ಸುರಪುರ:ತಹಸೀಲ್ ಕಚೇರಿಯಲ್ಲಿ ಸರಳವಾಗಿ ಕನಕದಾಸರ ಜಯಂತಿ ಆಚರಣೆ

0
10

ಸುರಪುರ: ನಗರದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಸರಳವಾಗಿ ಭಕ್ತ ಕನಕದಾಸರ 534ನೇ ಜಯಂತಿ ಆಚರಿಸಲಾಯಿತು.

ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ನೀತಿ ಸಂಹೀತೆ ಜಾರಿ ಹಾಗು ಕೋವಿಡ್ ನಿಯಮಗಳು ಜಾರಿಯಲ್ಲಿರುವ ಕಾರಣದಿಂದ ಸರಳವಾಗಿ ಜಯಂತಿ ನಡೆಸಲಾಯಿತು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭದಲ್ಲಿ ಗ್ರೇಡ-2 ತಹಸೀಲ್ದಾರರಾದ ಸೂಫಿಯಾ ಸುಲ್ತಾನರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಮಾತನಾಡಿ,ದಾಸರಲ್ಲಿ ಶ್ರೇಷ್ಟರು ನಮ್ಮ ಕನಕದಾಸರು,ಅವರು ಸಮಾಜದ ಏಳಿಗೆಗಾಗಿ ತಮ್ಮ ಪದಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎಂದು ಜಾತಿಯನ್ನು ನಿರ್ಮೂಲನೆಗೆ ಶ್ರಮಿಸಿದ ಮಹಾನ್ ದಾಸರು ಮತ್ತು ತಮ್ಮ ಶ್ರೀಕೃಷ್ಣನ ಮೇಲಿನ ಭಕ್ತಿಯಿಂದ ಉಡುಪಿಯಲ್ಲಿ ಶ್ರೀಕೃಷ್ಣನೆ ತನ್ನೆಡೆಗೆ ತಿರುಗಿ ದರುಶನ ನೀಡುವಂತೆ ಹಾಡಿದ ಶ್ರೇಷ್ಟ ದಾಸವರಣ್ಯರಾಗಿದ್ದರು.ಅಂತಹ ಭಕ್ತ ಕನಕದಾಸರ ಜಯಂತಿಯನ್ನು ತುಂಬಾ ಅದ್ಧೂರಿಯಾಗಿ ಆಚರಿಸಬೇಕಿತ್ತು ಆದರೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹೀತೆ ಜಾರಿಯಲ್ಲಿರುವುದರಿಂದ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

ನಂತರ ಸಮಾಜದ ಮುಖಂಡರಾದ ರಂಗನಗೌಡ ಪಾಟೀಲ್ ದೇವಿಕೇರಾ,ಶಿವರಾಯ ಕಾಡ್ಲೂರ್ ಸೇರಿದಂತೆ ಅನೇಕರು ಭಕ್ತ ಕನಕದಾಸರ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣಾ ಹಾವಿನ್,ಮಲ್ಲೇಶಿ ಪಾಟೀಲ್,ಜುಮ್ಮಣ್ಣ ಕುಂಬಾರಪೇಟೆ,ಸಿದ್ರಾಮ ಎಲಿಗಾರ,ಕಾಳಪ್ಪ ಕÀವಾತಿ,ಗಾಳೆಪ್ಪ ಹಾದಿಮನಿ,ಅಯ್ಯಪ್ಪ ಕುಂಬಾರಪೇಟ,ಬೀರಲಿಂಗ ಬಾದ್ಯಾಪುರ,ನಿಂಗು ಐಕೂರ್,ಭೀಮನಗೌಡ ನಾಗರಾಳ,ಹುಸೇನಿ ಜೀವಣಗಿ ಹಾಗು ಪಿಎಸ್‍ಐ ಕೃಷ್ಣಾ ಸುಬೇದಾರ,ಸಮಾಜ ಕಲ್ಯಾಣ ಇಲಾಖೆ ಎಡಿ ಸತ್ಯನಾರಾಯಣ ದರಬಾರಿ, ಆರ್.ಐ ಗುರುಬಸಪ್ಪ ಪಾಟೀಲ್,ಸಿರಸ್ತೆದಾರ ಕೊಂಡಲ ನಾಯಕ,ರವಿ ನಾಯಕ,ಗ್ರಂಥಪಾಲಕ ವನಕೇರಪ್ಪ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here