ಪ್ರಿಯಾಂಕ್ ಜನ್ಮದಿನ: ಬಡ ಮಕಳಿಗೆ ಬಟ್ಟೆ ವಿತರಣೆ

0
26

ವಾಡಿ: ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರ 43ನೇ ಹುಟ್ಟು ಹಬ್ಬದ ನಿಮಿತ್ತ ಪುರಸಭೆ ಸದಸ್ಯೆ ಸುಗಂಧಾ ನಾಗೇಂದ್ರ ಜೈಗಂಗಾ ಅವರು ಪಟ್ಟಣದ ಹನುಮಾನ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು 45 ಜನ ಬಡ ವಿದ್ಯಾರ್ಥಿಗಳಿಗೆ ಹೊಸ ಬಟ್ಟೆಗಳನ್ನು ವಿತರಿಸುವ ಮೂಲಕ ಆಚರಿಸಿದರು.

ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಇದೇ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ಧಿ ಕಾರ್ಯಗಳ ಮೆಲುಕು ಹಾಕಿದರು.

Contact Your\'s Advertisement; 9902492681

ಅಭಿವೃದ್ಧಿ ವಿಷಯದಲ್ಲಿ ಶೂನ್ಯ ಸ್ಥಿತಿಗೆ ತಲುಪಿದ್ದ ಚಿತ್ತಾಪುರ ಮತಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಆಸ್ಪತ್ರೆಗಳು, ಶಾಲೆಗಳು, ರಸ್ತೆಗಳು ನವಚೈತನ್ಯ ಪಡೆದುಕೊಂಡವು. ಪೊಲೀಸ್ ಠಾಣೆ-ವಸತಿ ಗೃಹಗಳು, ವಿವಿಧ ಸರಕಾರಿ ಕಚೇರಿಗಳು ನವೀಕರಣಗೊಂಡವು. ಕಸಾಪ ಹುಟ್ಟಿದ ನೂರು ವರ್ಷದ ಬಳಿಕ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಪ್ರೋತ್ಸಾಹ ನೀಡಿದರು.

ಕೆರೆಗಳಿಗೆ ನೀರು ತುಂಬಿಸಿ ಜಲಸಂಪತ್ತು ಕಾಪಾಡಿದರು. ಗ್ರಾಪಂ ಆಡಳಿತವನ್ನು ಕ್ರೀಯಾಶೀಲಗೊಳಿಸಿ ಹಳ್ಳಿ ಜನರ ಜೀವನ ಸುಧಾರಣೆಗೆ ಮುಂದಾದರು. ಹೀಗೆ ಹಲವು ಪ್ರಗತಿದಾಯಕ ಕಾರ್ಯಗಳು ಖರ್ಗೆಯವರಿಂದ ಆಗಿವೆ. ಇಂಥಹ ನಾಯಕ ಕ್ಷೇತ್ರಕ್ಕೆ ಸಿಕ್ಕಿದ್ದು ನಮ್ಮ ಪುಣ್ಯ ಎಂದರು.

ಮುಖ್ಯಶಿಕ್ಷಕಿ ಕಸ್ತೂರಿ ನಾಟೇಕರ, ಶಿಕ್ಷಕ ಹುಸೇನಪಾಶಾ ಇನಾಮದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಮುಖಂಡರಾದ ಟೋಪಣ್ಣ ಕೋಮಟೆ, ನಾಗೇಂದ್ರ ಜೈಗಂಗಾ, ಮಲ್ಲಿಕಾರ್ಜುನ ಸೈದಾಪುರ, ಚಂದ್ರಸೇನ ಮೇನಗಾರ, ಅಮೃತ ಕೋಮಟೆ, ಅಶ್ರಫ್ ಖಾನ್, ತುಕಾರಾಮ ರಾಠೋಡ, ಶರಣಬಸು ಸಿರೂರಕರ, ರಮೇಶ ಬಡಿಗೇರ, ಪರಶುರಾಮ ಕಟ್ಟಿಮನಿ, ಅಬ್ರಾಹಂ ರಾಜಣ್ಣ, ಮಲ್ಲಯ್ಯ ಗುತ್ತೇದಾರ, ವಿಜಯಕುಮಾರ ಸಿಂಗೆ, ಶೇಖಪ್ಪ ಹೇರೂರ, ಗುರುಪಾದ ದೊಡ್ಡಮನಿ, ಮುತ್ತಯ್ಯಸ್ವಾಮಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here