ಒಳಗಣ್ಣಿನಿಂದ ನಿರ್ಸಗ ನೋಡಿ :‌ ‘ನೀನಾ’ದ ಚಿತ್ರ ಕಲಾ ಪ್ರದರ್ಶನ

0
11

ಹುಬ್ಬಳ್ಳಿ : ‘ಕಲಾವಿದರು ನಿಸರ್ಗವನ್ನು ಹೊರಗಣ್ಣಿನಿಂದ ನೋಡದೆ, ಒಳಗಣ್ಣಿನಿಂದ ನೋಡಬೇಕು. ಅಲ್ಲಿಯ ಸೂಕ್ಷ್ಮಗಳನ್ನು ರೇಖೆಗಳಲ್ಲಿ ವ್ಯಕ್ತಪಡಿಸಿ ಸಮಾಜಕ್ಕೆ ಹೊಸ ಸಂದೇಶ ನೀಡಬೇಕು’ ಎಂದು ಕಲಾವಿದ ಎಂ.ಆರ್. ಬಾಳೇಕಾಯಿ ಸಲಹೆ ನೀಡಿದರು.

ನಗರದ ಲ್ಯಾಮಿಂಗ್ಟನ್‌ ರಸ್ತೆಯ ಹೋಟೆಲ್ ಶ್ರೀಕೃಷ್ಣ ಭವನದಲ್ಲಿ ಮೂರು ದಿನ ಆಯೋಜಿಸಿರುವ ಕಲಾವಿದ ದಂಪತಿ ಎಂ.ಎಸ್‌. ಲಂಗೋಟಿ ಮತ್ತು ಮಂಜುಳಾ ಕೆ.ವಿ. ಅವರ ನಿಸರ್ಗದಲ್ಲಿ ‘ನೀನಾ’ದ ಚಿತ್ರಕಲಾ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

‘ದಂಪತಿಯ ಚಿತ್ರಕಲಾ ಪ್ರದರ್ಶನವು ನಿಸರ್ಗದೊಂದಿಗೆ ಕಳೆದ ಅನುಭೂತಿ ನೀಡುತ್ತದೆ. ಚಿತ್ರಕಲೆಯಲ್ಲೂ ಸಂಗೀತದ ನಿನಾದ ಹೊರಹಮ್ಮಿಸಿ, ತಮ್ಮಲ್ಲಿರುವ ಪ್ರಕೃತಿ ಪ್ರೇಮ ತೋರಿಸಿಕೊಟ್ಟಿದ್ದಾರೆ. ಅವರಲ್ಲಿರುವ ಕಲಾಪ್ರೀತಿ ಎಲ್ಲರಿಗೂ ಮಾದರಿಯಾಗಲಿ’ ಎಂದು ಹೇಳಿದರು.

‘ನಾವು ಕಲಿತ ವಿದ್ಯೆಯನ್ನು ದಾನ ಮಾಡಿ, ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲಬೇಕು. ಆಗ ಗುರುವಾದವನಿಗೆ ವಿಶ್ವವನ್ನೇ ಗೆದ್ದಂತಹ ಅನುಭವವಾಗುತ್ತದೆ. ವಿದ್ಯಾರ್ಥಿಗಳು ಸಹ ಪ್ರೀತಿಸಿ ಗೌರವಿಸುತ್ತಾರೆ. ರೇಖಾಚಿತ್ರ ಕಲಾವಿದರಿಗೆ ತಾಯಿ ಇದ್ದಂತೆ. ಕಲ್ಪನೆಯಲ್ಲಿ ಮೂಡಿದ ರೇಖೆ, ನಂತರ ಬಣ್ಣ ಬಳಿದುಕೊಳ್ಳುತ್ತದೆ. ಈ ಕಲೆ ನೀರಿನಷ್ಟೇ ಪವಿತ್ರವಾಗಿ ಸದಾ ಹರಿಯುತ್ತಿರುತ್ತದೆ. ಸಾಹಿತ್ಯ, ಧರ್ಮ, ಸಂಸ್ಕೃತಿ, ಆಚಾರ, ವಿಚಾರ ಹೀಗೆ ಎಲ್ಲದರಲ್ಲೂ ಕಲೆ ಸೇರಿಕೊಂಡಿದೆ. ಅದನ್ನು ಒಳಗಣ್ಣಿನಿಂದ ನೋಡುವ ಸಾಮರ್ಥ್ಯ ನಮ್ಮಲ್ಲಿರಬೇಕು’ ಎಂದರು.

ಕಲಾವಿದ ಆರ್.ಬಿ. ಗರಗ ಮಾತನಾಡಿ, ‘ಜಲವರ್ಣದ ಚಿತ್ರಕಲೆಯಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಆದರೆ, ಈ ದಂಪತಿ ಅದರಲ್ಲಿ ಹಿಡಿತ ಸಾಧಿಸಿದ್ದು, ನಿಸರ್ಗದಲ್ಲಿಯೇ ನಿನಾದ ಹೊರಹೊಮ್ಮಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ವೈ. ನಾಗನಗೌಡರ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಜಯಾನಂದ ಮಾದರ, ಕರಿಯಪ್ಪ ಹಂಚಿನಮನಿ, ಗುರುನಾಥ ಶಾಸ್ತ್ರಿ, ಜಿ.ಆರ್. ಮಲ್ಲಾಪುರ, ಕೆ.ವಿ. ಶಂಕರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here