ಪತ್ರಿಕೆ ಇಲ್ಲದ ಮುಂದಾಳು ರೆಕ್ಕೆಯಿಲ್ಲದ ಪಕ್ಷಿಯಂತೆ: ಪ್ಯಾಟಿ

0
24

ಕಲಬುರಗಿ: ಪತ್ರಿಕೆ ಇಲ್ಲದ ಮುಂದಾಳು ರೆಕ್ಕೆಯಿಲ್ಲದ ಪಕ್ಷಿಯಂತೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮರಾವ್ ಪ್ಯಾಟಿ ಅವರು ಬಣ್ಣಿಸಿದರು.

ನಗರದ ಎಸ್‍ಟಿಬಿಟಿ ಕ್ರಾಸ್ ಬಳಿ ಇರುವ ಹಿರಿಯ ಪತ್ರಿಕಾ ವಿತರಕ ರಮಾಕಾಂತ್ ಜಿಡಗೇಕರ್ ಅವರ ನಿವಾಸದಲ್ಲಿ ಕಳೆದ ಭಾನುವಾರ ಪತ್ರಿಕಾ ವಿತರಣೆ ದಿನಾಚರಣೆ ನಿಮಿತ್ಯ ಗೃಹ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ಪತ್ರಿಕೆ, ಪತ್ರಕರ್ತ, ಪತ್ರಿಕೆ ವಿತರಕ ಎಂಬ ಮುಖಗಳು ಕೂಡಿ ಇರುವುದರಿಂದ ಅದು ಚಲಾವಣೆಯ ದಿಸೆಯಲ್ಲಿ ಹೊಸ, ಹೊಸ ದಿಗಂತದತ್ತ ಉತ್ತುಂಗಕ್ಕೆ ಸಾಗುವುದರಲ್ಲಿ ಸಂಶಯವಿಲ್ಲ ಎಂದರು.

Contact Your\'s Advertisement; 9902492681

ವಿಶ್ವದ ಪ್ರಖ್ಯಾತ ವಿಜ್ಞಾನಿ ಭಾರತರತ್ನ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಮೇಶ್ವರಂ ರೈಲು ನಿಲ್ದಾಣದಲ್ಲಿ ಪತ್ರಿಕೆಗಳು ವಿತರಣೆ ಮಾಡುತ್ತಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು ಎಂದು ಅವರು ತಿಳಿಸಿದರು.

ಪತ್ರಿಕೆಯಿಂದ ಪತ್ರಕರ್ತರು, ಪತ್ರಕರ್ತರಿಂದ ಪತ್ರಿಕೆಯೋ ಎಂಬ ನಾಣ್ಣುಡಿಯಂತೆ ಬ್ರಿಟಿಷ್ ಇಂಡಿಯಾ ಕಾಲದಲ್ಲಿ ಪತ್ರಿಕೆ ಒಂದು ಮಾಧ್ಯಮವಾಗಿರಲಿಲ್ಲ. ಪತ್ರಕರ್ತರು ಯಾವುದನ್ನು ಆದರ್ಶವೆಂದು ನಂಬಿದ್ದರೋ ಅದರ ಪ್ರಚಾರದ ಸಮರ್ಥನೆಗೆ ಪತ್ರಿಕೆಗಳನ್ನು ಆರಂಭಿಸಿ ನಡೆಸುತ್ತಿದ್ದರು. ಅದೊಂದು ರೀತಿಯ ಸಾಮಾಜಿಕ, ರಾಜಕೀಯ ಅಸ್ತ್ರವಾಗಿತ್ತು. ಡಿ.ವಿ.ಜಿ., ಹರಡೇಕರ್ ಮಂಜಪ್ಪ, ಶರ್ಮಾ, ಲೋಕಮಾನ್ಯ ಬಾಲಗಂಗಾಧರ್ ತಿಳಕರು, ಅರವಿಂದರು, ಮಹಾತ್ಮಾಗಾಂಧೀಜಿಯವರು, ಅಂಬೇಡ್ಕರ್ ಮುಂತಾದವರು ಪತ್ರಿಕೆಗಳನ್ನು ನಡೆಸುತ್ತಿದ್ದು ಈಗ ಇತಿಹಾಸ ಮಾತ್ರ ಎಂದು ಅವರು ಹೇಳಿದರು.

ಅಂಬೇಡ್ಕರ್ ಅವರು ಬರೆಯುತ್ತಿದ್ದ ಸಂಪಾದಕೀಯಗಳು ಸಮಾಜದಲ್ಲಿ ಹೊಸ ಹೊಸ ವೈಚಾರಿಕ ಅಲೆ ಎಬ್ಬಿಸಿತು. ಮತ್ತು ಶೀರ್ಷಿಕೆಯನ್ನು ನೋಡಿ ಕನ್ನಡಿ ಇದೆ, ಮುಖ ಇದ್ದರೆ ಮೂಗು ನೋಡಿಕೊಳ್ಳುವಂತೆ ಮುಕ್ತ ವಿಚಾರ, ಹೊಸ ವಿಚಾರಕ್ಕೆ ಎಚ್ಚರಿಕೆಯಿಂದ ಅಂಕಣಗಳನ್ನು ರಚಿಸಿ ಸಾಮಾಜಿಕ, ರಾಜಕೀಯ ಪರಿವರ್ತನೆಯಲ್ಲಿ ಬದಲಾವಣೆ ತರುವುದರ ಕತೃರಾಗಿದ್ದು, ಪತ್ರಕರ್ತರೆನಿಸಿಕೊಂಡಿದ್ದರು ಎಂದು ಅವರು ತಿಳಿಸಿದರು.

ಪತ್ರಿಕೋದ್ಯಮ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದರಿಂದ ಎರಡನೇ ದುಂಡು ಮೇಜಿನ ಪರಿಷತ್ತು ಇಂಗ್ಲೆಂಡಿನಲ್ಲಿ ಜರುಗಿದ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಬಿಕಿನೇರಿನ ಮಹಾರಾಜರು ಮುಂತಾದವರು ಭಾಗವಹಿಸಿದಾಗ ಡಿವಿಜಿಯವರ ಲೇಖನ (ಡಿ.ಆರ್. ವೆಂಕಟರಮಣ) ವಿರಕ್ತ ರಾಷ್ಟ್ರ ಕೃತಿಯಿಂದ ಮುಂದೆ ಡಾ. ಅಂಬೇಡ್ಕರ್ ಅವರು 554 ಸಂಸ್ಥಾನಗಳ ಶಕ್ತಿ, ದೌರ್ಬಲ್ಯಗಳ ಕುರಿತು ದುಂಡು ಮೇಜಿನ ಪರಿಷತ್ತಿನಲ್ಲಿ ಮಾತನಾಡಿದ್ದು, ಇದೆಲ್ಲವನ್ನೂ ಪತ್ರಿಕೆ ಮಾಧ್ಯಮಗಳಿಂದ ಮಾತ್ರ ಪ್ರಸಾರವಾಯಿತು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ಕನ್ನಡಪ್ರಭ ಸ್ಥಾನಿಕ ಸಂಪಾದಕ ಶೇಷಮೂರ್ತಿ ಅವಧಾನಿ, ರಾಜೇಂದ್ರ ಕೋಥಳಿಕರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here