ಕಸಾಪ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರೊ. ಯಶವಂತರಾಯ ಅಷ್ಠಗಿಗೆ ಸನ್ಮಾನ

0
332

ನಮ್ಮ ವಿಶ್ವವಿದ್ಯಾಲಯದಲ್ಲಿ ಅತ್ತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಪ್ರೊ ಯಶವಂತರಾಯ ಅಷ್ಠಗಿಯವರಿಗೆ ಕನ್ನಡ ನಾಡು ನುಡಿ ಕಟ್ಟುವ ಮಹತ್ವದ ಜವಾಬ್ದಾರಿ ನೀಡಿರುವುದು ಸಂತಸ ತಂದಿದೆ. -ಡಾ.ಶುಭಾಂಗಿ ಪಾಟೀಲ, ಮುಖ್ಯಸ್ಥರು,ಕಂಪೂಟರ್ ಸೈನ್ಸ ವಿಭಾಗ, ವಿತಾವಿ ಪ್ರಾದೇಶಿಕ ಕೇಂದ್ರ ಕಲಬುರಗಿ

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಕಲಬುರಗಿ ನೂತನ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಕ್ರಿಯಾಶೀಲ ವ್ಯಕ್ತಿತ್ವ ಲೇಖಕ ಹಾಗೂ ಸಂಘಟಕ ಪ್ರೊ ಯಶವಂತರಾಯ ಅಷ್ಠಗಿ ಅವರನ್ನು ವಿತಾವಿಯ ಸಭಾ ಭವನದಲ್ಲಿ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಡಾ.ಬಸವರಾಜ ಗಾದಗೆ ಹಾಗೂ ಪ್ರಾಧ್ಯಾಪಕರು ಮತ್ತು ಸಾಹಿತ್ಯಾಭಿಮಾನಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಬಸವರಾಜ ಗಾದಗೆ, ಆಂಗ್ಲ ಭಾಷೆಯನ್ನು ಕಲಿಸುವ ಧಾವಂತದಲ್ಲಿರುವ ಪೋಷಕರು ತಮ್ಮ ಮಕ್ಕಳನ್ನು ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ, ಕನ್ನಡ ಕಲಿಯಲು ಪ್ರೋತ್ಸಾಹ ನೀಡಲು ಮುಂದಾಗಬೇಕು. ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮನಾಗಬೇಕು ಎಂಬುದನ್ನು ಯಾರು ಮರೆಯಬಾರದು ಎಂದು ಅಭಿಪ್ರಾಯಸಿದರು.

Contact Your\'s Advertisement; 9902492681

ಇದನ್ನೂ ಓದಿ: ದಿ.ವಿಠಲ ಹೇರೂರ ಜನ್ಮದಿನದ ನಿಮಿತ್ತ ಕೋಲಿ ಕಬ್ಬಲಿಗ ಗಣ್ಯರಿಗೆ ಸನ್ಮಾನ

ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ ಯಶವಂತರಾಯ ಅಷ್ಠಗಿ, ಜಿಲ್ಲೆಯಲ್ಲಿರುವ ಸಾಹಿತಿಗಳು-ಲೇಖಕರು ಬುದ್ಧಿಜೀವಿಗಳು, ಕನ್ನಡದ ಕಟ್ಟಾಗಳೋಂದಿಗೆ ಸೇರಿ ಎಲ್ಲರ ಸಲಹೆ, ಸೂಚನೆ ಮೇರೆಗೆ ಕ್ರಿಯಾಶೀಲವಾಗಿ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿಯವರ ಜೋತೆಗೂಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಜಿಲ್ಲೆಯಾದ್ಯಂತ ಕನ್ನಡ ನಾಡು- ನುಡಿ ಕಟ್ಟುವ ಕೆಲಸ ಮಾಡುವೆ ಎಂದು ನುಡಿದರು.

ಈ ಸಂದರ್ಭದಲ್ಲಿ ಸಾಹಿತಿ ಡಾ. ಕೆ. ಗಿರಿಮಲ್ಲ, ವಿತಾವಿ ಕಂಪೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಶುಭಾಂಗಿ ಪಾಟೀಲ, ಸಹಾಯಕ ಪ್ರಾಧ್ಯಾಪಕರಾದ ಡಾ ಶಿವರಾಮಗೌಡ, ಡಾ.ರೇಖಾ ಪಾಟೀಲ, ಡಾ.ಶೈಲಜಾ ಖೇಣಿ, ಪ್ರೊ. ಬಾಬು ರೆಡ್ಡಿ, ಪ್ರೊ ಬ್ರಿಜಭೂಷಣ, ಪ್ರೊ ಸಂಜಯ ಪಟ್ಟಣಶೇಟ್ಟಿ, ಪ್ರೊ ಆನಂದ ಮಾಲಿಪಾಟೀಲ,ಪ್ರೊ ರಾಜಶೇಖರ, ಪ್ರೊ.ಮಂಜುನಾಥ ಅವಲಕ್ಕಿ, ಪ್ರೊ ಅಂಬಾದಾಸ, ಪ್ರೊ ಭಾರತಿ ಪೋಚಾರ, ಪ್ರೊ ರಾಹುಲ ಮೂಲಭಾರತಿ, ಪ್ರೊ ಅಂಬರೀಶ ಭದ್ರಶೇಟ್ಟಿ, ಪ್ರೊ ಸ್ವರೂಪಾರಾಣಿ, ಭಿಯಂತರರಾದ ಶ್ರೀಧರ ನವಲೆ, ವಿಜಯಕುಮಾರ ಕೋಟ್ಟರಗಿ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಮಳಿಗೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ಆದೇಶ ಹೊರಡಿಸಲು ಆಗ್ರಹ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here