮೊಹಲ್ಲಾ ಸಂಘದ ಅಧ್ಯಕ್ಷ ಅಬ್ದುಲ ಮಜೀದ್ ಸಾಬ್,ಕಾರ್ಯದರ್ಶಿ ಮಹ್ಮದ್ ಜಹೀರ್,ಮಹ್ಮದ್ ಶಕೀಲ್,ಅಬ್ದುಲ್ ಗಫರ್ ಖುರೇಶಿ,ಶಕೀಲ್ ಅಹಮದ್ ಖುರೇಶಿ,ಅಬ್ದುಲ್ ರಹೀಂ ಖುರೇಶಿ,ಅಬ್ದುಲ್ ರಹೀಂ ಖುರೇಶಿ,ಅಬ್ದುಲ್ ಹಮೀರ್ ಸಾಬ್ ಖುರೇಶಿ ಹಾಗು ನಗರಸಭೆ ನರ್ಮಲ್ಯ ನಿರೀಕ್ಷಕ ಶಿವಪುತ್ರ ಹಾಗು ನಗರಸಭೆ ಮತ್ತು ಆರೋಗ್ಯ ಇಲಾಖೆಯ ಅನೇಕ ಸಿಬ್ಬಂದಿಗಳಿದ್ದರು.