ಡಾ. ಉಮೇಶ ಯಲಶೆಟ್ಟಿ, ಪತ್ರಕರ್ತ ರಮೇಶ ಭಟ್ ಗೆ ಸನ್ಮಾನ

0
60

ಶಹಾಬಾದ: ಸಕಾಲದಲ್ಲಿ ಜೀವದಾನ ನೀಡುವ ವೈದ್ಯ ವೃತ್ತಿ ಹಾಗೂ ಜಗತ್ತಿನ ಆಗುಹೋಗುಗಳ ಅರಿವು ನೀಡುವ ಪತ್ರಕರ್ತರ ಕಾಯಕ ಅತ್ಯಂತ ಪವಿತ್ರವಾದುದು ಎಂದು ಜೆಡಿಎಸ್ ಅಧ್ಯಕ್ಷ ರಾಜ ಮಹ್ಮದ್ ರಾಜಾ ಹೇಳಿದರು.

ಅವರು ನಗರದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ವೃತ್ತಿಯ ಜತೆ ಜನಪರತೆಯ ಪ್ರವೃತ್ತಿಯನ್ನು ಕಾಯ್ದುಕೊಂಡು ಹೋದಾಗ ಮಾತ್ರ ಸಮಾಜದಲ್ಲಿ ವೃತ್ತಿ ಹಾಗೂ ವೈಯಕ್ತಿಕ ಗೌರವ ಲಭಿಸುತ್ತದೆ. ಶೀಲ, ಸೌಜನ್ಯ, ಪ್ರಾಮಾಣಿಕತೆಗಳು ವೃತ್ತಿ ಗೌರವವನ್ನು ಎತ್ತಿ ಹಿಡಿಯುತ್ತವೆ ಎಂದು ಅವರು ಹೇಳಿದರು.

ಪತ್ರಕರ್ತ ಸಂಘದ ಅಧ್ಯಕ್ಷ ರಮೇಶ ಭಟ್ ಮಾತನಾಡಿ, ವೃತ್ತಿಯನ್ನು ಗೌರವಿಸುವವನಿಗೆ ಸಮಾಜ ಗೌರವಿಸುತ್ತದೆ. ನಾವು ಮಾಡುವ ವೃತ್ತಿಯಲ್ಲೇ ದೇವರನ್ನು ಕಾಣುವ ಸ್ವಭಾವ ಹೊಂದಿದ್ದರೆ ಜೀವನದಲ್ಲಿ ಧನ್ಯತಾ ಭಾವ ಪ್ರಾಪ್ತಿಯಾಗುತ್ತದೆ ಎಂದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರ ಮತ್ತು ಜನರಲ್ಲಿ ಜಾಗೃತಿ ಮೂಡಿಸಿ ದಂತಹ ನಿಸ್ವಾರ್ಥ ಸೇವೆ ಎಂದರೆ ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮ ವರ್ಗ ಪತ್ರಕರ್ತರದ್ದು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರು ಹಾಗೂ ಜನರ ಆರೋಗ್ಯ ಕಾಪಾಡುವ ವೈದ್ಯರ ನಿಸ್ವಾರ್ಥ ಸೇವೆ ಅನನ್ಯವಾದದ್ದು.ಕೊರೋನಾ ಮಹಾಮಾರಿ ರೋಗ ಕಾಡಿದ ಸಂದರ್ಭದಲ್ಲಿ ವೈದ್ಯರು ನರ್ಸ್‌ಗಳು ಆಂಬುಲೆನ್ಸ್ ಡ್ರೈವರ್ ಗಳು ಹಗಲು-ರಾತ್ರಿಯೆನ್ನದೆ ನಿರಂತರ ಸೇವೆಯಿಂದ ಅದೆ? ಜನರ ಪ್ರಾಣವನ್ನು ಉಳಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಮ. ಓಬೆದುಲ್ಲಾ, ಲೋಹಿತ್ ಕಟ್ಟಿ ಮಾತನಾಡಿದರು. ವಿಜಯಲಕ್ಷ್ಮಿ ಬಂಗರಗಿ, ಬಸವರಾಜ ಮಯೂರ, ಯೂಸುಫ್ ಸಾಹೇಬ್, ಸುನೀಲ್ ಚೌಹಾಣ್, ಮಹೇಬೂಬ ಗೋಗಿ, ಹೀರಾಲಾಲ ಪವಾರ್,  ಹನುಮಾನ್ ಕಾಂಬಳೆ, ವಿಶ್ವನಾಥ, ಸುಭಾ? ಸಾಕರೆ, ಬಸವರಾಜ ದಂಡಗುಳಕರ್, ಅ. ರಸೀದ, ಫಾರೂಕ್ ಶೇಖ್, ಸಿದ್ದಲಿಂಗ, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here