ಕಸಾಪದಿಂದ ‘ಭಾರತ ಬೆಳಗಿದ ಬಾಬಾಸಾಹೇಬ’ ವಿಶೇಷ ಕಾರ್ಯಕ್ರಮ

0
24

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್  ಅವರ ಚಿಂತನೆಗಳು ಕೇವಲ ದಲಿತ ಸಮುದಾಯಕ್ಕೆ ಮಾತ್ರ ಸೀಮಿತಗೊಳ್ಳದೇ ಸಮಸ್ತ ಶೋಷಿತರ ದನಿಯಾಗಿರುವಂಥವು. ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ಸಮಾನತೆಗಾಗಿ ಹೋರಾಡಿದ ಅಂಬೇಡ್ಕರ್ ಚಿಂತನೆಗಳನ್ನು ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಮಾಜಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಆಯೋಜಿಸಿದ ‘ಭಾರತ ಬೆಳಗಿದ ಬಾಬಾಸಾಹೇಬ’ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಮರತೂರ ಮೌನೇಶ್ವರ ಜಾತ್ರಾ ಮಹೋತ್ಸವ 15 & 16ರಂದು

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಅಂಬೇಡ್ಕರ್ ಹಾಗೂ ಇತರೆ ಭಾರತೀಯ ಚಿಂತಕರು ಮಾನವೀಯ ಮೌಲ್ಯಗಳ ಸಂದೇಶ ಸಾರಲು ಶ್ರಮಿಸಿದ್ದು, ಅವರು ಇಂದು ನಮಗೆಲ್ಲ ಬೆಳಕಾಗಿದ್ದಾರೆ. ಡಾ.ಅಂಬೇಡ್ಕರ್ ಅವರು ಸಮಸ್ತ ಭಾರತೀಯರು ಅಂತರಂಗ, ಬಹಿರಂಗದ ಅವಲೋಕನ ಮಾಡಿಕೊಳ್ಳುವ ಹಾಗೇ ಬದುಕಿದ ಮಹಾಪುರುಷರು. ಇಂಥ ಮಹಾನ್ ವ್ಯಕ್ತಿಗಳನ್ನು ಸೀಮಿತವಾದ ಚೌಕಟ್ಟಿನಲ್ಲಿ ನೋಡದೇ ವಿಶಾಲವಾದ ಆವರಣದ ಅಡಿಯಲ್ಲಿ ನೋಡಬೇಕು ಎಂದು ಹೇಳಿದರು.

ಮಾಜಿ ಉಪ ಮಹಾಪೌರ ನಂದಕುಮಾರ ಮಾಲಿಪಾಟೀಲ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಠಗಿ, ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ರಾಜೇಂದ್ರ ಮಾಡಬೂಳ, ಶಿವಲೀಲಾ ಆರ್.ತೆಗನೂರ ರವಿಂದ್ರಕುಮಾರ ಭಂಟನಳ್ಳಿ, ರಾಜೂಗೌಡ ನಾಗನಳ್ಳಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಸವಿತಾ ಪಾಟೀಲ ಸೊಂತ, ಶಿವಾನಂದ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ದೇವಾಪುರ ಹಿರೇಹಳ್ಳದ ಬಳಿ ಬೈಕ್ ಗುದ್ದಿ ಮಹಿಳೆ ಸಾವು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here