ಅಂಬೇಡ್ಕರ್ ಜಯಂತ್ಯುತ್ಸವ: ಚಿಂತನೆಗೆ ವೇದಿಕೆಯಾಗಲಿ-ಗುರುರಾಜ ಸಂಗಾವಿ

0
68

ಶಹಾಬಾದ: ಎಲ್ಲ ಧರ್ಮ, ಜಾತಿಗಳಿಗೆ ಸಮಾನತೆ, ಸಮಾನ ಅವಕಾಶ ನೀಡಿದ ಸಂವಿಧಾನ ಕರ್ತೃ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತೋತ್ಸವಗಳು ಕಾಟಾಚಾರಕ್ಕೆ ನಡೆಯದೆ ಅವರ ಬದುಕು, ಆದರ್ಶ, ತತ್ವಗಳ ಗಂಭೀರ ಚಿಂತನೆಗಳ ಚರ್ಚೆಗೆ ವೇದಿಕೆಯಾಗಬೇಕು ಎಂದು ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಹೇಳಿದರು.

ಅವರು ಗುರುವಾರ ನಗರದ ತಹಸೀಲ್ದಾರ ಕಾರ್ಯಾಲಯದಲ್ಲಿ ಆಯೋಜಿಸಲಾದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಹಾಗೂ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಅಂಬೇಡ್ಕರ್ ಜಯಂತಿಯಲ್ಲಿ ಕಸದ ಬುಟ್ಟಿ ವಿತರಣೆ

ಬಡತನದಲ್ಲಿ ಜನಿಸಿ ಹಲವು ನೋವುಗಳ ಮಧ್ಯೆ ತಮ್ಮ ವಿದ್ಯಾಬ್ಯಾಸವನ್ನು ಪಡೆದ ಅಂಬೇಡ್ಕರ್ ಅವರು ಜಗತ್ತಿನ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅಮೇರಿಕಾ, ಇಂಗ್ಯೆಂಡ್, ಐರ್ಲೆಂಡ್ ದೇಶದ ಪ್ರಮುಖ ಅಂಶ ತೆಗೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತ ಸಂವಿಧಾನ ನಮ್ಮ ದೇಶಕ್ಕೆ ಸಮರ್ಪಣೆ ಮಾಡಿದ ಕೀರ್ತಿ ಇದೆ ಎಂದರು. ವ್ಯವಸ್ಥಿತ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ನಾಯಕ ಅಂಬೇಡ್ಕರ್. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲ ವರ್ಗದ ಜನ, ವಿಶೇಷವಾಗಿ ದಲಿತರು ಸಾಗಬೇಕಿದೆ ಎಂದರು.

ಅಹಿಂಸೆಯನ್ನು ಪ್ರಮುಖವಾಗಿ ಬೋಧಿಸಿದ ಧರ್ಮವೇ ಜೈನಧರ್ಮ. ಇದು ಹೆಚ್ಚು ಜನಪ್ರಿಯವಾದದ್ದು ಮಹಾವೀರನಿಂದ. ಭಾರತದ ನೆಲದಲ್ಲಿ ಹುಟ್ಟಿ, ಇಲ್ಲಿಯ ಆಚಾರ-ವಿಚಾರಗಳನ್ನು ಪ್ರಭಾವಿಸಿದ ಮಹಾತ್ಮರಲ್ಲಿ ಮಹಾವೀರ ತೀಥಂಕರನೂ ಒಬ್ಬರು. ಶಾಂತಿ- ಅಹಿಂಸೆ ಸಾರುವ ಜೈನ ಧರ್ಮ ಮಾನವ ಕುಲಕ್ಕೆ ಕಿರೀಟವಿದ್ದಂತೆ, ಭಗವಾನ್ ಮಹಾವೀರರ ತತ್ವ ಸಿದ್ದಾಂತಗಳು ಇಂದಿನ ಪೀಳಿಗೆಗೆ ಅತಿ ಅಗತ್ಯವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅಂಬೇಡ್ಕರ್ ದೇಶದ ಶ್ರಮಿಕ, ಕಾರ್ಮಿಕ, ಶೋಷಿತರ ಶಕ್ತಿಯಾಗಿದ್ದರು

ಶಿರಸ್ತೆದಾರರಾದ ಸಯ್ಯದ್ ಹಾಜಿ, ರವಿಕುಮಾರ, ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ,ಸಯ್ಯದ್ ಖಾದ್ರಿ, ಪಾರ್ವತಿ, ಶ್ರೀನಿವಾಸ, ಗಂಗಾಧರ, ಮಹ್ಮದ್ ಮುನೀರ್,ಗ್ರಾಮ ಲೆಕ್ಕಿಗ ಶಿವಾನಂದ ಹೂಗಾರ, ಬಸವರಾಜ,ಹಾರ ನಿರೀಕ್ಷಕ ಶ್ರೀಕಾಂತ,ರಂಗನಾಥ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here