ಬೆಂಗಳೂರು ತಲುಪುವ ಮೊದಲೇ ಸರ್ಕಾರ ಮೀಸಲಾತಿ ಪ್ರಕಟಿಸಲಿ: ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ

0
19

ಆಳಂದ: ಸಂವಿಧಾನ ಬದ್ಧ ಹಕ್ಕಾಗಿರುವ ರಾಜ್ಯದಲ್ಲಿನ ಲಿಂಗಾಯತ ಪಂಚಮಸಾಲಿ, ಲಿಂಗಾಯತಗೌಡ, ಮಲೆಗೌಡ, ದೀಕ್ಷ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿಗಾಗಿ ಆರಂಭಿಸಿದ ಪ್ರತಿಜ್ಞಾ ಪಂಚಾಯತ ಮಹಾಭಿಯಾನ ಬೆಂಗಳೂರಿಗೆ ತಲುಪುವ ಮೊದಲೇ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಣೆ ಕೈಗೊಂಡು ಬೇಡಿಕೆಗೆ ಸ್ಪಂದಿಸಿ ಸಮುದಾಯದ ಸಹನ ಕಟ್ಟೆವಡೆಯದಂತೆ ನೋಡಿಕೊಳ್ಳಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಜಯ ಬಸವ ಮೃತ್ಯುಂಜಯ ಮಹಾಸ್ವಾಮಿಗಳು ಇಂದಿಲ್ಲಿ ಒತ್ತಾಯಿಸಿದರು.

ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ರವಿವಾರ ಲಿಂಗಾಯತ ಮಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ತಮ್ಮ ನೇತೃತ್ವದಲ್ಲಿ ಆರಂಭಿಸಿದ ಪ್ರತಿಜ್ಞಾ ಪಂಚಾಯತ್ ಮಹಾಭಿಯಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

೨ಎ ಮೀಸಲಾತಿ ಬೇಡಿಕೆ ಇಂದು ನಿನ್ನೆಯದಲ್ಲ. ಸಮುದಾಯದಲ್ಲಿ ಶೇ ೯೦ರಷ್ಟು ತೀರಾ ಬಡವರಿದ್ದು, ಕೃಷಿ ಮತ್ತು ಕೃಷಿ ಕೂಲಿ ಕಾರ್ಮಿಕರಿದ್ದಾರೆ. ಮಕ್ಕಳ ಶಿಕ್ಷಣ ಉದ್ಯೋಗಕ್ಕಾಗಿ ಸರ್ಕಾರಕ್ಕೆ ಮೀಸಲಾತಿ ಕೇಳಲಾಗುತ್ತಿದೆ ಸರ್ಕಾರ ತಾಳ್ಮೆಯನ್ನು ಪರಿಕ್ಷಿಸುತ್ತಿರುವುದು ಸರಿಯಲ್ಲ ಎಂದರು.

ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ, ವಿಜಯನಂದ ಕಾಶಪ್ಪನವರ, ಬಿ.ಎಸ್. ನಟರಾಜ ಕೇದಾರಗೌಡ, ಮಲ್ಲಿಕಾರ್ಜುನ, ಜಿಪಂ ಮಾಜಿ ಸದಸ್ಯ ಮಲ್ಲಿನಾಥ ಪಾಟೀಲ ಮತ್ತಿತರು ಮಾತನಾಡಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡಲು ಹಿಂದೇಟು ಹಾಕುವುದು ಸರಿಯಲ್ಲ ಎಂದರು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವರಾಜ ಎಸ್. ವಾಲಿ, ಶಂಕರರಾವ್ ದೇಶಮುಖ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ರವಿಂದ್ರ ಕೊರಳ್ಳಿ, ಬಸವರಾಜ ಎಸ್. ಕೊರಳ್ಳಿ, ಮಲ್ಲಪ್ಪ ಹತ್ತರಕಿ, ಲಿಂಗರಾಜ ಎಂ. ಪಾಟೀಲ, ರೇವಣಸಿದ್ಧಪ್ಪ ನಾಗೂರೆ, ಮಲ್ಲಿಕಾರ್ಜುನ ತಡಕಲ್, ಆನಂದ ಪಾಟೀಲ ಕೊರಳ್ಳಿ, ಸಂಗನಬಸವ ಪಾಟೀಲ, ಮಲ್ಲಿಕಾರ್ಜುನ ಕಂದಗುಳೆ, ಬುಜಂಗಪ್ಪ ದೇಶಟ್ಟಿ, ಸಿದ್ಧು ಹಿರೋಳಿ, ಲಿಂಗಾಯತ ಪಂಚಮ ಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ಆನಂದ ಎಸ್. ದೇಶಮುಖ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಹಾದೇವ ಗುಣಕಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here