ಅಂಬೇಡ್ಕರ್ ದೇಶದ ಶ್ರಮಿಕ, ಕಾರ್ಮಿಕ, ಶೋಷಿತರ ಶಕ್ತಿಯಾಗಿದ್ದರು

0
32

ಶಹಾಬಾದ:ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಕೇವಲ ದಲಿತ ಸಮುದಾಯದ ಆಶಾಕಿರಣವಾಗಿರಲಿಲ್ಲ. ಬದಲಾಗಿ ಇಡೀ ದೇಶದ ಶ್ರಮಿಕ, ಕಾರ್ಮಿಕ, ಶೋಷಿತರ ಶಕ್ತಿಯಾಗಿದ್ದರು. ಅವರ ಸಂವಿಧಾನದಿಂದಲೇ ಇಂದು ದೇಶ ನಡೆಯುತ್ತಿರುವುದು ಎಂದು ನಗರಸಭೆ ಸದಸ್ಯ ಶರಣು ವಸ್ರ್ತದ ಹೇಳಿದರು.

ಅವರು ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಆಯೋಜಿಸಲಾದ ನಗರದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಡಾ.ಬಿ.ಆರ್.ಅಂಬೇಡ್ಕರ್ ದಮನಿತ ವರ್ಗಗಳ: ಶೋಷಿತರ ಆದರ್ಶ ಚೇತನ

ಡಾ.ಬಿ.ಆರ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಇಂದಿಗೆ ಮುಗಿಯುವುದಿಲ್ಲ. ದೇಶ ಇರುವವರೆಗೂ ಪ್ರಸ್ತುತವಾಗಿರುತ್ತದೆ. ಮನು?ರ ದೃಷ್ಟಿಯಲ್ಲಿ ನಾವೆಲ್ಲಾ ಸಮಾನರು ಎಂಬುದು ಬಂದಾಗ ಅಭಿವೃದ್ಧಿ ಸಾಧಿಸಲು ಸಾಧ್ಯ. ಬಿಜೆಪಿ ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಜ್ಯೋತಿ ಶರ್ಮಾ ಮಾತನಾಡಿ, ಅಂಬೇಡ್ಕರ್ ಅವರು ದೇಶದ ಶ್ರಮಿಕ, ಕಾರ್ಮಿಕ, ಶೋಷಿತರ ಆಶಾಕಿರಣವಾಗಿದ್ದರು. ೧೪೦ ರಾ?ಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಶಿಕ್ಷಣ, ರಾಜಕೀಯ, ಆರ್ಥಿಕ ನೀತಿಗಳು ಅವರು ರೂಪಿಸಿದ್ದಾರೆ ಎಂದರು. ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕನಕಪ್ಪ ದಂಡಗುಲಕರ ಮಾತನಾಡಿದರು.

ಉಪಾಧ್ಯಕ್ಷರಾದ ದುರ್ಗಪ್ಪ ಪವಾರ, ಮಹದೇವ ಗೊಬ್ಬೂರಕರ ಮತ್ತು ಶ್ರೀಧರ್ ಜೋಶಿ, ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಪ್ರಮುಖರಾದ ನಾಗರಾಜ ಮೇಲಗಿರಿ, ನಿಂಗಣ್ಣ ಹುಳಗೋಳಕರ, ಬಸವರಾಜ ಬಿರಾದಾರ, ಲತಾ ಸಂಜೀವ, ಸಂಜಯ ಕೋರೆ, ಶಂಕರ ಬಗಾಡೆ, ದೀನೇಶ ಗೌಳಿ, ರಾಕೇಶ್ ಮಿಶ್ರ, ನಗರಸಭೆ ಸದಸ್ಯರಾದ ರವಿ ರಾಠೋಡ, ಜಗದೀಶ ಸುಬೇದಾರ್, ಪಾರ್ವತಿ ಪವಾರ್, ದತ್ತಾ ಫಂಡ, ಚಂದ್ರಕಾಂತ ಸುಬೆದಾರ, ಸಂತೋ? ಹುಲಿ, ಉಮೇಶ್ ಪೋಚಟ್ಟಿ,ಮನೋಹರ ಮೇತ್ರೇ, ಶ್ರೀನಿವಾಸ ನೇದಲಗಿ, ಪ್ರಭು ಪಾಟೀಲ, ಅನೀಲ ದೋಡಮನಿ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಸಂಜಯ್ ವಿಠಕರ್ ನಿರೂಪಿಸಿ, ಸ್ವಾಗತಿಸಿದರು. ಅಮರ ಕೋರೆ ವಂದಿಸಿದರು.

ಇದನ್ನೂ ಓದಿ: ಡಾ.ಬಿ.ಆರ್.ಅಂಬೇಡ್ಕರ್ ದಮನಿತ ವರ್ಗಗಳ: ಶೋಷಿತರ ಆದರ್ಶ ಚೇತನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here