ಡಾ. ಬಿ.ಆರ್ ಅಂಬೇಡ್ಕರ ಲಿಖಿತ ಭಾರತದ ಸಂವಿಧಾನ ವಿಶ್ವ ಶ್ರೇಷ್ಠವಾದದ್ದು : ಡಾ ಬಸವರಾಜ ಗಾದಗೆ

0
118

ಕಲಬುರಗಿ: ಡಾ ಬಿ ಆರ್ ಅಂಬೇಡ್ಕರ ಲಿಖಿತ ನಮ್ಮ ಸಂವಿಧಾನವು ವಿಶಿಷ್ಟವಾಗಿದ್ದು, ಬೃಹತ್‌ ಹಾಗೂ ವಿಶ್ವ ಶ್ರೇಷ್ಠ ಸಂವಿಧಾನವಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿಯ ಪ್ರಾದೇಶಿಕ ನಿರ್ದೇಶಕರಾದ ಡಾ.ಬಸವರಾಜ ಗಾದಗೆ ಅಭಿಪ್ರಾಯ ಪಟ್ಟರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಲಬುರಗಿಯ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಸಂವಿಧಾನಶಿಲ್ಪಿ ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 131ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಡಾ. ಅಂಬೇಡ್ಕರ ರವರು ರಚಿಸಿರುವ ನಮ್ಮ ಸಂವಿಧಾನದಲ್ಲಿ ದೇಶದ ಒಂದೇ ಜಾತಿ-ಜನಾಂಗಕ್ಕೆ ಮಾತ್ರ ಮೀಸಲಾಗದಂತೆ ಎಲ್ಲಾ ಧರ್ಮ, ಜಾತಿ-ಜನಾಂಗದವರಿಗೆ ಉದ್ಯೋಗಾವಕಾಶಗಳು, ಇತರೆ ಸೌಲಭ್ಯ ಹಾಗೂ ಸರ್ವಾಂಗೀಣ ಹಕ್ಕುಗಳು ಸಮಾನವಾಗಿರುವಂತೆ ಕಾನೂನು ರಚಿಸಿದ್ದಾರೆ ಎಂದು ಡಾ. ಗಾದಗೆ ನುಡಿದರು.

Contact Your\'s Advertisement; 9902492681

ಇದನ್ನೂ ಓದಿ: ವಿಶ್ವರತ್ನ ಘನ ಪಂಡಿತ ಡಾ. ಬಿ.ಆರ್. ಅಂಬೇಡ್ಕರ್: ಚಂದ್ರಶೇಖರ್ ಕಟ್ಟಿಮನಿ

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ ಯಶವಂತರಾಯ ಅಷ್ಠಗಿ ಯವರು ಮಾತನಾಡಿ ಡಾ ಬಿ ಆರ್ ಅಂಬೇಡ್ಕರರು ಆಧುನಿಕ ಭಾರತದ ಶಿಲ್ಪಿಯಾಗಿದ್ದು, ಅವರು ಅಪರಿಮಿತ ಕಷ್ಟ ,ನೋವು ಸಹಿಸಿಕೊಂಡು ಈ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬುನಾದಿಗೆ ಸಂವಿಧಾನ ಮೂಲಕ ಭದ್ರ ಅಡಿಪಾಯ ಹಾಕಿದ್ದಾರೆ ಎಂದು ಪ್ರೊ. ಅಷ್ಠಗಿ ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಲೇಖಕ- ಸಾಹಿತಿ ಡಾ.ಕೆ ಗಿರಿಮಲ್ಲ ಮಾತನಾಡಿ, ಭಾರತದ ಎಲ್ಲಾ ಧರ್ಮ, ಜಾತಿ-ಜನಾಂಗದವರಿಗೆ ಸಮಾನವಾಗಿ ಹಕ್ಕುಗಳು ಸೇರಿಂದಂತೆ ಮೀಸಲಾತಿಯ ಸೌಲಭ್ಯಗಳನ್ನು ದೇಶದ ಆರ್ಥಿಕ ಪ್ರಗತಿಗಾಗಿ ಸಂವಿಧಾನದಲ್ಲಿ ನೀಡಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾವಂತರು, ಯುವಕರು ಡಾ.ಅಂಬೇಡ್ಕರ್‌ ಅವರು ರಚಿಸಿರುವ ನಮ್ಮ ಸಂವಿಧಾನದ ಮಹತ್ವ ಅರಿತುಕೊಂಡು ಸಂವಿಧಾನದಲ್ಲಿರುವ ನಾನಾ ಹಕ್ಕುಗಳನ್ನು ಸದುಪಯೋಗಿಸಿಕೊಳ್ಳಬೇಕೆಂದು ಡಾ.ಕೆ ಗಿರಿಮಲ್ಲ ಸಲಹೆ ನೀಡಿದರು.

ಇದನ್ನೂ ಓದಿ: ಸಾಹಿತಿ ಸಾಯಿಲಕ್ಷ್ಮಿ.ಎಸ್ ಬದುಕಿನ ಒಂದು ಮಜಲೂ

ಕಾರ್ಯಕ್ರಮದಲ್ಲಿ, ಪ್ರಾಧ್ಯಾಪಕರಾದ ಡಾ.ಶುಭಾಂಗಿ ಪಾಟೀಲ, ಸಹಾಯಕ ಪ್ರಾಧ್ಯಾಪಕರಾದ ಡಾ ಶಿವರಾಮಗೌಡ, ಡಾ ರೇಖಾ ಪಾಟೀಲ,ಡಾ.ಶೈಲಜಾ ಖೇಣಿ, ಪ್ರೊ. ಬಾಬು ರೆಡ್ಡಿ, ಬ್ರೀಜಭೂಷಣ, ಸಂಜಯ ಪಟ್ಟಣಶೇಟ್ಟಿ,ರಾಜಶೇಖರ, ಮಂಜುನಾಥ ಅವಲಕ್ಕಿ, ಅಂಬಾದಾಸ, ಭಾರತಿ, ರಾಹುಲ ಮೂಲಭಾರತಿ,ಸ್ವರೂಪಾರಾಣಿ, ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here