ದಾವಣಗೆರೆ : ದೇವದಾಸಿ ತಾಯಂದಿರಕ್ಷೇಮಾಭಿವೃದ್ಧಿಗಾಗಿ 2018ರ ಕಾಯ್ದೆಸಮರ್ಪಕವಾಗಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಒತ್ತಾಯಿಸುವ ಹಿನ್ನೆಲೆಯಲ್ಲಿ ಚೇತನಾ ಅಹಿಂಸಾಫೌಂಡೇಶನ್‌ನಿಂದ ರಾಜ್ಯಾದ್ಯಂತ ಪ್ರವಾಸಕೈಗೊಂಡುದೇವದಾಸಿ ತಾಯಂದಿರ ಸ್ಥಿತಿಗತಿ ಅಧ್ಯಯನಮಾಡಲಾಗುತ್ತಿದೆ ಎಂದು ಚಲನಚಿತ್ರ ನಟ ಚೇತನ್‌ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಈಗಾಗಲೇ 8ರಿಂದ10 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ.ದೇವದಾಸಿ ತಾಯಂದಿರ ಸ್ಥಿತಿ ಅತ್ಯಂತಶೋಚನೀಯವಾಗಿದೆ. ಅನೇಕ ರೀತಿಯಲ್ಲಿಶೋಷಣೆಗೆ ಒಳಗಾಗಿದ್ದಾರೆ. ಅವರಿಗೆ ಮನೆಯಿಲ್ಲ,ಮಕ್ಕಳಿಗೆ ಉತ್ತಮ ಶಿಕ್ಷಣವಿಲ್ಲ. ಸರ್ಕಾರದ ಮಾಸಾಶನಕೂಡ ಸಮರ್ಪಕವಾಗಿ ದೊರೆತಿಲ್ಲ. ಕೋವಿಡ್‌ನಿಂದಾಗಿ ಮತ್ತಷ್ಟು ಆರ್ಥಿಕ ತೊಂದರೆಯಲ್ಲಿದ್ದಾರೆ.
ಮಾನವ ಹಕ್ಕುಗಳಿಂದಲೂ ವಂಚಿತರಾಗಿದ್ದಾರೆಎಂದು ದೂರಿದರು.ಇದೇ ರೀತಿ ತುಳಿತಕ್ಕೊಳಗಾದ ಅಲೆಮಾರಿಸಮುದಾಯದವರ ಜೀವನವೂ ಅತೀವಕಷ್ಟದಲ್ಲಿದೆ. ಗುಡಿಸಲು ಮುಕ್ತ ರಾಜ್ಯ ಮಾಡುವಸರ್ಕಾರದ ಯೋಜನೆ ಯಶಸ್ವಿಯಾಗಬೇಕಾದರೆಪ್ರತಿಯೊಂದು ಜಿಲ್ಲೆಯಲ್ಲಿರುವ ಅಲೆಮಾರಿಗಳಸ್ಥಿತಿಗತಿ ಅಧ್ಯಯನ ನಡೆಯಬೇಕು.
ಅಲೆಮಾರಿಗಳು ಹಾಗೂ ದೇವದಾಸಿ ತಾಯಂದಿರಸಮಸ್ಯೆ ಪರಿಹಾರವಾಗಬೇಕು. ಈ ನಿಟ್ಟಿನಲ್ಲಿನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಸರ್ಕಾರದ ಮಾಸಾಶನ ಪ್ರತಿ ತಿಂಗಳುಸರಿಯಾಗಿ ಬರುತಿಲ್ಲ. ಇರಲು ಮನೆಯಿಲ್ಲ.ಆರ್ಥಿಕ ಸ್ಥಿತಿ ಹೇಳತೀರದು ಮತಕೇಳಲು ಮಾತ್ರಬರುವ ಜನಪ್ರತಿನಿಧಿಗಳು ನಮ್ಮ ಕಷ್ಟ ಕೇಳಲುಬರುವುದಿಲ್ಲ. ಇತ್ತೀಚೆಗೆ ಸುರಿದ ಮಳೆಗೆನಮ್ಮ ಮನೆಯೆಲ್ಲ ನೀರುಪಾಲಾಗಿದೆ ಎಂದು ದೇವದಾಸಿಯರು ಇದೇ ಸಂದರ್ಭದಲ್ಲಿ ಅಳಲುತೋಡಿಕೊಂಡರು.ಮಹಾಂತೇಶ್, ವೀರೇಶ್, ಪವನ್‌ತೊರವಿ, ದಂಡೆಮ್ಮ, ಫಕೀರಮ್ಮ, ಚೌಡಮ್ಮಸುದ್ದಿಗೋಷ್ಠಿಯಲ್ಲಿದ್ದರು.